Showing 253 Result(s)
Kannada ಚಾಟ್ಸ್

SPECIAL BHEL PURI ಸ್ಪೆಷಲ್ ಭೇಲ್ ಪೂರಿ

ಎಲ್ಲರಿಗೂ ಇಷ್ಟವಾಗುವ ವಿಶೇಷ ರುಚಿಯ ಚಾಟ್! ದೊಡ್ಡ ದೊಡ್ಡ ಹೋಟೆಲ್ ಗಳಲ್ಲೂ, ರಸ್ತೆ ಬದಿಯ ತಳ್ಳುಗಾಡಿಯಲ್ಲೂ ಸಿಗುತ್ತದೆ! ಹಾಗಾದರೆ ತಡ ಏಕೆ ಅದರ ರೆಸಿಪಿ ನೋಡೋಣವೇ? ಮಾಡುವ ವಿಧಾನ:- 1 ಲೀಟರ್ ಕಡಲೇ ಪುರಿ ( ಮಂಡಕ್ಕಿ ) ಯನ್ನು ಸ್ವಲ್ಪ ಆರಿಸಿಡಿ. 1 ಈರುಳ್ಳಿ, 2 ಟೋಮೋಟೋ, 1/2 ಸೌತೇ ಕಾಯಿ ಸಣ್ಣಗೆ ಹೆಚ್ಚಿಡಿ. 1 ಕ್ಯಾರೆಟ್, 1/2 ತೋತಾಪುರಿ ಮಾವಿನ ಕಾಯಿ ತುರಿದಿಡಿ. ಮಾವಿನ ಕಾಯಿ ಸಿಗದಿದ್ದರೆ ನಿಂಬೆ ರಸ ಹಾಕಿಕೊಳ್ಳಬಹುದು.      …

Kannada ಉಪಹಾರ

BEETROOT POORI ಬೀಟ್ ರೂಟ್ ಪೂರಿ

ಬೀಟ್ ರೂಟ್ ಒಂದು ಆರೋಗ್ಯಕರ ತರಕಾರಿ, ಅದರಲ್ಲಿ fibre, iron, manganese, potassium ಬೇಕಾದಷ್ಟು ತುಂಬಿದೆ, ಅಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಈ ಬೀಟ್ ರೂಟಿಗಿದೆ, ಆದರೆ ನಮ್ಮ ಮುದ್ದು ಮಕ್ಕಳು ಇದನ್ನು ತಿನ್ನುವುದಿಲ್ಲ, ಮಕ್ಕಳೇ ಏನು ದೊಡ್ಡವರೇ ತಿನ್ನುವುದಿಲ್ಲ, ಹಾಗಾದರೆ ಅಂಥವರಿಗಾಗಿ ಬೀಟ್ ರೂಟಿನ ಪೂರಿ ಮಾಡಿ ಕೊಡಿ, ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಬೀಟ್ ರೂಟ್ ಪೂರಿ ಮಾಡುವ ವಿಧಾನ:-  ಸಿಪ್ಪೆ ತೆಗೆದು ಬೀಟ್ ರೂಟನ್ನು ತುರಿದು ರುಬ್ಬಿ ಕೊಳ್ಳಿ, 1 ಬಟ್ಟಲು ಗೋಧಿ …

Kannada Tindi Tinisu ಖಾರ ತಿನಿಸುಗಳು

MASALA VADE ಮಸಾಲೆ ವಡೆ

ಆಹಾ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ನಮ್ಮ ವಡೆಯದು!ನಮಗೆ ಗೊತ್ತು ಈ ರೆಸಿಪಿ ಅಂದಿರಾ!? ಸರಿ ಬಿಡಿ ಹೊಸದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗುತ್ತದೆ! ಅವರು ನೋಡಿ ಮಾಡಿ ಕೊಡುತ್ತಾರೆ ! ನಾವೆಲ್ಲ ತಿನ್ನೋಣ! ಮಾಡುವ ವಿಧಾನ:- 1 ಪಾವು ಕಡಲೇ ಬೇಳೆ ತೊಳೆದು 2 ಗಂಟೆ ಕಾಲ ನೆನೆಸಿಡಿ. 1 ಪಾವು ಅಂದರೆ 1/4 kg ಗಿಂತ ಚೂರು ಕಡಿಮೆ ಅಷ್ಟೇ! 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಇಂಚು …

