Showing 253 Result(s)
Kannada ಉಪಹಾರ

RAGI RAVE DOSA ರಾಗಿ ರವೆ ದೋಸಾ

ಸಾಮಾನ್ಯವಾಗಿ ಮಧುಮೇಹಿಗಳಿಗಾಗಿ ಮಾಡುವ ದೋಸೆ. ತುಂಬಾ ಜನರ ಮನೆಗಳಲ್ಲಿ ಮಾಡಬಹುದು. ಮಾಡುವ ವಿಧಾನ:- 1 ಲೋಟ ಚಿರೋಟಿ ರವೆ, 1 ಲೋಟ ರಾಗಿ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1/2 ಲೋಟ ಹುಳಿ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ ಸ್ವಲ್ಪ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ. ಬೇಕಾದರೆ ಸ್ವಲ್ಪ ನೀರು ಸೇರಿಸಿ 10 ನಿಮಿಷ ಮುಚ್ಚಿಡಿ.     ಕಾದ ಕಾವಲಿಯ ಮೇಲೆ ನಿಧಾನವಾಗಿ ಹಾಕಿ …

Kannada Tindi Tinisu ಖಾರ ತಿನಿಸುಗಳು

SOPPINA BONDA ಸೊಪ್ಪಿನ ಬೋಂಡಾ

ಮಳೆಗಾಲದಲ್ಲಿ ಖಾರಾ ಖಾರಾ ಬೋಂಡಾ ತಿನ್ನಲು ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಅದೂ ಸೊಪ್ಪಿನ ಬೋಂಡಾ ಆದರೆ ಇನ್ನೂ ಚೆಂದ! ಮಾಡುವ ವಿಧಾನ:- ನಿಮಗೆ ಬೇಕಾದ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ಹರಿವೆ ಸೊಪ್ಪು 2 ಕಟ್ಟು, ಸಬ್ಬಾಕ್ಷಿ ಸೊಪ್ಪು 2 ಕಟ್ಟು, ಕೊತ್ತಂಬರಿ 1/2 ಕಟ್ಟು. ಎಲ್ಲಾ ಸೊಪ್ಪಿನ ಫೋಟೋ ಹಾಕಿದ್ದೇನೆ. ಹರಿವೆ ಸೊಪ್ಪು ನೋಡಲು ಸ್ವಲ್ಪ ದಂಟು ಸೊಪ್ಪಿನ (ರಾಜಾ ಗಿರಿ ಸೊಪ್ಪು) ಹಾಗೆ ಇರುತ್ತದೆ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಹಸಿ …

Kannada Oota ಉಪಹಾರ

TOMATO BATH ಟೋಮೇಟೋ ಬಾತ್

ತಿಂಡಿಗೆ, ಲಂಚ್ ಬಾಕ್ಸ್ ಗೆ ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 4 ಟೋಮೇಟೋ, 1 ಈರುಳ್ಳಿ,4 ಹಸಿ ಮೆಣಸಿನಕಾಯಿ, 1 ಚಿಕ್ಕ ಬೆಳ್ಳುಳ್ಳಿ, 1/2 ಇಂಚು ಶುಂಠಿ ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. ನಾನು ಬಾಸುಮತಿ ಮತ್ತು ಸೋನಾ ಮಸೂರಿ ಅಕ್ಕಿ ಅರ್ಧ ಅರ್ಧ ಹಾಕಿದ್ದೇನೆ. ನೀವು ನಿಮಗೆ ಇಷ್ಟವಾದ ಅಕ್ಕಿ ಹಾಕಿ ಕೊಳ್ಳಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ/ತುಪ್ಪ ಹಾಕಿ, 2 …

