Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KOBBARI MITAYI ಕೊಬ್ಬರಿ ಮಿಠಾಯಿ

ನಮಸ್ಕಾರ, ಇದು ನನ್ನ ಮೊದಲ ಪೋಸ್ಟ್! ಹಾಗಾಗಿ ಸಿಹಿ ರೆಸಿಪಿ ಹಾಕಿದ್ದೇನೆ! ಹಾಗಾದರೆ ನಮ್ಮ ಸಿಹಿ ರೆಸಿಪಿ ನೋಡೋಣವೇ? ಇದು ತುಂಬಾ ಹಳೆಯ ರೆಸಿಪಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಗೋಕುಲಾಷ್ಟಮಿಯಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ತುಂಬಾ ಸುಲಭವಾಗಿ ಮಾಡಬಹುದು. ಕೊಬ್ಬರಿ ಮಿಠಾಯಿ ಮಾಡುವ ವಿಧಾನ:-    1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ ತುರಿದುಕೊಳ್ಳಿ. …

Kannada ಸಾಂಬಾರು ಮತ್ತು ಪಲ್ಯಗಳು

PULIYOGARE GOJJU (Iyengars’ style) ಪುಳಿಯೋಗರೆ ಗೊಜ್ಜು (ಅಯ್ಯಂಗಾರ್ಸ್ ಶೈಲಿ)

ಪುಳಿಯೋಗರೆ ಬಹು ಜನಪ್ರಿಯ ಆಹಾರ. ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾದರೂ, ಒಮ್ಮೆ ಮಾಡಿಟ್ಟರೆ 5 ಅಥವಾ 6 ತಿಂಗಳು, fridge ನಲ್ಲಿ ಇಟ್ಟು, ಬೇಕಾದಾಗ ಉಪಯೋಗಿಸಬಹುದು. ಮಾಡುವ ವಿಧಾನ:- ಖಾರಾ ಪುಡಿಗೆ ಬೇಕಾಗುವ ಸಾಮಾನು:- ಧನಿಯ – 250 ಗ್ರಾಂ ಮೆಣಸು – 100 ಗ್ರಾಂ ಜೀರಾ – 100 ಗ್ರಾಂ ಮೆಂತ್ಯ – 50 ಗ್ರಾಂ ಸಾಸಿವೆ – 50 ಗ್ರಾಂ ಒಣ ಮೆಣಸಿನ ಕಾಯಿ – ಕೆಂಪು 400 ಗ್ರಾಂ + ಬ್ಯಾಡಗಿ 100 …

Kannada Oota ಉಪಹಾರ

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! “ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ …

Kannada Tindi Tinisu ಖಾರ ತಿನಿಸುಗಳು

MASALA KADALE BEEJA (Congress Kadale Beeja) ಮಸಾಲಾ ಕಡಲೇ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡಲೇ ಬೀಜ ” ಬಡವರ ಬಾದಾಮಿ” ಎಂದೇ ಪ್ರಸಿದ್ಧ! ನಮ್ಮ ಪ್ರೀತಿಯ ಬಾಪೂಜಿಯವರೂ ಸಹ ಕಡಲೇ ಬೀಜವನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು! ಅಂತಹ ಕಡಲೇ ಬೀಜದ ಒಂದು ಜನಪ್ರಿಯ ರೆಸಿಪಿ ಈ ಮಸಾಲ ಕಡಲೇ ಬೀಜ! ಬೆಂಗಳೂರಿನಲ್ಲಿ ಇದನ್ನು ಕಾಂಗ್ರೆಸ್ ಕಡಲೇ ಬೀಜ ಅಂತಾರೆ! ಯಾಕೆ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ! ಎಲ್ಲಾ ಬೇಕರಿ, ಅಂಗಡಿಗಳಲ್ಲಿ ಹೆಚ್ಚು ಮಾರಾಟ ಆಗುತ್ತೆ! ಈ ಕಡಲೇ ಬೀಜ ಮನೇಲಿ ಸುಲಭವಾಗಿ, ಶುಚಿಯಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ!ಮಾಡುವ ವಿಧಾನ:- …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

BADANE KAYI ENNEGAYI & HABE AKKI ROTTI ಬದನೆ ಕಾಯಿ ಎಣ್ಣೆಗಾಯಿ ಮತ್ತು ಹಬೆ ಅಕ್ಕಿ ರೊಟ್ಟಿ

