Showing 84 Result(s)
Kannada Tindi Tinisu ಖಾರ ತಿನಿಸುಗಳು

VEGETABLE BONDA ವೆಜಿಟೇಬಲ್ ಬೋಂಡಾ

ಈ ಹವಾಮಾನಕ್ಕೆ ಬಿಸಿ ಬಿಸಿಯಾದ ಬೋಂಡಾ ಎಷ್ಟು ಚೆನ್ನ ಅಲ್ಲವೇ?! ಬೋಂಡಾ ರುಚಿಯಾಗಿ ಮತ್ತು ಆರೋಗ್ಯಕರವಾಗಿದ್ದರೆ ಮತ್ತೂ ಚೆನ್ನ! ವೆಜಿಟೇಬಲ್ ಬೋಂಡಾ ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಕುಕ್ಕರಿನಲ್ಲಿ ನೀರು ಹಾಕದೆ ಇಡ್ಲಿಯ ಹಾಗೆ 10 ನಿಮಿಷ ಹಬೆಯಲ್ಲಿ ಬೇಯಿಸಿಡಿ. ಹುರುಳಿ ಕಾಯಿ, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ, ಗೋಭಿ ಸ್ವಲ್ಪ ಸ್ವಲ್ಪ ಹಾಕಬಹುದು. 1 ಈರುಳ್ಳಿ,2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೆಂದ ತರಕಾರಿಗಳನ್ನು ನೀರು ಸೋರಿ ಹಾಕಿಡಿ. ಬಾಣಲೆಯಲ್ಲಿ …

Kannada Tindi Tinisu ಖಾರ ತಿನಿಸುಗಳು

MOSARU KODUBALE ಮೊಸರು ಕೋಡು ಬಳೆ

ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ:- ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಕರಿಬೇವು, ಹಸಿ ಮೆಣಸಿನ ಕಾಯಿ, ಉಪ್ಪು, 1 1/2 ಲೋಟ ಸ್ವಲ್ಪ ಹುಳಿಯಾದ ಮೊಸರು ಹಾಕಿ ಕುದಿಯಲು ಇಡಿ. ಮೊಸರು ಕುದಿಯಲು ಪ್ರಾರಂಭವಾದಾಗ 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿ. ಒದ್ದೆ ಕೈಯಿಂದ ಮುಟ್ಚಿದರೆ ಕೈಗೆ ಹಿಟ್ಟು ಅಂಟದಿದ್ದರೆ ಹಿಟ್ಟು ಬೆಂದಿದೆ ಎಂದು …

Kannada Tindi Tinisu ಖಾರ ತಿನಿಸುಗಳು

POTATO CHIPS ಪೊಟೇಟೋ ಚಿಪ್ಸ್

ಯಾರಿಗೆ ಇಷ್ಟ ಇಲ್ಲ ಹೇಳಿ! ಹೊರಗಡೆಯಿಂದ ತಂದು ಯಾವಾಗಲೂ ತಿನ್ನುತ್ತೇವೆ. ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ!    ನಿಮಗೆ ಬೇಕಾದಷ್ಟು ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು Slicer ನಲ್ಲಿ ತೆಳ್ಳಗೆ Slice ಮಾಡಿಕೊಳ್ಳಿ. ತಣ್ಣನೆಯ ನೀರಿಗೆ 1 ಚಮಚ ಉಪ್ಪು ಹಾಕಿ ಆಲೂಗೆಡ್ಡೆ Slice ಗಳನ್ನು ಹಾಕಿ 15 ನಿಮಿಷ ಇಡಿ.    ನಂತರ ನೀರು ಪೂರ ಸೋರಿ ಹಾಕಿ, ಒಗೆದ ಟವೆಲ್/ ಕಿಚನ್ ಟವೆಲ್ ಮೇಲೆ ಹಾಕಿ ಪೂರ್ಣವಾಗಿ ಒಣಗಿಸಿ. ನೀರಿನಂಶ ಸ್ವಲ್ಪವೂ ಇರಬಾರದು! …

