ಮಾವಿನಕಾಯಿ ಸಿಗುವ ಸೀಸನ್ ನಲ್ಲಿ ಮಾಡಿ ನೋಡಿ! ರುಚಿ ಅದ್ಭುತವಾಗಿರುತ್ತದೆ. ಬಿಸಿ ಅನ್ನದ ಜೊತೆಗೆ ಅಥವಾ ಹಾಗೆ ಬಿಸಿ ಬಿಸಿಯಾಗಿ ಕುಡಿಯಲು ತುಂಬಾ ಚೆನ್ನಾಗಿರುತ್ತದೆ!
ಪೂರ್ವ ತಯಾರಿ :- 15 ನಿಮಿಷ
ಕುಕಿಂಗ್ ಸಮಯ :- 5 ನಿಮಿಷ
ಬೇಕಾಗುವ ಸಾಮಗ್ರಿಗಳು :-
ತೊಗರಿ ಬೇಳೆ – ಚಿಕ್ಕದು 1/2 ಕಪ್
ಮಾವಿನ ಕಾಯಿ ತುರಿ – 1/2 ಕಪ್
ರಸಂ ಪುಡಿ – 3 ಚಮಚ
ಮೆಣಸು ಜೀರಿಗೆ – 1 ಚಮಚ (ಹುರಿದು ತರಿ ತರಿಯಾಗಿ ಪುಡಿ ಮಾಡಿದ್ದು)
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಅಡಿಕೆ ಗಾತ್ರ
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೇಬಲ್ ಚಮಚ
ಕರಿಬೇವು – 2 ಎಸಳು
ಮಾಡುವ ವಿಧಾನ:-
1/2 ಕಪ್ ತೊಗರಿ ಬೇಳೆ ತೊಳೆದು ಒಂದು ಚಮಚ ಎಣ್ಣೆ, ಚಿಟಿಕೆ ಅರಿಷಿಣ ಹಾಕಿ ಚೆನ್ನಾಗಿ ಬೇಯಿಸಿ, ತಣ್ಣಗಾದ ಮೇಲೆ ಸ್ವಲ್ಪ ನೀರು ಸೇರಿಸಿ ಕಡೆದು ಇಡಿ.
ಇದಕ್ಕೆ ರಸಂ ಪುಡಿ, ಉಪ್ಪು, ಬೆಲ್ಲ, ಮಾವಿನ ತುರಿ ಹಾಕಿ ಕುದಿಯಲು ಇಡಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಕುದಿಯುತ್ತಿರುವ ರಸಂಗೆ ಸೇರಿಸಿ ಒಲೆಯಿಂದ ಇಳಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಸಾರು ಸವಿಯಲು ಸಿದ್ಧ!
ನೀವು ಹೆಚ್ಚು ಹುಳಿ ಪ್ರಿಯರಾದರೆ ಸ್ವಲ್ಪ ಹುಣಿಸೆ ರಸ ಸೇರಿಸಿ. ಸಿಹಿ ಪ್ರಿಯರಾದರೆ ಸ್ವಲ್ಪ ಬೆಲ್ಲ ಹೆಚ್ಚು ಹಾಕಿ ಮಾಡಿ. ನಾನು ಹಾಕಿರುವುದು ದೋರೆ ಗಾಯಿ! ರುಚಿ ಸೂಪರ್ ಆಗಿದೆ!
ಧನ್ಯವಾದಗಳು ![]()
![]()
![]()