ONION PAKODA ಆನಿಯನ್ ಪಕೋಡ
ಎಲ್ಲರಿಗೂ ಇಷ್ಟವಾಗುವ ಕುರುಕಲು ತಿಂಡಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?! ಮಾಡುವ ವಿಧಾನ:- ಈರುಳ್ಳಿ ಸಿಪ್ಪೆ ತೆಗೆದು ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಹೆಚ್ಚಿಡಿ. ಬಟ್ಟಲಿನಲ್ಲಿ 1 ಅಳತೆ ಕಡಲೇ ಹಿಟ್ಟು, 1/2 ಅಳತೆ ಅಕ್ಕಿ ಹಿಟ್ಟು ಜರಡಿ ಹಿಡಿದಿಡಿ. 1 ಚಿಕ್ಕ ಬಟ್ಟಲಿನಲ್ಲಿ 1 ಚಮಚ ತುಪ್ಪ, ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ, ಕಡಲೇ ಹಿಟ್ಟಿಗೆ ಸೇರಿಸಿ. ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, 2 …







