ಮಾಡುವ ವಿಧಾನ:-
1 ಈರುಳ್ಳಿ, 2 ಟೋಮೋಟೋ ಸಣ್ಣಗೆ, 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.
ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.
ಕುಕ್ಕರಿನಲ್ಲಿ 4 ಚಮಚ ತುಪ್ಪ / ಎಣ್ಣೆ ಹಾಕಿ 1/2 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ ಪುಡಿ, 1/2 ಚಮಚ ಖಾರಾದ ಪುಡಿ( ಖಾರಾ ನಿಮ್ಮ ರುಚಿಗೆ ತಕ್ಕಷ್ಟು) ಸ್ವಲ್ಪ ಹುರಿಯಿರಿ.
1 ಲೋಟ ಬಾಸುಮತಿ ಅಕ್ಕಿ, 1/2 ಲೋಟ ಹೆಸರು ಬೇಳೆ ತೊಳೆದು ಒಗ್ಗರಣೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಹುರಿದು 4 ಅಥವಾ 4 1/2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ತುಪ್ಪ, ನಿಂಬೆ ರಸ ಬೇಕಾದರೆ ಹಾಕಿ ಕಲೆಸಿ ಮೊಸರು ಬಜ್ಜಿಯೊಂದಿಗೆ ಬಡಿಸಿ!
ಈ ರೆಸಿಪಿಯಲ್ಲಿ ಬಾಸುಮತಿ ಅಕ್ಕಿಯೇ ಹಾಕಬೇಕು. ಸಾಧಾರಣ ಅಕ್ಕಿ ಚೆನ್ನಾಗಿರುವುದಿಲ್ಲ! ಮತ್ತು ಬಾಸುಮತಿ ಅಕ್ಕಿ , ಹೆಸರು ಬೇಳೆ ಬೆಂದ ನಂತರ ಸ್ವಲ್ಪ ಹೆಚ್ಚೇ ಒದಗುತ್ತದೆ ( ಅಂದರೆ Volume ಜಾಸ್ತಿ ಆಗುತ್ತದೆ) ನಿಮ್ಮ ಮನೆಯ ಸದಸ್ಯರ ಸಂಖ್ಯೆ ನೋಡಿ ಕೊಂಡು ಹಾಕಿ ಮಾಡಿ.
ಇದೇ ರೆಸಿಪಿರಲ್ಲಿ ಬೇಕಾದರೆ ಒಗ್ಗರಣೆಗೆ ಹೆಚ್ಚಿದ ಪಾಲಾಕ್ ಹಾಕಿದರೆ ದಾಲ್ ಪಾಲಾಕ್ ಕಿಚಡಿ ಆಗುತ್ತದೆ. ಹಿಂದೆ ಆ ರೆಸಿಪಿ ಕೂಡ ಹಾಕಿದ್ದೇನೆ.
ಇದೇ ರೆಸಿಪಿಯಲ್ಲಿ ಅಕ್ಕಿ ಸೇರಿಸದೆ ಹೆಸರು ಬೇಳೆ ಮಾತ್ರ ಹಾಕಿ ಮಾಡಿದರೆ ರುಚಿಯಾದ ದಾಲ್ ಸಿದ್ಧ! ಅನ್ನ, ಚಪಾತಿ, ಪುಲ್ಕಾ ಜೊತೆಗೆ ಒಳ್ಳೆಯ ಕಾಂಬಿನೇಶನ್!
ಧನ್ಯವಾದಗಳು.