Kannada Tindi Tinisu ಖಾರ ತಿನಿಸುಗಳು

BABY CORN PEPPER DRY ಬೇಬಿ ಕಾರ್ನ್ ಪೆಪ್ಪರ್ ಡ್ರೈ

ಮಕ್ಕಳ ಅಚ್ಚು ಮೆಚ್ಚಿನ ತರಕಾರಿ ಬೇಬಿ ಕಾರ್ನ್. ಬಹಳ ಇಷ್ಟ ಪಟ್ಟು ತಿನ್ನುತ್ತಾರೆ.ಮಾಡುವ ವಿಧಾನ:- ಬೇಬಿ ಕಾರ್ನ್ ತೊಳೆದು ಸಣ್ಣಗೆ, ತೆಳ್ಳಗೆ ಹೆಚ್ಚಿಡಿ. ಸ್ವಲ್ಪ ಕಾರ್ನ್ ಫ್ಲೋರ್, ಸ್ವಲ್ಪ ಮೈದಾ ಹಿಟ್ಟು, ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ. ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆದಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.     4 ಹಸಿ ಮೆಣಸಿನ …

Kannada Tindi Tinisu ಖಾರ ತಿನಿಸುಗಳು

NIPATTU ನಿಪ್ಪಟ್ಟು

ಮಾಡುವ ವಿಧಾನ:- 2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1/4 ಗಿಟುಕು ಕೊಬ್ಬರಿ ತುರಿದಿಡಿ. 2 ಹಿಡಿ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. ( Optional) 2 ಚಮಚ ಹುರಿಗಡಲೆ, ಕಡಲೇ ಬೀಜ Mixie ಯಲ್ಲಿ ಹಾಕಿ ಎರಡು ಸುತ್ತು ಸುತ್ತಿಸಿ ತರಿ ತರಿಯಾಗಿ ಪುಡಿ ಮಾಡಿಡಿ. ದೊಡ್ಡ ಪಾತ್ರೆಯಲ್ಲಿ 1 ಪಾವು ಅಕ್ಕಿ ಹಿಟ್ಟು, 2 ಚಮಚ ಮೈದಾ, 2 ಚಮಚ ಚಿರೋಟಿ ರವೆ, 1 ಚಮಚ ಖಾರಾಪುಡಿ, ಸ್ವಲ್ಪ …

Kannada Tindi Tinisu ಖಾರ ತಿನಿಸುಗಳು

CRISPY GOBI ಕ್ರಿಸ್ಪಿ ಗೋಬಿ

ಸಂಜೆ ಹೊತ್ತಿನಲ್ಲಿ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಆಗ ಗರಿ ಗರಿಯಾದ, ಖಾರಾ ಖಾರಾ ಕ್ರಿಸ್ಪಿ ಗೋಬಿ ಮಾಡಿ ಕೊಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 1 ಹೂ ಕೋಸು ಬಿಡಿಸಿ ಬಿಸಿ ನೀರಲ್ಲಿ 10 ನಿಮಿಷ ಹಾಕಿ ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.        ಹೂ ಕೋಸಿಗೆ …

Kannada Tindi Tinisu ಖಾರ ತಿನಿಸುಗಳು ಸಿಹಿ ತಿನಿಸುಗಳು

SIHI MATTHU KHARA HOLIGE ಸಿಹಿ ಮತ್ತು ಖಾರಾ ಹೋಳಿಗೆ ( ಹಬ್ಬದ ವಿಶೇಷ)

