PALAK SOUP ಪಾಲಾಕ್ ಸೂಪ್
ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ) 2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ. …



