Kannada Oota

PALAK DAL & JEERA RICE ಪಾಲಕ್ ದಾಲ್ ಮತ್ತು ಜೀರಾ ರೈಸ್

ಪಾಲಕ್ ಒಂದು ಆರೋಗ್ಯಕರ ಸೊಪ್ಪು! ಕಬ್ಬಿಣದ ಅಂಶ ಹೇರಳವಾಗಿದೆ! ಬೆಳೆಯುವ ಮಕ್ಕಳಿಗೆ ಬಹಳ ಒಳ್ಳೆಯದು! ಪಾಲಕ್ ಸೊಪ್ಪು ಹಾಕಿ ಒಂದು ರುಚಿಯಾದ, ಆರೋಗ್ಯಕರ ದಾಲ್ ಮಾಡುವ ರೆಸಿಪಿ ಇಲ್ಲಿದೆ. ಪಾಲಕ್ ದಾಲ್ ಮಾಡುವ ವಿಧಾನ:- 4 ಕಟ್ಟು ಪಾಲಕ್ ಸೊಪ್ಪನ್ನು ತೊಳೆದು, ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ, 3 ಟೊಮೇಟೋ ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.     ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 1 ಟೀ ಚಮಚ ಜೀರಿಗೆ, ಚಿಟಿಕೆ ಅರಿಶಿಣ, …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DOODH PEDA ದೂದ್ ಪೇಡಾ

ಕೇವಲ 10 ನಿಮಿಷದಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ! ಮಾಡುವ ವಿಧಾನ:- 1 ಚಮತ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ದಳ ಹಾಕಿಡಿ.      ದಪ್ಪ ತಳದ ಬಾಣಲೆಯಲ್ಲಿ 1 ಅಳತೆ ಹಾಲಿನ ಪುಡಿ, 1 ಅಳತೆ Condensrd milk, 1 ಚಮಚ ಮೈದಾ ಹಾಕಿ ಚೆನ್ನಾಗಿ ಕಲೆಸಿ. 1 ಚಮಚ ತುಪ್ಪ ಹಾಕಿ Medium ಉರಿಯಲ್ಲಿ ಕೈ ಬಿಡದಂತೆ ಕೆದಕುತ್ತಾ ಇರಿ. ಮಿಶ್ರಣ ಗಟ್ಟಿಯಾದಾಗ ಉರಿ ಕಡಿಮೆ ಮಾಡಿ ಕುಂಕುಮ ಕೇಸರಿ ಬೆರೆಸಿದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SUGAR FREE DOODH PEDA ಶುಗರ್ ಫ್ರೀ ದೂಧ್ ಪೇಡಾ

ಸಿಹಿ ತಿನಿಸು ಎಂದರೆ ಎಲ್ಲರಿಗೂ ತುಂಬಾ ಇಷ್ಟ! ಆದರೆ ಮಧು ಮೇಹಿಗಳು ಸಿಹಿ ತಿನ್ನುವಂತೆ ಇಲ್ಲ! ಹಬ್ಬ ಎಂದ ಮೇಲೆ ಬಾಯಿ ಸಿಹಿ ಮಾಡದಿದ್ದರೆ ಹಬ್ಬ ಪೂರ್ಣವಾಗುವುದಿಲ್ಲ! ಅವರಿಗಾಗಿ ಕೇವಲ 10 ನಿಮಿಷದಲ್ಲಿ ಮಾಡಬಹುದಾದ ವಿಶೇಷ ಸಿಹಿ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 200 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿಡಿ. ಖೋವಾ Room temperature ನಲ್ಲಿ ಇರಬೇಕು. Fridge ನಿಂದ ಹೊರ ತೆಗೆದರೆ 1 ಗಂಟೆ ಸಮಯ ಹೊರಗಿಟ್ಟು ಮಾಡಿ.      1 …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

KAJU MASALA & KERALA PARATHA ಕಾಜೂ ಮಸಾಲಾ ಮತ್ತು ಕೇರಳ ಪರಾಟ

ಕಾಜೂ ಮಸಾಲಾ ಎಲ್ಲರೂ ಇಷ್ಟ ಪಟ್ಟು ತಿನ್ನುವ ಗ್ರೇವಿ! ರುಚಿ ಅದ್ಭುತ! ಮಾಡುವ ವಿಧಾನ:- 100 ಗ್ರಾಂ ಗೋಡಂಬಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದಿಡಿ. 1 ಈರುಳ್ಳಿ, 2 ಟೂಮೇಟೋ ಸಣ್ಣಗೆ ಹೆಚ್ಚಿ 1 ಚಮಚ ಬೆಣ್ಣೆ, 1 ಇಂಚು ಚಕ್ಕೆ, 3 ಲವಂಗ, 1 ಇಂಚು ಸಿಪ್ಪೆ ತೆಗೆದ ಶುಂಠಿ, 5 ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.     ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ, 1/4 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MOHAN THAAL ಮೋಹನ್ ತಾಲ್

