ಸಿಹಿ ತಿನಿಸುಗಳು

CHOCOLATE PADDU CAKE ಚಾಕೊಲೇಟ್ ಪಡ್ಡು ಕೇಕ್

CHOCOLATE PADDU CAKE ಚಾಕೊಲೇಟ್ ಪಡ್ಡು ಕೇಕ್

ಕೇಕ್ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ, ಪುಟ್ಟ ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಮೈದಾ – 1 ಕಪ್
ಸಕ್ಕರೆ ಪುಡಿ – 1/4 ಕಪ್
ಚಾಕೊಲೇಟ್ ಸಾಸ್ – 1/4 ಕಪ್
ತುಪ್ಪ – 1/4 ಕಪ್
ಹಾಲು – 1/4 ಕಪ್
ಸೋಡಾ / ಬೇಕಿಂಗ್ ಪೌಡರ್ – ಅರ್ಧ ಟೀ ಚಮಚ
ಗೋಡಂಬಿ, ಬಾದಾಮಿ ಪುಡಿ – ಸ್ವಲ್ಪ

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ( ಗೋಡಂಬಿ, ಬಾದಾಮಿ ಹೊರತು) ಹಾಕಿ ಚೆನ್ನಾಗಿ ಗಂಟಿಲ್ಲದ ಹಾಗೆ ಕಲೆಸಿ. ಇಡ್ಲಿ ಹಿಟ್ಟಿನ ಹದಕ್ಕೆ ಈ ಮಿಶ್ರಣ ಇರಬೇಕು. ಹಾಲು ಹೆಚ್ಚು ಕಡಿಮೆ ನೋಡಿ ಕೊಂಡು ಹಾಕಿ ಹದ ಅಡ್ಜಸ್ಟ್ ಮಾಡಿಕೊಳ್ಳಿ.

ಪಡ್ಡು ಮಾಡುವ ತವಾಗೆ ಚೆನ್ನಾಗಿ ತುಪ್ಪ ಸವರಿ, ಮುಕ್ಕಾಲು ಭಾಗ ತುಂಬುವಷ್ಟು ಮಿಶ್ರಣ ತುಂಬಿ, ಮೇಲೆ ಸ್ವಲ್ಪ ಗೋಡಂಬಿ, ಬಾದಾಮಿ ಪುಡಿ ಉದುರಿಸಿ, ತಟ್ಟೆ ಮುಚ್ಚಿ ಒಲೆಯ ಮೇಲಿಟ್ಟು ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.

ನಂತರ ಎಚ್ಚರಿಕೆಯಿಂದ ತಿರುವಿ ಹಾಕಿ ತಟ್ಟೆ ಮುಚ್ಚಿ ಒಂದು ಅಥವಾ ಎರಡು ನಿಮಿಷ ಬೇಯಿಸಿ, ತೆಗೆದು ಮೇಲೆ ಇನ್ನೂ ಸ್ವಲ್ಪ ಚಾಕೊಲೇಟ್ ಸಾಸ್ ಹರಡಿ, ಮೇಲೆ ಗೋಡಂಬಿ ಬಾದಾಮಿ ಪುಡಿ ಉದುರಿಸಿದರೆ ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ಚಾಕೊಲೇಟ್ ಪಡ್ಡು ಕೇಕ್ ಸವಿಯಲು ಸಿದ್ಧ !

ಸಕ್ಕರೆ ಮತ್ತು ಚಾಕೊಲೇಟ್ ಸಾಸ್ ಎರಡೂ ಹಾಕುವುದರಿಂದ ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು. ಚಾಕೊಲೇಟ್ ಸಾಸ್ ಬದಲು ಕೋಕೋ ಪೌಡರ್ 1/4 ಕಪ್ ಗಿಂತ ಸ್ವಲ್ಪ ಕಡಿಮೆ ಹಾಕಿ ಮಾಡಬಹುದು. ಹೆಚ್ಚು ಹಾಕಿದರೆ ಕಹಿ ಬರುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.