Kannada Tindi Tinisu ಸಿಹಿ ತಿನಿಸುಗಳು

STUFFED BANANA ಸ್ಟಫ್ಡ್ ಬನಾನಾ

ಬಾಳೆ ಹಣ್ಣಿನ ರಸಾಯನ ಸಾಮಾನ್ಯವಾಗಿ ಎಲ್ಲರೂ ದೇವರ ನೈವೇದ್ಯಕ್ಕೆ ಮಾಡುತ್ತಾರೆ! ಅದನ್ನೇ ಸ್ವಲ್ಪ Different ಆಗಿ ಮಾಡಿದರೆ ದೇವರಿಗೂ ಇಷ್ಟ ಆಗಬಹುದೇನೋ? ಒಮ್ಮೆ ಹೀಗೆ ಮಾಡಿದರೆ ಹೇಗೆ?! ಸ್ಟಫ್ಡ್ ಬನಾನಾ ಮಾಡುವ ವಿಧಾನ:- 1/2 ಹೋಳು ತೆಂಗಿನ ಕಾಯಿ ತುರಿದಿಡಿ. 1/2 ಲೋಟ ಬೆಲ್ಲ ತುರಿದಿಡಿ. ಸ್ವಲ್ಪ ಗೋಡಂಬಿ ದ್ರಾಕ್ಷಿ ಬಾದಾಮಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಕಾಯಿ ತುರಿ, ಬೆಲ್ಲದ ಪುಡಿ, Dry fruits ಹಾಕಿ ಸ್ವಲ್ಪ ಹುರಿದಿಡಿ. ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಸೇರಿಸಿ ಕಲೆಸಿಡಿ. …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KAJJAYA ಕಜ್ಜಾಯ

ದೀಪಾವಳಿ ಎಂದೊಡನೆ ನೆನೆಪಿಗೆ ಬರುವುದು ಲಕ್ಷ್ಮೀ ಪೂಜೆ ಮತ್ತು ಕಜ್ಜಾಯ! ಕಜ್ಜಾಯ ಅತ್ಯಂತ ಹಳೆಯ ಸಾಂಪ್ರಾದಾಯಕ ಸಿಹಿ ತಿಂಡಿ. ಕೆಲವರು ಇದನ್ನು ಅತಿರಸ ಅಂತ ಕೂಡ ಕರೆಯುತ್ತಾರೆ. ಇದು ನಮ್ಮ ತಾಯಿ ಮಾಡುತ್ತಿದ್ದ ವಿಧಾನ! ಅವರು ದೈವಾಧೀನರಾದ ಮೇಲೆ ನಮ್ಮ ಅತ್ತಿಗೆ ಈ ಕಜ್ಜಾಯ ನನಗೆ ಮಾಡಿಕೊಡುತ್ತಿದ್ದರು! ಮೊದಲ ಬಾರಿಗೆ ನಾನು ಕಜ್ಜಾಯ ನಮ್ಮ ಅತ್ತಿಗೆಯಿಂದ ಕಲಿತು ಮಾಡಿದ್ದೇನೆ! ತುಂಬಾ ತುಂಬಾ ಚೆನ್ನಾಗಿ ಬಂದಿದೆ! ಗರಿ ಗರಿಯಾಗಿ ಬಂದಿದೆ! ಮಾಡುವ ವಿಧಾನ:- 1 ಲೋಟ ದೋಸೆ/ ಇಡ್ಲಿ …

Kannada ಸಾಂಬಾರು ಮತ್ತು ಪಲ್ಯಗಳು

DAL MAHARANI ದಾಲ್ ಮಹಾರಾಣಿ

ದಾಲ್ ಉತ್ತರ ಭಾರತದ ಪ್ರಮುಖ ಆಹಾರ! ಚಪಾತಿ, ರೋಟಿ, ಪುಲ್ಕಾ, ಅನ್ನದೊಡನೆ ಪ್ರತಿ ದಿನ ತಪ್ಪದೆ ಮಾಡುತ್ತಾರೆ! ದಾಲ್ ನ ಒಂದು ಸ್ವಲ್ಪ ವಿಭಿನ್ನವಾದ ರೆಸಿಪಿ ಇಲ್ಲಿದೆ! ದಾಲ್ ಮಹಾರಾಣಿ ಮಾಡುವ ವಿಧಾನ:- 1 ಲೋಟ ತೊಗರಿ ಬೇಳೆಗೆ ಸ್ವಲ್ಪ ಎಣ್ಣೆ ಹಾಕಿ, 2 ಅಥವಾ 3 ವಿಷಲ್ ಕೂಗಿಸಿಡಿ. 1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬೆಳ್ಳುಳ್ಳಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿ …

