#ಥೀಮ್ ಪಾಯಸ #
ಉತ್ತರ ಭಾರತದ ಬಹು ಜನಪ್ರಿಯ ಪಾಯಸ( ಖೀರ್)! ಮಾಡುವುದು ತುಂಬಾ ಸುಲಭ! ಅವರು ಹಬ್ಬಗಳಲ್ಲಿ ತಪ್ಪದೆ ಮಾಡುತ್ತಾರೆ! ಹಾಗಾದರೆ ಸಿಹಿ ಪಾಯಸದ ರೆಸಿಪಿ ನೋಡೋಣವೇ?
ಚಾಕೊಲೇಟ್ ಫಿರ್ನಿ ಮಾಡುವ ವಿಧಾನ:-
2 ಚಮಚ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿ ಹಾಲು ಕುದಿಯಲು ಇಡಿ. ಹಾಲು ಕುದಿಸಿ 1/2 ದಷ್ಟು ಆದಾಗ ರುಬ್ಬಿದ ಅಕ್ಕಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.


ಅಕ್ಕಿ ರುಬ್ಬಿರುವುದರಿಂದ ಬೇಗನೆ ಬೇಯುತ್ತದೆ. ಅಕ್ಕಿ ಪೂರ್ತಿ ಬೆಂದ ಮೇಲೆ 4 ಚಮಚ ಚಾಕೊಲೇಟ್ ಸಾಸ್ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ ಕಲೆಸಿ ತಣ್ಣಗಾದ ಮೇಲೆ Fridge ನಲ್ಲಿ 1 ಗಂಟೆ ಕಾಲ ಇಟ್ಟು ನಂತರ ತಿನ್ನಲು ಕೊಡಿ.
ಈ ಪಾಯಸವನ್ನು ಬಿಸಿಯಾಗಿ ಬೇಕಾದರೂ ತಿನ್ನಬಹುದು! ತಣ್ಣಗಾದ ಮೇಲೆ ಬೇಕಾದರೂ ತಿನ್ನಬಹುದು. ಬಡಿಸುವಾಗ ಪುಟ್ಟ ಪುಟ್ಟ ಮಣ್ಣಿನ ಕುಡಿಕೆಗಳಲ್ಲಿ ಕೊಟ್ಟರೆ ತುಂಬಾ ಚೆನ್ನಾಗಿರುತ್ತೆ. ಚಾಕೊಲೇಟ್ ಸಾಸ್ ಹಾಕಿರುವುದರಿಂದ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಇದೆ ಪಾಯಸಕ್ಕೆ ಚಾಕೊಲೇಟ್ ಸಾಸ್ ಬದಲು ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಬೇಕಾದರೂ ಮಾಡಬಹುದು. ನಾನು ಎರಡೂ ತರಹ ಮಾಡಿದ್ದೇನೆ.
ಈ ಪಾಯಸಕ್ಕೆ ಸಕ್ಕರೆ ಸೇರಿಸುವ ಮೊದಲು ಸ್ವಲ್ಪ ತೆಗೆದಿಟ್ಟು, Sugar Free (Sugar Substitute) tablets ಹಾಕಿ ಕೊಟ್ಟರೆ ಮನೆಯಲ್ಲಿರುವ ಮಧುಮೇಹಿಗಳು ಕೂಡಾ ಈ ರೈಸ್ ಫಿರ್ನಿಯ ರುಚಿ ನೋಡಬಹುದು!

ಧನ್ಯವಾದಗಳು🙏🙏🙏
