Oota ಉಪಹಾರ

TOMATO PALAV ಟೋಮೇಟೋ ಪಲಾವ್

ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಟೋಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿಡಿ.

1 ಲೋಟ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹಸಿ ಬಟಾಣಿ ಸ್ವಲ್ಪ ಬಿಡಿಸಿಡಿ.

ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಪಲಾವ್ ಎಲೆ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, ಒಂದು ಅನಾನಸ್ ಹೂವು, 1 ಮರಾಠಿ ಮೊಗ್ಗು, ಬಟಾಣಿ, ಪುದೀನಾ ಹಾಕಿ ಸ್ವಲ್ಪ ಬಾಡಿಸಿ.

ನಂತರ ಬಾಸುಮತಿ ಅಕ್ಕಿ, 1 ಚಮಚ ಖಾರದ ಪುಡಿ, ರುಬ್ಬಿದ ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ. ನಂತರ ಒಂದೂವರೆ ಲೋಟ ನೀರು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ, ಟೋಮೇಟೋ ಪಲಾವ್ ಸಿದ್ಧ!

ಟೋಮೇಟೋ ರಸ ಮತ್ತು ನೀರು ಎರಡೂ ಸೇರಿಸಿ ಎರಡು ಲೋಟ ಆಗಬೇಕು. ಅಳತೆ ಮಾಡಿ ಹಾಕಿ.

ನಾನು ಬೆಳ್ಳುಳ್ಳಿ ಹಾಕಿಲ್ಲ. ಬೇಕಾದವರು ಹಾಕಬಹುದು.

ಧನ್ಯವಾದಗಳು

Leave a Reply

Your email address will not be published.