ನಾಗರ ಪಂಚಮಿಯಲ್ಲಿ ತಪ್ಪದೆ ಮಾಡುವ ಉಂಡೆ. ಸಾಧಾರಣವಾಗಿ ಕಡಲೇ ಬೀಜದ ಉಂಡೆಯನ್ನು ಬೆಲ್ಲದ ಪಾಕ ತೆಗೆದು ಮಾಡುತ್ತಾರೆ. ಈ ರೆಸಿಪಿ ಬಹಳ ಸುಲಭ!ಮಾಡುವ ವಿಧಾನ:-
1 ಲೋಟ ಬೆಲ್ಲ ಪುಡಿ ಮಾಡಿಡಿ.
1 ಲೊಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿ.


ನಂತರ ಬೆಲ್ಲದ ಪುಡಿ ಸೇರಿಸಿ ಮತ್ತೊಮ್ಮೆ Mixie ಯಲ್ಲಿ 2 ಸುತ್ತು ಸುತ್ತಿ ತೆಗೆದು ಕಲೆಸಿ ಉಂಡೆ ಮಾಡಿಡಿ.
ಹೀಗೆ ಪುಡಿ ಮಾಡಿ ಉಂಡೆ ಮಾಡಿದರೆ ಸುಲಭವಾಗಿ ಮಾಡಬಹುದು, ಅಲ್ಲದೆ ವಯಸ್ಸಾದವರು ಕೂಡಾ ಈ ಉಂಡೆಯ ರುಚಿ ನೋಡಬಹುದು!
ಧನ್ಯವಾದಗಳು.
