Kannada Tindi Tinisu ಹಬ್ಬದ ಅಡುಗೆಗಳು

HANNUGALA KOSAMBARI ಹಣ್ಣುಗಳ ಕೋಸಂಬರಿ

ಹಣ್ಣುಗಳಲ್ಲಿ ಸಾಧಾರಣವಾಗಿ ಫ್ರೂಟ್ಸ್ ಸಲಾಡ್, ರಸಾಯನ ಮಾಡುತ್ತಾರೆ. ರುಚಿಯಾದ ಮಾಡುವ ವಿಧಾನ ಇಲ್ಲಿದೆ! ಹಣ್ಣುಗಳ ಕೋಸಂಬರಿ ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು , ಇಷ್ಟವಾಗುವ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ.     4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.      ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿಡಿ. ಹೆಚ್ಚಿದ ಹಣ್ಣುಗಳಿಗೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು, …

Kannada Tindi Tinisu ಚಾಟ್ಸ್

DABELI ದಬೇಲಿ

ಗುಜರಾತ್ ಮೂಲದ ಮುಂಬಯಿಯ Steet Food ನಲ್ಲಿ ಹೆಚ್ಚು ಜನಪ್ರಿಯವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ದಾಳಿಂಬೆ ಬೀಜ ಬಿಡಿಸಿಡಿ. 2 ಚಮಚ ಕಾಯಿ ತುರಿದಿಡಿ.      ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಪಾವ್ ಭಾಜಿ ಮಸಾಲ, …

Kannada ಉಪಹಾರ

PALAK IDLI FRY ಪಾಲಾಕ್ ಇಡ್ಲಿ ಫ್ರೈ

ರುಚಿಯಾದ, ಸುಲಭವಾಗಿ ಮಾಡಬಹುದಾದ ಹೊಸ ರುಚಿಯ ಪಾಲಾಕ್ ಇಡ್ಲಿ ಫ್ರೈ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಟನ್ ಇಡ್ಲಿಯ ತಟ್ಟೆಯಲ್ಲಿ ಪುಟ್ಟ ಪುಟ್ಟ ಇಡ್ಲಿಗಳನ್ನು ಮಾಡಿಡಿ. ಬಟನ್ ಇಡ್ಲಿಯ ತಟ್ಟೆ ಇಲ್ಲದಿದ್ದರೆ ಸಾಧಾರಣವಾಗಿ ಮಾಡುವ ಇಡ್ಲಿಯನ್ನೇ ಮಾಡಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಮಾಡಬಹುದು.      2 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ ಹಿಟ್ಟು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಕಲೆಸಿ, ಬೆಂದ ಇಡ್ಲಿಗಳನ್ನು ಒಂದೊಂದಾಗಿ …

Kannada ಉಪಹಾರ

GREEN PEAS PALAV ( Easy n Tasty ) ಗ್ರೀನ್ ಪೀಸ್ ಪಲಾವ್ ( ಈಝಿ & ಟೇಸ್ಟಿ )

ವರ್ಷ ಪೂರ ಎಲ್ಲಾ ಕಡೆ ಸಿಗುವ ಬಟಾಣಿಯ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ 30 ನಿಮಿಷ ನೆನೆಸಿಡಿ. 1 ಲೋಟ ಹಸಿ ಬಟಾಣಿ ಬಿಡಿಸಿ ತೊಳೆದಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.    1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಚಮಚ ಸೋಂಪು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.    ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, ಬಟಾಣಿ, ಹಸಿ …

Kannada ಚಾಟ್ಸ್

PEANUT CHAT ಪೀನಟ್ ಚಾಟ್

ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ, ಪತಿ ಆಫೀಸ್ ನಿಂದ ಬಂದ ಮೇಲೆ ಸ್ವಲ್ಪ ಖಾರಾ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ! ಪೀನಟ್ ಚಾಟ್ ಮಾಡುವ ವಿಧಾನ:- 1/4 ಕೇಜಿ ಕಡಲೇ ಬೀಜ 4 ಗಂಟೆ ನೆನೆಸಿ, ಚಿಟಿಕೆ ಉಪ್ಪು ಸೇರಿಸಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ಕಡಲೇ ಬೀಜ ನೆನೆದಷ್ಟೂ ಚೆನ್ನಾಗಿ ಬೇಯುತ್ತದೆ! ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಕಾದರೂ ಮಾಡಬಹುದು! 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    …

Kannada Oota ಸಾಂಬಾರು ಮತ್ತು ಪಲ್ಯಗಳು

KUMBALA KAYI, BANNADA SOUTHE SAMBAR ಕುಂಬಳ ಕಾಯಿ, ಬಣ್ಣದ ಸೌತೇ ಸಾಂಬಾರ್

ಸಾಧಾರಣವಾಗಿ ಎಲ್ಲಾ ಕಡೆ ಸಿಗುವ ತರಕಾರಿಗಳಾದ ಸಿಹಿ ಕುಂಬಳ ಮತ್ತು ಬಣ್ಣದ ಸೌತೇ ಕಾಯಿಯ ರುಚಿಯಾದ ಸಾಂಬಾರ್ ಮಾಡುವ ರೆಸಿಪಿ ಇಲ್ಲಿದೆ! ಕುಂಬಳ ಕಾಯಿ, ಬಣ್ಣದ ಸೌತೇ ಕಾಯಿ ಸಾಂಬಾರ್ ಮಾಡುವ ವಿಧಾನ:- 1/4 ತೊಗರಿ ಬೇಳೆ ತೊಳೆದು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಡಿ. 1/4 ಕೇಜಿ ಸಿಹಿ ಕುಂಬಳ, ಒಂದು ಬಣ್ಣದ ಸೌತೇ ಕಾಯಿ (ಮಂಗಳೂರು ಸೌತೇ ಕಾಯಿ) ಬೀಜ ತೆಗೆದು ಸಿಪ್ಪೆ ಸಮೇತ ದೊಡ್ಡ ದೊಡ್ಡದಾಗಿ ಹೆಚ್ಚಿ ಬೇರೆ ಬೇಯಿಸಿಡಿ. ಬಣ್ಣದ ಸೌತೇ …