Kannada ಉಪಹಾರ

GODHI ROTTI ಗೋಧಿ ರೊಟ್ಟಿ

ಚಪಾತಿ ತಿನ್ನಲು ಬೇಸರವಾದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ ನಿಮಗೆ ಬೇಕಾಗುವಷ್ಟು ಸೊಪ್ಪು ಹೆಚ್ಚಿಡಿ. ನಾನು ಸಬ್ಬಾಕ್ಷಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದ್ದೇನೆ. 2 ಚಮಚ ಕಾಯಿ ತುರಿದಿಡಿ. ಅವರೆ ಕಾಳು ಹಾಕುವುದಾದರೆ ಕುಕ್ಕರಿನಲ್ಲಿ ಬೇಯಿಸಿಡಿ. ಬಾಣಲೆಯಲ್ಲಿ 1 1/2 ಲೋಟದಷ್ಟು ನೀರು ಹಾಕಿ ಬಿಸಿಯಾಗಲು ಇಡಿ. ನೀರು ಬಿಸಿಯಾದಾಗ 1 ಲೋಟ ಗೋಧಿ ಹಿಟ್ಟು, ಈರುಳ್ಳಿ, ಸೊಪ್ಪು, ಕಾಯಿ ತುರಿ, ಉಪ್ಪು, 1/2 ಚಮಚ ಜೀರಿಗೆ ಹಾಕಿ ಚೆನ್ನಾಗಿ …

Kannada Oota

DAL KICHADI ದಾಲ್ ಕಿಚಡಿ

ಉತ್ತರ ಭಾರತದ ಪೊಂಗಲ್ ಎಂದೇ ಹೇಳಬಹುದು! ಮಾಡುವುದು ಸುಲಭ! ಆದರೆ ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ ಸಣ್ಣಗೆ, 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ. ಕುಕ್ಕರಿನಲ್ಲಿ 4 ಚಮಚ ತುಪ್ಪ / ಎಣ್ಣೆ ಹಾಕಿ 1/2 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ ಪುಡಿ, 1/2 ಚಮಚ ಖಾರಾದ ಪುಡಿ( ಖಾರಾ …

Kannada ಉಪಹಾರ

CHOCOLATE IDLI & VEGETABLES IDLI ಚಾಕೊಲೇಟ್ ಇಡ್ಲಿ & ವೆಜಿಟೇಬಲ್ ಇಡ್ಲಿ

ನಾಳೆ ನವೆಂಬರ್ 14 ! ಮಕ್ಕಳ ದಿನಾಚರಣೆ! ಅರೆ ಹೌದಲ್ಲವಾ! ಮರೆತಿದ್ದೆ ಅಂತ ತಲೆ ಮೇಲೆ ಕೈಯಾಕೆ ಇಟ್ಟುಕೊಳ್ತೀರಾ!? ನಾನಿದ್ದೀನಲ್ಲಾ ನಿಮಗೆ ಙಾಪಕ ಮಾಡೋದಕ್ಕೆ! ಸರಿ ನಾಳೆ ಮಕ್ಕಳಿಗೆ ಇಷ್ಟವಾಗುವ ಒಂದು ರೆಸಿಪಿ ಹೇಳ್ತೀನಿ ಕೇಳಿ! ಚಾಕೊಲೇಟ್ ಇಡ್ಲಿ! ಮಕ್ಕಳಿಗೆ ತುಂಬಾ ಇಷ್ಟವಾಗುವುದು ಚಾಕೊಲೇಟ್! ಅದನ್ನೇ ಹಾಕಿ ಇಡ್ಲಿ ಮಾಡಿಕೊಡಿ. ಖುಷಿಯಾಗಿ ತಿನ್ನುತ್ತಾರೆ! ಏನಂದಿರಿ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದಲ್ಲ! ಹಲ್ಲು ಹುಳುಕಾಗುತ್ತೆ ಅಂದಿರಾ!? ಪಾಪ ಮಕ್ಕಳು ! ನಾಳೆ ಅವರ ದಿನಾಚರಣೆ! ಮಾಡಿಕೊಡಿ ! ತುಂಬಾ ಸುಲಭ ಮಾಡುವುದು! …

