Kannada Tindi Tinisu ಖಾರ ತಿನಿಸುಗಳು

SOPPINA BONDA ಸೊಪ್ಪಿನ ಬೋಂಡಾ

ಮಳೆಗಾಲದಲ್ಲಿ ಖಾರಾ ಖಾರಾ ಬೋಂಡಾ ತಿನ್ನಲು ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಅದೂ ಸೊಪ್ಪಿನ ಬೋಂಡಾ ಆದರೆ ಇನ್ನೂ ಚೆಂದ!

ಮಾಡುವ ವಿಧಾನ:-

ನಿಮಗೆ ಬೇಕಾದ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ಹರಿವೆ ಸೊಪ್ಪು 2 ಕಟ್ಟು, ಸಬ್ಬಾಕ್ಷಿ ಸೊಪ್ಪು 2 ಕಟ್ಟು, ಕೊತ್ತಂಬರಿ 1/2 ಕಟ್ಟು. ಎಲ್ಲಾ ಸೊಪ್ಪಿನ ಫೋಟೋ ಹಾಕಿದ್ದೇನೆ. ಹರಿವೆ ಸೊಪ್ಪು ನೋಡಲು ಸ್ವಲ್ಪ ದಂಟು ಸೊಪ್ಪಿನ (ರಾಜಾ ಗಿರಿ ಸೊಪ್ಪು) ಹಾಗೆ ಇರುತ್ತದೆ.

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಹಸಿ ಮೆಣಸಿನಕಾಯಿ ನಿಮಗೆ ಬೇಕಾಗುವಷ್ಟು ಸಣ್ಣಗೆ ಹೆಚ್ಚಿಡಿ.

       

ಪಾತ್ರೆಯಲ್ಲಿ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ಹೆಚ್ಚಿದ ಈರುಳ್ಳಿ, ಸೊಪ್ಪು, ಹಸಿ ಮೆಣಸಿನಕಾಯಿ, 1/2 ಚಮಚ ಜೀರಿಗೆ, ಸ್ವಲ್ಪ ಓಂ ಕಾಳು, ಉಪ್ಪು, ಕಾದ ಎಣ್ಣೆ 1 ಚಮಚ ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಚಿಮುಕಿಸಿ. ಸೊಪ್ಪಿನಲ್ಲಿ ನೀರಿನಂಶ ಇರುವುದರಿಂದ ಹೆಚ್ಚಿನ ನೀರು ಬೇಕಾಗುವುದಿಲ್ಲ. ಬೋಂಡಾ ಹಿಟ್ಟಿನ ಹದಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ.

ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕೆಂಪಗೆ ಗರಿ ಗರಿಯಾಗಿ ಕರಿದು ಸವಿಯಿರಿ.

ಈ ಬೋಂಡಾಗೇ ಹೆಚ್ಚು ಸೊಪ್ಪು ಹಾಕಿದಷ್ಟೂ ಚೆಂದ! ಬೇಕಾದರೆ ಹೆಚ್ಚಿದ ಪುದೀನಾ, ಕರಿಬೇವು, ನುಗ್ಗೆ ಸೊಪ್ಪು ಹಾಕಬಹುದು.

ನಾನು ಸಾಮಾನ್ಯವಾಗಿ ಬೋಂಡಾ, ಬಜ್ಜಿಗಳಿಗೆ ಸೋಡಾ ಹಾಕುವುದಿಲ್ಲ. ನೀವು ಬೇಕಾದರೆ ಚಿಟಿಕೆ ಸೋಡಾ ಹಾಕಬಹುದು.

ಧನ್ಯವಾದಗಳು

Leave a Reply

Your email address will not be published.