ಉಪವಾಸ ಇರುವ ದಿನಗಳಲ್ಲಿ ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೃದುವಾಗಿ, ರುಚಿಯಾಗಿ ಇರುತ್ತದೆ!
ಮಾಡುವ ವಿಧಾನ:-
2 ಅಳತೆ ಗಟ್ಟಿ ಅವಲಕ್ಕಿಯನ್ನು ತೊಳೆದು 1 ಗಂಟೆ ನೆನೆಸಿಡಿ.
1 ಅಳತೆ ಹೆಸರು ಬೇಳೆ 2 ಗಂಟೆ ನೆನೆಸಿಡಿ.

4 ಚಮಚ ಕಾಯಿ ತುರಿದಿಡಿ.
ನೆಂದ ಹೆಸರು ಬೇಳೆ, ಗಟ್ಟಿ ಅವಲಕ್ಕಿ, ಕಾಯಿ ತುರಿ, 4 ಹಸಿ ಮೆಣಸಿನಕಾಯಿ, 1 ಟೀ ಚಮಚ ಜೀರಿಗೆ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಡಿ.
ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿಡಿ.
ಕಾದ ಕಾವಲಿಯ ಮೇಲೆ ತೆಳ್ಳಗೆ ದೋಸೆ ಹರಡಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ, ರುಚಿಯಾದ, ಮೃದುವಾದ ಅವಲಕ್ಕಿ ದೋಸೆ ಸಿದ್ಧ! ನಿಮಗೆ ಇಷ್ಟವಾಗುವ ಯಾವುದಾದರೂ ಚಟ್ನಿಯೊಂದಿಗೆ ಸವಿಯಿರಿ!

ಈ ದೋಸೆ ಮೇಲೆ ಭಾಗ ಗರಿ ಗರಿಯಾಗಿ, ಒಳಗಡೆ ಮೃದುವಾಗಿ ಇರುತ್ತದೆ!
ಈ ದೋಸೆ ಉದುಗು ಬರುವಂತಿಲ್ಲ! ಆಗ ರುಬ್ಬಿ ತಕ್ಷಣ ಮಾಡುವುದು!
ಧನ್ಯವಾದಗಳು![]()
![]()
![]()