Kannada ಉಪಹಾರ

JOLADA DOSE ಜೋಳದ ದೋಸೆ

ಎಲ್ಲರಿಗೂ ಗೊತ್ತಿರುವ ಹಾಗೆ ಜೋಳ ಆರೋಗ್ಯಕ್ಕೆ ಒಳ್ಳೆಯದು! ಜೋಳದ ಹಿಟ್ಟಿನ ರುಚಿಯಾದ ದೋಸೆ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಅಳತೆ ಜೋಳದ ಹಿಟ್ಟು, 1/2 ಅಳತೆ ಚಿರೋಟಿ ರವೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, 1 ಚಮಚ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ, ಉಪ್ಪು, ಸಣ್ಣಗೆ ಹೆಚ್ಚಿದ 1 ಈರುಳ್ಳಿ ( Optional ) ಹಾಕಿ ಸುಮಾರು 3 3/4 ರಿಂದ 4 ಅಳತೆ ನೀರು ಹಾಕಿ …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

MAVINA KAYI GOJJU ಮಾವಿನ ಕಾಯಿ ಗೊಜ್ಜು

ಬೇಸಿಗೆ ಬಂತೆಂದರೆ ಎಲ್ಲಾ ಕಡೆ ಮಾವಿನ ಕಾಯಿ, ಹಣ್ಣಿನ ಸುವಾಸನೆ ತುಂಬಿ ಹೋಗುತ್ತದೆ! ಮಾವಿನ ಕಾಯಿಯಿಂದ ಮಾಡುವ ಸುಲಭವಾದ, ರುಚಿಯಾದ, ತಿಂಗಳಾದರೂ ಕೆಡದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಗಟ್ಟಿಯಾದ ತೋತಾಪುರಿ ಮಾವಿನ ಕಾಯಿ ಆಯ್ಕೆ ಮಾಡಿ ಕೊಳ್ಳಿ. ಗುಂಡು ಮಾವಿನಲ್ಲೂ ಮಾಡಬಹುದು. ಸ್ವಲ್ಪ ಹುಳಿ ಹೆಚ್ಚು ಇರುತ್ತದೆ! ತೋತಾಪುರಿ ಮಾವು ಹುಳಿ ಕಡಿಮೆ! 2 ಮಾವಿನ ಕಾಯಿ ತೊಳೆದು, ಒರೆಸಿ ತುರಿದಿಡಿ. ನೀರಿನಂಶ ಸ್ವಲ್ಪವೂ ಇರಬಾರದು ಈ ಗೊಜ್ಜು ಮಾಡುವಾಗ!    1 ಟೀ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

CARROT SHANKARA POLI ಕ್ಯಾರೆಟ್ ಶಂಕರ ಪೋಳಿ

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ನಮ್ಮ ಮುದ್ದು ಮಕ್ಕಳು ಕ್ಯಾರೆಟ್ ಕೊಟ್ಟರೆ ತಿನ್ನುವುದಿಲ್ಲ. ಹೀಗೆ ಮಾಡಿ ಕೊಡಿ! ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು, ನೀರು ಹಾಕದೆ ನುಣ್ಣಗೆ ರುಬ್ಬಿಡಿ. ತೀರಾ ಬೇಕೆನಿಸಿದರೆ 1 ಅಥವಾ 2 ಚಮಚ ನೀರು ಹಾಕಿ.      1/2 ಹಿಡಿ ಗೋಡಂಬಿ, 1/2 ಹಿಡಿ ಬಾದಾಮಿ ಹಸಿಯಾಗೆ ಪುಡಿ ಮಾಡಿಡಿ. Dry fruits optional! ಬೇಕಾದರೆ ಹಾಕಿಕೊಳ್ಳಬಹುದು. ನಿಮ್ಮ ರುಚಿಗೆ ತಕ್ಕ ಹಾಗೆ ಹೆಚ್ಚು …

Kannada Oota ಸಾಂಬಾರು ಮತ್ತು ಪಲ್ಯಗಳು

UPPU SAARU ಉಪ್ಪು ಸಾರು

ನಮ್ಮ ಬಸ್ಸಾರಿನ ತಮ್ಮ ಅಂತ ಹೇಳಬಹುದು. ರುಚಿಯಾಗಿ, ಸುಲಭವಾಗಿ ಮಾಡಬಹುದಾದ ಸಾರು! ಮಾಡುವ ವಿಧಾನ:- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ, ಕಾಳು, ಸೊಪ್ಪು ಬೇಳೆ ಜೊತೆಗೆ ಬೇಯಿಸಿ ನೀರು ಸೋರಿ ಹಾಕಿ, ಕಟ್ಟು ತೆಗೆದಿಡಿ. ಕಟ್ಟನ್ನು ಸಾರು ಭಾಡಲು ಉಪಯೋಗಿಸಿ. ಬೇಯಿಸಿದ್ದನ್ನು ಒಗ್ಗರಣೆ ಹಾಕಿ ಪಲ್ಯ ಮಾಡಿ. ಖಾರಾ ಮಸಾಲೆ ರುಬ್ಬಲು:- 6 ರಿಂದ 8 ಒಣ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.    ಹುರಿದ ಮೆಣಸಿನಕಾಯಿ, 1 ಚಿಕ್ಕ …