Kannada ಸಾಂಬಾರು ಮತ್ತು ಪಲ್ಯಗಳು

SAMBAR POWDER ಸಾಂಬಾರ್ ಪುಡಿ

ಸಾಂಬಾರ್ ಪುಡಿ ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಅವರವರ ಮನೆಯ ಅಭಿರುಚಿಗೆ ತಕ್ಕ ಹಾಗೆ ಮಾಡುತ್ತಾರೆ. ನಮ್ಮ ಮನೆಯ ಸಾಂಬಾರ್ ಪುಡಿ ರೆಸಿಪಿ ಹೀಗಿದೆ. ಬೇಕಾಗುವ ಸಾಮಾನು:- ಧನಿಯ – 1 ಪಾವು ಕಡಲೇ ಬೇಳೆ – 1/2 ಪಾವು ಉದ್ದಿನ ಬೇಳೆ – 1/4 ಪಾವು ಒಣ ಮೆಣಸಿನ ಕಾಯಿ – ಕೆಂಪು ಮತ್ತು ಬ್ಯಾಡಗಿ ಮೆಣಸಿನ ಕಾಯಿ ಎರಡು ಸೇರಿಸಿ 1/4 ಕೇಜಿ (ಖಾರಾ ಜಾಸ್ತಿ ಬೇಕಾದರೆ ಕೆಂಪು ಮೆಣಸಿನ ಕಾಯಿ ಹೆಚ್ಚು ಹಾಕಿ, …

Kannada Oota ಉಪಹಾರ

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ. ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-     1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ …

Kannada Oota ಸಾಂಬಾರು ಮತ್ತು ಪಲ್ಯಗಳು

VEG DUM BIRIYANI & SHORBA GRAVY ವೆಜ್ ದಮ್ ಬಿರಿಯಾನಿ ಮತ್ತು ಶೋರ್ಬಾ ಗ್ರೇವಿ

ನನಗೆ ಬಹಳ ಇಷ್ಚವಾದ ಆಹಾರ! ಹೋಟೆಲ್ ಗಳಲ್ಲಿ ಬಿರಿಯಾನಿ ಜೊತೆ ಶೇರ್ವಾ/ಶೋರ್ಬಾ ಗ್ರೇವಿ ಕೊಡುತ್ತಾರೆ. ಆ ಎರಡೂ ರೆಸಿಪಿ ಒಟ್ಟಿಗೆ! ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ:-         ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ. 12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ) 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BADAM KATLI ಬಾದಾಮ್ ಕಟ್ಲಿ

ಬಾದಾಮಿ ತುಂಬಾ ಒಳ್ಳೆಯ ಒಣ ಹಣ್ಣು! ಆರೋಗ್ಯಕ್ಕೆ ತುಂಬಾ ತುಂಬಾ ಒಳ್ಳೆಯದು! ಬಾದಾಮಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಪ್ರಯೋಜನಗಳು ಹಲವಾರು! ಚರ್ಮ, ಕೂದಲಿನ ಆರೈಕೆಯಲ್ಲಿ ಬಹಳ ಸಹಾಯ ಮಾಡುತ್ತದೆ. ಮಧು ಮೇಹ, ರಕ್ತದೊತ್ತಡದ ಹತೋಟಿಯಲ್ಲಿ ಇಡುತ್ತದೆ. ಇಂತಹ ಬಾದಾಮಿಯಿಂದ ಮಾಡುವ ಒಂದು ಸುಲಭವಾದ, ರುಚಿಯಾದ ಸಿಹಿ ರೆಸಿಪಿ ಇಲ್ಲಿದೆ. ಬಾದಾಮಿ ಕಟ್ಲಿ ಮಾಡುವ ವಿಧಾನ:- 1 ಲೋಟ ಬಾದಾಮಿಯನ್ನು ಬಿಸಿ ನೀರಲ್ಲಿ ಹಾಕಿ 1 ಗಂಟೆ ತಟ್ಟೆ ಮುಚ್ಚಿ ನೆನೆಸಿಡಿ. ನಂತರ ಬಾದಾಮಿಯ ಸಿಪ್ಪೆ ತೆಗೆದು, ಒಗೆದ …