ಎಣ್ಣೆಗಾಯಿ ಉತ್ತರ ಕರ್ನಾಟಕದ ಬಹು ಜನಪ್ರಿಯ ಆಹಾರ! ಜೋಳದ ರೊಟ್ಟಿ ಜೊತೆ ಒಳ್ಳೆಯ ಕಾಂಬಿನೇಷನ್! ಹಾಗಂತ ದಕ್ಷಿಣ ಕರ್ನಾಟಕದವರಿಗೆ ಇಷ್ಟವಿಲ್ಲ ಅಂತ ಅರ್ಥ ಅಲ್ಲ! ನಮಗೂ ಅಚ್ಚು ಮೆಚ್ಚಿನ Side Dish! ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತೆ. ಎಣ್ಣೆಗಾಯಿ ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ! ನಮ್ಮ ಮನೇಲಿ ಮಾಡುವ ಶೈಲಿ ಈ ರೆಸಿಪಿ. ಬದನೇ ಕಾಯಿ ಎಣ್ಣೆಗಾಯಿ ಮಾಡುವ ವಿಧಾನ :-     ಚಿಕ್ಕ ಚಿಕ್ಕದಾದ ಕಪ್ಪು ಬದನೇಕಾಯಿ ಆರಿಸಿಕೊಳ್ಳಿ. ತೊಳೆದು ತಳದಲ್ಲಿ + ಆಕಾರದಲ್ಲಿ ತೊಟ್ಟಿನ …

Kannada ಉಪಹಾರ

SABUDANA IDLI & Tomato Chutney ಸಾಬುದಾನ ಇಡ್ಲಿ

ಗೃಹಿಣಿಯರಿಗೆ ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇದ್ದೇ ಇರುತ್ತೆ. ಮನೆಕೆಲಸ, ಅಡುಗೆ, ಮಕ್ಕಳ ಓದು, ಹೀಗೆ ಕೆಲಸಗಳ ಪಟ್ಟಿ ಬೆಳೀತಾ ಇರುತ್ತೆ! ಎಲ್ಲಾ ಕೆಲಸ ಮುಗಿಸಿ ಮಲಗೋ ಮುನ್ನ ಜ್ಞಾಪಕ ಬರುತ್ತೆ ಇಡ್ಲಿಗೆ ಅಕ್ಕಿ ನೆನೆಸಿಲ್ಲ ಅಂತ! ಹಾಗಂತ ತಿಂಡಿ ಏನಪ್ಪ ಮಾಡೋದು ಅಂತ ಯೋಚನೆ ಮಾಡಬೇಡಿ! ಒಳ್ಳೆಯ ರೆಸಿಪಿ ನಿಮಗಾಗಿ ಇಲ್ಲಿದೆ! ಇಡ್ಲಿಗೆ ರುಬ್ಬುವ ಕೆಲಸ ಇಲ್ಲ! ಸುಲಭವಾಗಿ ಮಾಡಬಹುದು! ಸಾಬುದಾನ ಇಡ್ಲಿ!!! ಅಂದರೆ ಸಬ್ಬಕ್ಕಿಯ ಇಡ್ಲಿ! ಮಾಡುವ ವಿಧಾನ:- ಮೊದಲನೆಯ ವಿಧಾನ:-     …

Kannada ಸಾಂಬಾರು ಮತ್ತು ಪಲ್ಯಗಳು

MAJJIGE HULI ಮಜ್ಜಿಗೆ ಹುಳಿ

ಮಾಡುವ ವಿಧಾನ:- 4 ಚಮಚ ಕಡಲೇ ಬೇಳೆ ನೆನೆಸಿಡಿ. 4 ಚಮಚ ಕಾಯಿ ತುರಿದಿಡಿ. ನೆಂದ ಕಡಲೇ ಬೇಳೆ, ಕಾಯಿ ತುರಿ, 6 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.     ಬೂದುಗುಂಬಳ ಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿ ಬೇಯಿಸಿ, ರುಬ್ಬಿದ ಮಿಶ್ರಣ, ಸ್ವಲ್ಪ ಹುಳಿಯಾದ ಮೊಸರು, ಉಪ್ಪು ಹಾಕಿ ಸ್ವಲ್ಪ ಕುದಿಸಿ ತೆಗೆದಿಡಿ. ತುಂಬಾ ಕುದಿಯುವುದು ಬೇಡ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಅರಿಷಿಣ ಹಾಕಿ …

Kannada ಸಾಂಬಾರು ಮತ್ತು ಪಲ್ಯಗಳು

KASHMIRI BENDI MASALA (Easy & Tasty) ಕಾಶ್ಮೀರಿ ಬೆಂಡಿ ಮಸಾಲ ( ಸುಲಭ ಮತ್ತು ರುಚಿಕರ)