Kannada Oota

CHANNA PALAV ಚನ್ನ ಪಲಾವ್

ಪಲಾವ್ ಹೇಗೇ ಮಾಡಿದರೂ ಚೆಂದ! ಎಷ್ಟು ಬಗೆ!ಎಷ್ಟು ಹೆಸರು! ಹೀಗೊಮ್ಮೆ ಮಾಡಿ ನೋಡಿ! ಮಾಡುವ ವಿಧಾನ:- 1 ಲೋಟ ಕಾಬೂಲ್ ಕಡಲೇ ರಾತ್ರಿ ಪೂರ ನೆನೆಸಿ 1 ವಿಷಲ್ ಕೂಗಿಸಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. 1 ಲೋಟ ಕಾಯಿ ಹಾಲು ತೆಗೆದಿಡಿ. 1 ಈರುಳ್ಳಿ, 2 ಟೋಮೋಟೋ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ , 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ, ಸ್ವಲ್ಪ ಎಣ್ಣೆ …

Kannada ಉಪಹಾರ

PESARATTU ಪೆಸರಟ್ಟು

ಆಂಧ್ರ ಪ್ರದೇಶದ ಜನಪ್ರಿಯ ತಿಂಡಿ! ಆರೋಗ್ಯಕರವಾದ, ರುಚಿಯಾದ, ದೇಹಕ್ಕೆ ತಂಪಾದ ದೋಸೆ! ಮಾಡುವ ವಿಧಾನ:- 1 ಲೋಟ ಹೆಸರು ಕಾಳು, 2 ಚಮಚ ಅಕ್ಕಿ ರಾತ್ರಿ ಪೂರ ನೆನೆಸಿಡಿ. ಸಾಧಾರಣವಾಗಿ ಹೆಸರು ಕಾಳು ಹಾಕಿ ಮಾಡುವುದು. ನಾನು ಮೊಳಕೆ ಹೆಸರು ಕಾಳು ಹಾಕಿದ್ದೇನೆ. ಆರೋಗ್ಯಕರವಾದ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ಪ್ರಯತ್ನ! ಬೆಳಗ್ಗೆ ನೆಂದ ಕಾಳು, 1 ಅಥವಾ 2 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MINI BADUSHA ಮಿನಿ ಬಾದೂಷಾ

ದೀಪಾವಳಿ ಹಬ್ಬ ಎಂದ ಮೇಲೆ ಪ್ರತಿ ದಿನ ಏನಾದರೂ ಸಿಹಿ ತಿಂಡಿ ಇರಲೇ ಬೇಕು! ಅದರಲ್ಲೂ ಸುಲಭವಾಗಿ ಮಾಡುವ ಸಿಹಿ ತಿಂಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?! ಮಿನಿ ಬಾದುಷಾ ಮಾಡುವ ವಿಧಾನ :- 2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಒಂದೆಳೆ ಪಾಕ ಮಾಡಿ ಕೊಂಡು, ಚಿಟಿಕೆ ಏಲಕ್ಕಿ ಪುಡಿ, ಸ್ವಲ್ಪ ನಿಂಬೆ ರಸ ಹಾಕಿ ಕಲೆಸಿ, ಒಂದು ತಟ್ಟೆ ಮುಚ್ಚಿಡಿ. ಬಾದುಷಾ ಹಿಟ್ಟು ತಯಾರಿಸಲು 1 ಲೋಟ ಮೈದಾ ಹಿಟ್ಟಿಗೆ, 1/4 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BADAM POORI ಬಾದಾಮ್ ಪೂರಿ

ದೀಪಾವಳಿ ಹಬ್ಬದ ವಿಶೇಷ ಸುಲಭವಾಗಿ ಮಾಡಬಹುದಾದ ಸಿಹಿ! ಮಾಡುವ ವಿಧಾನ:- 2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. 1 ಎಳೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ. 1 ಲೋಟ ಮೈದಾ ಹಿಟ್ಟಿಗೆ, 2 ಚಮಚ ತುಪ್ಪ ಬಿಸಿ ಮಾಡಿ ಹಾಕಿ. ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಬಾದಾಮ್ ಪೂರಿ ಅಂದ ಮೇಲೆ ಬಾದಾಮಿ ಹಾಕದಿದ್ದರೆ ಹೇಗೇ?! 1/4 ಲೋಟ ಬಾದಾಮಿ ನುಣ್ಣಗೆ …