Kannada ಉಪಹಾರ

KOTTHAMBARI CHITRANNA ಕೊತ್ತಂಬರಿ ಚಿತ್ರಾನ್ನ

ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕಬ್ಬಿಣದ ಅಂಶ ಹೇರಳವಾಗಿದೆ! ಆದರೆ ನಮ್ಮ ಮಕ್ಕಳು ಊಟ ಮಾಡುವಾಗ ಕೊತ್ತಂಬರಿ ಸೊಪ್ಪು ಸಿಕ್ಕರೆ ತೆಗೆದು ಪಕ್ಕಕ್ಕಿಡುತ್ತಾರೆ! ಅವರು ಹಾಗೆ ಮಾಡಬಾರದು ಅಂದರೆ ಹೀಗೆ ಮಾಡಿ! 😉😉😉 ಈಗ ಬೆಂಗಳೂರಲ್ಲಿ 1 ಕಟ್ಟು ನಾಟಿ ಕೊತ್ತಂಬರಿ ಸೊಪ್ಪು 10 ರೂಪಾಯಿ. ಹಾಗಾದರೆ ಈ ದಿನವೇ ಮಾಡಿ! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ. 1 ಕಂತೆ ಕೊತ್ತಂಬರಿ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದಿಡಿ. ನಾಟಿ ಕೊತ್ತಂಬರಿ ಸೊಪ್ಪು ಆದರೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANOHARA UNDE ಮನೋಹರ ಉಂಡೆ( ಮನವಾರು ಉಂಡೆ)

ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ತಿಂಡಿ! ಅಯ್ಯಂಗಾರ್ ಸಂಪ್ರದಾಯದಲ್ಲಿ ಮದುವೆ ಮನೆಗಳಲ್ಲಿ, ಮುಂಜಿಗಳಲ್ಲಿ ತಪ್ಪದೆ ಮಾಡುವ ಸಿಹಿ ಇದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. ನಂತರ ನೀರು ಬಗ್ಗಿಸಿ ಉದ್ದಿನ ಬೇಳೆಯನ್ನು ಆದಷ್ಟೂ ನುಣ್ಣಗೆ ರುಬ್ಬಿ. ಹೆಚ್ಚು ನೀರು ಹಾಕಬೇಡಿ. ನೆಂದ ಉದ್ದಿನ ಬೇಳೆಯಲ್ಲಿರುವ ನೀರಿನಂಶವೇ ಸಾಕು! ತೀರ ಬೇಕೆನಿಸಿದರೆ ಒಂದೆರಡು ಚಮಚ ನೀರು ಹಾಕಿ.      ರುಬ್ಬಿದ ಮಿಶ್ರಣಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಅಕ್ಕಿ …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

GHEE RICE & VEGETABLE KURMA ಘೀ ರೈಸ್ ಮತ್ತು ವೆಜಿಟೇಬಲ್ ಕುರ್ಮಾ

“Made for eact other” ಅಂತಾರಲ್ಲಾ ಹಾಗೇ ಒಂದಕ್ಕೊಂದು ಹೇಳಿ ಮಾಡಿಸಿದ ಆಹಾರ ಇದು! ಮದುವೆ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಎಲ್ಲರಿಗೂ ಇಷ್ಟವಾಗುವ ಆಹಾರ! ಮಾಡುವ ವಿಧಾನ:- ಘೀ ರೈಸ್ 1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 1 ಪಾವು ಕಾಯಿ ಹಾಲು ತೆಗೆದಿಡಿ. ಅಥವಾ ಹಸುವಿನ ಹಾಲಾದರೂ ಪರವಾಗಿಲ್ಲ. ನಾನು ಹಸುವಿನ ಹಾಲು ಹಾಕಿರುವುದು. ಸೂಪರ್ ಆಗಿರುತ್ತದೆ ರುಚಿ! ಹೆಸರೇ ಹೇಳುವಂತೆ ಈ ರೆಸಿಪಿಯಲ್ಲಿ …

Kannada Oota ಸಾಂಬಾರು ಮತ್ತು ಪಲ್ಯಗಳು

DIDHEER TOMATO SAARU ದಿಢೀರ್ ಟೊಮೇಟೋ ಸಾರು

ದಿಢೀರ್ ಟೊಮೇಟೋ ಸಾರು ಮಾಡುವ ವಿಧಾನ:- 4 ಟೊಮೇಟೋ ತೊಳೆದು ಕತ್ತರಿಸಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ, 1 ಗೆಡ್ಡೆ ಬೆಳ್ಳುಳ್ಳಿ, 2 ಹಸಿ ಮೆಣಸಿನ ಕಾಯಿ ಹಾಕಿ ನೀರು ಸೇರಿಸದೆ ರುಬ್ಬಿ ಕೊಳ್ಳಿ (ಹುರಿಯುವ ಅಗತ್ಯವಿಲ್ಲ, ಮೆಾದಲು ಮೆಣಸು, ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ಪುಡಿ ಮಾಡಿ, ನಂತರ ಟೊಮೇಟೋ ಹಾಕಿ ರುಬ್ಬಿ) ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ ಹಾಕಿ, ರುಬ್ಬಿದ ಮಿಶ್ರಣ ಹಾಕಿ ಹಸಿ …