Kannada ಉಪಹಾರ

SCHEZWAN FRIED RICE & NOODLES ಸಿಝ್ವಾನ್ ಫ್ರೈಡ್ ರೈಸ್ ಮತ್ತು ನೂಡಲ್ಸ್

ಇತ್ತೀಚೆಗೆ ಹೋಟೆಲ್ ಗಳಲ್ಲಿ ಚೈನೀಸ್ ತಿಂಡಿಗಳ ಹವಾ ಜೋರಾಗಿದೆ! ಮಕ್ಕಳಿಗಂತೂ ತುಂಬಾ ಇಷ್ಟ ಆಗುತ್ತೆ! ಫ್ರೈಡ್ ರೈಸ್ ತುಂಬಾ ಜನ ಇಷ್ಟ ಪಟ್ಟು ತಿನ್ನುವ ಆಹಾರ! ಹಾಗಾದರೆ ಅದರ ರೆಸಿಪಿ ನೋಡೋಣವೇ? 1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಬಾಣಲೆಯಲ್ಲಿ / ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. ಕ್ಯಾರೆಟ್, ಕ್ಯಾಪ್ಸಿಕಂ, ಕ್ಯಾಬೇಜ್, ಈರುಳ್ಳಿ, ಎಳೆಯ ಬೀನ್ಸ್ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.     8 ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿ ನೀರಲ್ಲಿ 1/2 ಗಂಟೆ ನೆನೆಸಿಡಿ. …

Kannada Oota ಉಪಹಾರ

GHEE RICE & VEG PEPPER MASALA ಘೀ ರೈಸ್ ಮತ್ತು ವೆಜ್ ಪೆಪ್ಪರ್ ಮಸಾಲ

ಘೀ ರೈಸ್ ಹೆಸರೇ ಹೇಳುವಂತೆ ತುಪ್ಪದಿಂದ ಮಾಡುವ ಒಂದು ರೆಸಿಪಿ! ಮಾಡೋದು ಬಹಳ ಸುಲಭ! ಹೆಚ್ಚು ಮಸಾಲೆ ಇಲ್ಲ! ಘೀ ರೈಸ್ (ಹೋಟೆಲ್ ಶೈಲಿ) 1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.      1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನ ಕಾಯಿ ಸೀಳಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ, ಗೋಡಂಬಿ, ಹೆಚ್ಚಿದ ಈರುಳ್ಳಿ, …

Kannada ಸೂಪ್ ಇತ್ಯಾದಿ

BADAM SOUP & BADAM CHUTNEY ಬಾದಾಮ್ ಸೂಪ್ ಮತ್ತು ಬಾದಾಮ್ ಚಟ್ನಿ

ಬಾದಾಮಿ ಆರೋಗ್ಯಕರ ಒಣ ಹಣ್ಣು! ಅದರಲ್ಲಿರುವ ಒಳ್ಳೆಯ ಅಂಶಗಳ ಬಗ್ಗೆ ಪುಟಗಟ್ಟಲೆ ಬರೆಯಬಹುದು! ಮಕ್ಕಳಿಗಂತೂ ತುಂಬಾ ಒಳ್ಳೆಯದು! ಬೆಳೆಯುವ ಮಕ್ಕಳಿಗೆ ದಿನಾ ನಾಲ್ಕು ಬಾದಾಮಿ ಕೊಡಿ. ಅವರ ಬುದ್ಧಿಶಕ್ತಿ ಹೆಚ್ಚುತ್ತಾ ಹೋಗುತ್ತದೆ! ಮೂಳೆ ಮತ್ತು ಚರ್ಮದ ರಕ್ಷಣೆ ಮಾಡುತ್ತದೆ! ಬೆಲೆ ಸ್ವಲ್ಪ ಹೆಚ್ಚು ಎನ್ನುವುದನ್ನು ಬಿಟ್ಟರೆ ಎಲ್ಲಾ ಒಳ್ಳೆಯ ಗುಣವೇ! ಇಂತಹ ಆರೋಗ್ಯಕರ ಬಾದಾಮಿಯ ರುಚಿಯಾದ ಸೂಪ್ ಮಾಡುವ ವಿಧಾನ ನೋಡೋಣವೇ? ಬಾದಾಮ್ ಸೂಪ್ ಮಾಡುವ ವಿಧಾನ:- 2 ಹಿಡಿಯಷ್ಟು ಬಾದಾಮಿಯನ್ನು ಬಿಸಿ ನೀರಲ್ಲಿ ನೆನೆಸಿ ಸಿಪ್ಪೆ ತೆಗೆದಿಡಿ. …

