Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BASUNDI ಬಾಸುಂದಿ

ಹೆಸರು ಕೇಳಿದರೇನೆ ಬಾಯಲ್ಲಿ ನೀರು ಬರುತ್ತದೆ! ಹೋಟೆಲ್ ಗಳಲ್ಲಿ ಸಾಮಾನ್ಯವಾಗಿ ತಿನ್ನುವ ಸಿಹಿ ತಿನಿಸು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:-

ದಪ್ಪ ತಳದ ಬಾಣಲೆಯಲ್ಲಿ ಗಟ್ಟಿಯಾದ 1/2 ಲೀಟರ್ ಹಾಲು ಕಾಯಲು ಇಡಿ.

1 ಚಮಚ ಬಿಸಿ ಹಾಲಿಗೆ ಸ್ವಲ್ಪ ಕುಂಕುಮಕೇಸರಿ ಹಾಕಿಡಿ.

ಸ್ವಲ್ಪ ಬಾದಾಮಿ, ಗೋಡಂಬಿ, ಪಿಸ್ತಾ ಸಣ್ಣಗೆ ಹೆಚ್ಚಿಡಿ.

  

ಹಾಲು ಕುದಿದು ಅರ್ಧ ಭಾಗದಷ್ಟು ಕಡಿಮೆ ಆದಾಗ ಕುಂಕುಮ ಕೇಸರಿ ಹಾಕಿದ ಹಾಲು, ಹೆಚ್ಚಿದ Dry fruits, 4 ಚಮಚ ಹಾಲಿನ ಪುಡಿ, ಚಿಟಿಕೆ ಏಲಕ್ಕಿ ಪುಡಿ, 2 ಚಮಚ ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಕಲೆಸುತ್ತಾ ಇರಿ.

ಹಾಲು ಗಟ್ಟಿಯಾಗಿ ಆದಾಗ ಒಲೆಯಿಂದ ತೆಗೆದು ಸ್ವಲ್ಪ ತಣ್ಣಗಾದ ಮೇಲೆ Fridge ನಲ್ಲಿ ತಣ್ಣಗಾಗಲು ಇಟ್ಟು ನಂತರ ಸವಿಯಿರಿ.

    

ಹಾಲಿನ ಪುಡಿ Optional. ಹಾಲು ಪುಡಿ ಹಾಕುವುದರಿಂದ ಬಾಸುಂದಿ ಬೇಗ ಗಟ್ಟಿಯಾಗುತ್ತೆ. ರುಚಿ ಅದ್ಭುತವಾಗಿರುತ್ತೆ. ಸಕ್ಕರೆ ಕಡಿಮೆ ಹಾಕಬಹುದು. ಸಿಹಿ ಹೆಚ್ಚು ಬೇಡ ಅನ್ನುವವರು ಹಾಕದಿದ್ದರೂ ಪರ್ವಾಗಿಲ್ಲ!

ಹಾಲಿನ ಪುಡಿ ಹಾಕದೆ ಮಾಡುವುದಾದರೆ ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ.

ಧನ್ಯವಾದಗಳು.

 

Leave a Reply

Your email address will not be published.