ಮೋಹನ್ ತಾಲ್, ನಮ್ಮ ಮೈಸೂರು ಪಾಕಿನ ಸೋದರ ಸಂಬಂಧಿ ಎಂದು ಹೇಳಬಹುದು, ಗುಜರಾತಿನ ಈ ಸಿಹಿ ಮಾಡುವುದು ಸುಲಭ, ಆದರೆ ರುಚಿ ಅಪಾರ, ಮನೆಯಲ್ಲೇ ಇರುವ ಸಾಮಾನುಗಳನ್ನು ಬಳಸಿ ಬೇಗ ಮಾಡಬಹುದು. ಮಾಡುವ ವಿಧಾನ:-     1 ಬಟ್ಟಲು ಕಡಲೇ ಹಿಟ್ಟಿಗೆ, 1 ಚಮಚ ತುಪ್ಪ, 1 ಚಮಚ ಹಾಲು ಹಾಕಿ ಉದುರು ಉದುರಾಗಿ ಕಲೆಸಿ, ಜರಡಿ ಹಿಡಿಯಿರಿ. ಬಾಣಲೆಯಲ್ಲಿ 1/2 ಬಟ್ಟಲು ತುಪ್ಪ ಬಿಸಿ ಮಾಡಿ, ಜರಡಿ ಹಿಡಿದ ಕಡಲೇ ಹಿಟ್ಟನ್ನು ಹಾಕಿ ಕಡಿಮೆ …

Kannada Oota ಉಪಹಾರ

PUDINA PALAV ಪುದೀನ ಪಲಾವ್

ಲಂಚ್ ಬಾಕ್ಸ್ ಗೆ ಹಾಕಲು ಸೂಕ್ತವಾದ ಆಹಾರ! ಸುಲಭ, ರುಚಿಕರ! ಮಾಡುವ ವಿಧಾನ:- ತರಕಾರಿಗಳನ್ನು ತೊಳೆದು ಹೆಚ್ಚಿಡಿ. 1 ಹೋಳು ತೆಂಗಿನ ಕಾಯಿ ತುರಿಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಸೋಸಿ, ಕಾಯಿ ಹಾಲು ತೆಗೆದಿಡಿ. 1 ಸಲ ರುಬ್ಬಿ ಸೋಸಿ ಕೊಂಡು, ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಿ ಹಾಲು ಸೋಸಿಕೊಳ್ಳಿ.     1 ಕಟ್ಟು ಪುದೀನ, 1/2 ಕಟ್ಟು ಕೊತ್ತಂಬರಿ ಸೊಪ್ಪು, 4 ಹಸಿ ಮೆಣಸಿನ ಕಾಯಿ, 1 ಗೆಡ್ಡೆ ಬೆಳ್ಳುಳ್ಳಿ, …

Kannada ಚಾಟ್ಸ್

ALU SEV ಆಲೂ ಸೇವ್

ಸಾಧಾರಣ ಖಾರಾ ಸೇವ್ ಗಿಂತ ಸ್ವಲ್ಪ ರುಚಿ ಭಿನ್ನ! ಮಾಡುವ ವಿಧಾನ:- ಆಲೊಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿಯಿರುವಾಗಲೇ ನುಣ್ಣಗೆ ಪುಡಿ ಮಾಡಿಡಿ.     ಬಟ್ಟಲಿನಲ್ಲಿ ಆಲೂ ಮಿಶ್ರಣಕ್ಕೆ ಹಿಡಿಸುವಷ್ಟು ಕಡಲೆ ಹಿಟ್ಟು, 1 ಚಮಚ ಖಾರಾ ಪುಡಿ, 1 ಚಮಚ ಆಮ್ ಚೂರ್ ಪುಡಿ, 2 ಚಮಚ ಅಕ್ಕಿ ಹಿಟ್ಟು, ಉಪ್ಪು, 1 ಚಮಚ ಬೆಣ್ಣೆ , 1/2 ಚಮಚ ಓಂ ಕಾಳು ಹಾಕಿ ಚೆನ್ನಾಗಿ ಕಲೆಸಿ.     ಚಕ್ಕುಲಿ ಒರಳಿಗೆ ಸ್ವಲ್ಪ …

Kannada ಸೂಪ್ ಇತ್ಯಾದಿ

SWEET CORN SOUP ಸ್ವೀಟ್ ಕಾರ್ನ್ ಸೂಪ್

ಮಳೆ ಸುರಿಯುವಾಗ ಬಿಸಿ ಬಿಸಿ ಸೂಪ್ ಕುಡಿದರೆ ಎಷ್ಟು ಚೆಂದ ಅಲ್ಲವೇ? ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡುವ ಸೂಪ್ ಮಾಡುವ ರೆಸಿಪಿ ಇಲ್ಲಿದೆ! ಸ್ವೀಟ್ ಕಾರ್ನ್ ಸೂಪ್ ಮಾಡುವ ವಿಧಾನ:- 1 ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 25 ರಿಂದ 30 ಎಳೆಯ ಹುರುಳೀ ಕಾಯಿ ತೊಳೆದು ಸಣ್ಣಗೆ ಹೆಚ್ಚಿಡಿ.     100 ಗ್ರಾಂ ನಷ್ಟು ಸ್ವೀಟ್ ಕಾರ್ನ್ ತೊಳೆದು, 1/4 ಭಾಗದಷ್ಟು ಸ್ವಲ್ಪ ನೀರು ಸೇರಿಸಿ ರುಬ್ಬಿಡಿ. 3/4 ಭಾಗ ಬೇಯಲು ಹಾಕಿ. …