Kannada ಉಪಹಾರ

MASALA DOSE ಮಸಾಲ ದೋಸೆ

ಎಲ್ಲರ ಪ್ರೀತಿಯ ತಿಂಡಿ! ಹೋಟೆಲ್ ಗಳಲ್ಲಿ ಆರ್ಡರ್ ಮಾಡುವ ಮೊದಲ ತಿಂಡಿ! ಮನೆಯಲ್ಲಿಯೇ ಹೋಟೆಲಿನ ಹಾಗೆ ಗರಿ ಗರಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ದೋಸೆ ಹಿಟ್ಟು ಮಾಡುವ ವಿಧಾನ:- ದೋಸೆ ಅಕ್ಕಿ – 4 ಲೋಟ ಉದ್ದಿನ ಬೇಳೆ – 1 ಲೋಟ ಕಡಲೇ ಬೇಳೆ – 4 ಚಮಚ ಗಟ್ಟಿ ಅವಲಕ್ಕಿ – 4 ಚಮಚ ಮೆಂತ್ಯ – 1/2 ಚಮಚ (ಬೇಕಾದರೆ) ಅಕ್ಕಿ, ಅವಲಕ್ಕಿಯನ್ನು ಒಟ್ಟಿಗೆ ತೊಳೆದು ನೆನೆಸಿಡಿ. ಉದ್ದಿನ ಬೇಳೆ, ಕಡಲೇ ಬೇಳೆ …

Kannada Oota ಸಾಂಬಾರು ಮತ್ತು ಪಲ್ಯಗಳು

VEGETABLE KURMA & GARLIC BUTTER NAAN ವೆಜಿಟೇಬಲ್ ಕುರ್ಮ ಮತ್ತು ಗಾರ್ಲಿಕ್ ಬಟರ್ ನಾನ್

ವೆಜಿಟೇಬಲ್ ಕುರ್ಮ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತೆ. ಹೋಟೆಲ್ ಶೈಲಿ ಯಲ್ಲಿ ವಿಜಿಟೇಬಲ್ ಕುರ್ಮ ಮಾಡುವ ರೆಸಿಪಿ ಇಲ್ಲಿದೆ. ವೆಜಿಟೇಬಲ್ ಕುರ್ಮ ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು.     4 ಚಮಚ ಕಾಯಿ …

Kannada Tindi Tinisu ಖಾರ ತಿನಿಸುಗಳು

CHAKKULI (Traditional) ಚಕ್ಕುಲಿ (ಸಾಂಪ್ರಾದಾಯಿಕ)

ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತಾ ಇದೆ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಗರಿ ಗರಿಯಾದ, ಕುರು ಕುರು ತಿಂಡಿ ಏನಾದರೂ ತಿನ್ನಲು ಇದ್ದರೆ ಎಷ್ಟು ಚೆನ್ನ ಅಲ್ಲವೇ ಸದಸ್ಯರೆ? ಹಾಗಾದರೆ ಕುರು ಕುರು ರೆಸಿಪಿ ಒಂದು ನೋಡೋಣವೇ? ಚಕ್ಕುಲಿ ಮಾಡುವ ವಿಧಾನ:- ತಿಂಡಿ /ದೋಸೆ ಅಕ್ಕಿ – 4 ಪಾವು ಉದ್ದಿನ ಬೇಳೆ – 1 ಪಾವು ಬಿಳಿ ಎಳ್ಳು – 3 ಚಮಚ ಜೀರಿಗೆ – 2 ಚಮಚ ಇಂಗು – …