Kannada Oota ಉಪಹಾರ

PUDINA PALAV ಪುದೀನ ಪಲಾವ್

ಲಂಚ್ ಬಾಕ್ಸ್ ಗೆ ಹಾಕಲು ಸೂಕ್ತವಾದ ಆಹಾರ! ಸುಲಭ, ರುಚಿಕರ!

ಮಾಡುವ ವಿಧಾನ:-

ತರಕಾರಿಗಳನ್ನು ತೊಳೆದು ಹೆಚ್ಚಿಡಿ.

1 ಹೋಳು ತೆಂಗಿನ ಕಾಯಿ ತುರಿಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಸೋಸಿ, ಕಾಯಿ ಹಾಲು ತೆಗೆದಿಡಿ. 1 ಸಲ ರುಬ್ಬಿ ಸೋಸಿ ಕೊಂಡು, ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಿ ಹಾಲು ಸೋಸಿಕೊಳ್ಳಿ.

   

1 ಕಟ್ಟು ಪುದೀನ, 1/2 ಕಟ್ಟು ಕೊತ್ತಂಬರಿ ಸೊಪ್ಪು, 4 ಹಸಿ ಮೆಣಸಿನ ಕಾಯಿ, 1 ಗೆಡ್ಡೆ ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಲವಂಗ, 2 ಏಲಕ್ಕಿ, 1 ಇಂಚು ಚಕ್ಕೆ ಹಾಕಿ, ಸ್ವಲ್ಪ ನೀರು (2 ಚಮಚದಷ್ಟು) ಹಾಕಿ, ತರಿ ತರಿಯಾಗಿ ರುಬ್ಬಿ ಕೊಳ್ಳಿ. ಮೊದಲು ಬೆಳ್ಳುಳ್ಳಿ ಮಿಕ್ಕದ್ದನ್ನು ಸ್ವಲ್ಪ ರುಬ್ಬಿ, ಸೊಪ್ಪನ್ನು ಕೊನೆಯಲ್ಲಿ ಹಾಕಿ ರುಬ್ಬಿಕೊಳ್ಳಿ‌.

   

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ತರಕಾರಿಗಳನ್ನು ಹಾಕಿ ಹುರಿದು, ತೊಳೆದ 1 ಲೋಟ ಬಾಸುಮತಿ ಅಕ್ಕಿ ಹಾಕಿ 2 ನಿಮಿಷ ಹುರಿದು, ರುಬ್ಬಿದ ಮಿಶ್ರಣ, ಉಪ್ಪು, ಕಾಯಿ ಹಾಲು + ನೀರು ಎರಡು ಸೇರಿಸಿ 2 ಲೋಟ ಹಾಕಿ, ಚೆನ್ನಾಗಿ ಕಲೆಸಿ ಮುಚ್ಚಳ ಹಾಕಿ 1 ವಿಷಲ್ ಕೂಗಿಸಿ ತಣ್ಣಗಾದ ಮೇಲೆ ಮತ್ತೊಮ್ಮೆ ಕಲೆಸಿ, ಮೊಸರು ಬಜ್ಜಿ ಜೊತೆ ಬಡಿಸಿ.

ಕಾಯಿ ಹಾಲು ಹಾಕದೆ ಸಹ ಮಾಡಬಹುದು. ಕಾಯಿ ಹಾಲು ಹಾಕಿದರೆ ರುಚಿ ಹೆಚ್ಚುತ್ತೆ. ಮೊದಲೆ ಪುದೀನ ಸೊಪ್ಪು ರುಬ್ಬಿ ಇಡಬೇಡಿ. ರುಬ್ಬಿದ ತಕ್ಷಣ ಬೇಯಲು ಹಾಕಿ, ಮೊದಲೇ ರುಬ್ಬಿಟ್ಟರೆ ಕಪ್ಪಗೆ ಆಗುತ್ತೆ.

ಧನ್ಯವಾದಗಳು

Leave a Reply

Your email address will not be published.