ಬೆಂಡೆ ಕಾಯಿ ತನ್ನಲ್ಲಿ ತುಂಬಾ ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳು ಇದನ್ನು ಹೆಚ್ಚು ತಿಂದಷ್ಟು, ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇಂತಹ ಬೆಂಡೇ ಕಾಯಿಯ ರುಚಿಯಾದ, ಸುಲಭವಾದ ಒಂದು ರೆಸಿಪಿ ಇಲ್ಲಿದೆ. ಮಾಡುವ ವಿಧಾನ :-   ಎಳೆಯದಾದ ಬೆಂಡೆ ಕಾಯಿಗಳನ್ನು ತೊಳೆದು, ಒರೆಸಿ, 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿ, ಕಾದ ಎಣ್ಣೆಯಲ್ಲಿ ಸ್ವಲ್ಪ ಕರಿದು ತೆಗೆದಿಡಿ. ತುಂಬಾ ಕೆಂಪಗೆ ಮಾಡಬೇಡಿ. 200 ಮಿ ಲೀಟರ್ ನಷ್ಟು ತಾಜಾ ಮೊಸರಿಗೆ ( Fresh curds) 2 …

Kannada ಉಪಹಾರ

IDLI & UDDINA VADE ಇಡ್ಲಿ ಮತ್ತು ಉದ್ದಿನ ವಡೆ

ಇಡ್ಲಿ, ವಡೆ ಎಲ್ಲಾ ಹೋಟೆಲ್ ಗಳಲ್ಲಿ ಬೋರ್ಡಿನಲ್ಲಿರುವ ಮೊದಲ ಹೆಸರು! ಹಾಗಾದರೆ ಅದರ ಜನಪ್ರಿಯತೆ ಎಷ್ಟು ಇರಬಹುದು ಊಹಿಸಿ! ಅದನ್ನು ತಿನ್ನುವುದಕ್ಕಾಗಿ ಎಷ್ಟೋ ಜನ ಹೋಟೆಲ್ ಗೆ ಹೋಗ್ತಾರೆ! ಮನೇಲಿ ಅಷ್ಟೇ ಚೆನ್ನಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೊದಲು ಇಡ್ಲಿ ರೆಸಿಪಿ ನೋಡೋಣ! ಇಡ್ಲಿ ಮಾಡುವ ವಿಧಾನ:- ಕುಸುಬಲಕ್ಕಿ – 3/4 ಕೇಜಿ ಉದ್ದಿನ ಬೇಳೆ – 1/4 ಕೇಜಿ ಮೆಂತ್ಯ – 1 ಚಮಚ ಗಟ್ಟಿ ಅವಲಕ್ಕಿ- 4 ಚಮಚ     ಅಕ್ಕಿ, ಅವಲಕ್ಕಿ …

Kannada ಸಾಂಬಾರು ಮತ್ತು ಪಲ್ಯಗಳು

KNOL KHOL KOSAMBARI ನೋಲ್ ಕೋಲ್ ಕೋಸಂಬರಿ (ಕೋಸು ಗೆಡ್ಡೆ ಕೋಸಂಬರಿ)

ನೋಲ್ ಕೋಲ್ ಅನ್ನು ಕನ್ನಡದಲ್ಲಿ ಕೋಸು ಗೆಡ್ಡೆ, ನವಿಲು ಕೋಸು ಎಂದುಾ ಕೂಡ ಕರೆಯುತ್ತಾರೆ. ಅದರಲ್ಲಿರುವ ಒಳ್ಳೆಯ ಅಂಶಗಳು ಹಲವಾರು. ರಕ್ತದೊತ್ತಡ ಹತೋಟಿಯಲ್ಲಿ ಇಡುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಮೂಳೆಗಳು ಗಟ್ಟಿಯಾಗಲು ಸಹಕರಿಸುತ್ತದೆ. ತೂಕ ಕಡಿಮೆ ಮಾಡಲು ಸಹಾಯ ಆಗುತ್ತೆ. ಎಷ್ಟು ಹೇಳಿದರು ಸಾಲದು ಕೋಸು ಗೆಡ್ಡೆಯ ಬಗ್ಗೆ! ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು. ಹಾಗಾದರೆ ಹಸಿಯಾಗಿ ಕೋಸು ಗೆಡ್ಡೆ ಹಾಕಿ ಮಾಡುವ ರೆಸಿಪಿ ನೋಡೋಣವೇ? ನೋಲ್ ಕೋಲ್ …