METHI MALAI MATAR ಮೇಥಿ ಮಲೈ ಮಟರ್
ಮೆಂತ್ಯ ಸೊಪ್ಪಿನ ಪ್ರಿಯರೆ! ನೋಡಿ ಸೊಪ್ಪಿನ ರುಚಿಯಾದ, ಘಮ ಘಮಿಸುವ ಗ್ರೇವಿ ರೆಸಿಪಿ ಇಲ್ಲಿದೆ:-
ಮಾಡುವ ವಿಧಾನ:-
ಎರಡು ಕಟ್ಟು ಮೆಂತ್ಯ ಸೊಪ್ಪು ಸಣ್ಣಗೆ ಹೆಚ್ಚಿ ಒಂದು ಚಮಚ ಎಣ್ಣೆ ಹಾಕಿ ಹುರಿದಿಡಿ.
ಅರ್ಧ ಬಟ್ಟಲು ಹಸಿ ಬಟಾಣಿ ಬೇಯಿಸಿಡಿ.

ಒಂದು ಚಿಕ್ಕ ಈರುಳ್ಳಿ, ನಾಲ್ಕು ಹಸಿ ಮೆಣಸಿನಕಾಯಿ, ನಾಲ್ಕು ಎಸಳು ಬೆಳ್ಳುಳ್ಳಿ, ಅರ್ಧ ಇಂಚು ಸಿಪ್ಪೆ ತೆಗೆದ ಶುಂಠಿ ಸ್ವಲ್ಪ ಎಣ್ಣೆ ಹಾಕಿ ಹುರಿದು ನೆನೆಸಿದ ಕಾಲು ಕಪ್ ಗೋಡಂಬಿ ಜೊತೆಗೆ ನುಣ್ಣಗೆ ರುಬ್ಬಿಡಿ.



ಬಾಣಲೆಯಲ್ಲಿ ಎರಡು ಚಮಚ ಬೆಣ್ಣೆ/ ಎಣ್ಣೆ ಹಾಕಿ , ಜೀರಿಗೆ ಹಾಕಿ ಹುರಿದು ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಎಣ್ಣೆ ಮೇಲೆ ತೇಲುವವರೆಗೆ ಕುದಿಸಿ, ಅರ್ಧ ಚಿಕ್ಕ ಚಮಚ ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಮೆಂತ್ಯ ಸೊಪ್ಪು, ಬಟಾಣಿ ಸ್ವಲ್ಪ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಅರ್ಧ ಕಪ್ ಫ್ರೆಶ್ ಕ್ರೀಮ್ ಹಾಕಿ ಕಲೆಸಿದರೆ, ರುಚಿಯಾದ, ಬಾಯಲ್ಲಿ ನೀರೂರಿಸುವ ಮೇಥಿ ಮಲೈ ಮಟರ್ ಸವಿಯಲು ಸಿದ್ಧ!

ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ರಿಚ್ ಗ್ರೇವಿ. ಫ್ರೆಶ್ ಕ್ರೀಮ್, ಗೋಡಂಬಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು.
ಧನ್ಯವಾದಗಳು 🙏🙏🙏