1/2 ಕೇಜಿ ತೊಗರಿ ಬೇಳೆ ತೊಳೆದು ಕುಕ್ಕರಿನಲ್ಲಿ ಹಾಕಿ 90% ಬೇಯಿಸಿ ಕೊಂಡು ನೀರು ಸೋರಿ ಹಾಕಿಡಿ.1 ತೆಂಗಿನ ಕಾಯಿ ತುರಿದಿಡಿ. 1/4 ಕೇಜಿ ಮೈದಾ, ಚಿಟಿಕೆ ಅರಿಶಿಣ, ಚಿಟಿಕೆ ಉಪ್ಪು , ಸ್ವಲ್ಪ ಎಣ್ಣೆ ಹಾಕಿ ಮೆತ್ತಗೆ ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ 1 ಗಂಟೆ ಮುಚ್ಚಿಡಿ ‌ 1/2 ಕೇಜಿ ಬೆಲ್ಲ ತುರಿದಿಡಿ.         ಬೆಂದ ಬೇಳೆ, ಬೆಲ್ಲದ ಪುಡಿ, ಕಾಯಿ ತುರಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಬಾಣಲೆಯಲ್ಲಿ …

Kannada Tindi Tinisu ಖಾರ ತಿನಿಸುಗಳು

RAVA KODUBALE ರವಾ ಕೋಡುಬಳೆ

ಕೋಡುಬಳೆ ಎಲ್ಲರ ಅಚ್ಚು ಮೆಚ್ಚಿನ ತಿಂಡಿ! ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕೋಡುಬಳೆ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಮಾಡುವ ವಿಧಾನ:- 1 ಬಟ್ಟಲು ಚಿರೋಟಿ ರವೆ ಹುರಿಯದೆ ಹಸಿಯಾಗೆ 1 ದೊಡ್ಡ ಬಟ್ಟಲಿನಲ್ಲಿ ಹಾಕಿಡಿ. 1/4 ಬಟ್ಟಲು ಕಾಯಿ ತುರಿ 4 ಅಥವಾ 5 ಹಸಿ ಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ಚಟ್ನಿಯ ಹಾಗೆ ರುಬ್ಬಿ. ಖಾರಾ ನಿಮಗೆ ಬೇಕಾಗುವಷ್ಟು ಹಾಕಿ. 1 ಹಿಡಿ ಕರಿಬೇವು ಸಣ್ಣಗೆ ಹೆಚ್ಚಿ ಅಥವಾ …

Kannada Tindi Tinisu ಖಾರ ತಿನಿಸುಗಳು

SOPPINA BONDA ಸೊಪ್ಪಿನ ಬೋಂಡಾ

ಮಳೆಗಾಲದಲ್ಲಿ ಖಾರಾ ಖಾರಾ ಬೋಂಡಾ ತಿನ್ನಲು ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಅದೂ ಸೊಪ್ಪಿನ ಬೋಂಡಾ ಆದರೆ ಇನ್ನೂ ಚೆಂದ! ಮಾಡುವ ವಿಧಾನ:- ನಿಮಗೆ ಬೇಕಾದ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ಹರಿವೆ ಸೊಪ್ಪು 2 ಕಟ್ಟು, ಸಬ್ಬಾಕ್ಷಿ ಸೊಪ್ಪು 2 ಕಟ್ಟು, ಕೊತ್ತಂಬರಿ 1/2 ಕಟ್ಟು. ಎಲ್ಲಾ ಸೊಪ್ಪಿನ ಫೋಟೋ ಹಾಕಿದ್ದೇನೆ. ಹರಿವೆ ಸೊಪ್ಪು ನೋಡಲು ಸ್ವಲ್ಪ ದಂಟು ಸೊಪ್ಪಿನ (ರಾಜಾ ಗಿರಿ ಸೊಪ್ಪು) ಹಾಗೆ ಇರುತ್ತದೆ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಹಸಿ …

Kannada Tindi Tinisu ಖಾರ ತಿನಿಸುಗಳು

MASALA HIDUKIDA BELE ಮಸಾಲ ಹಿದುಕಿದ ಬೇಳೆ

ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಏನಾದರೂ ತಿನ್ನಬೇಕು ಅನ್ನಿಸಿದರೆ ಈ ಮಸಾಲ ಹಿದುಕಿದ ಬೇಳೆ ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ಹತ್ತಿ ಬಟ್ಟೆಯ ಮೇಲೆ ಹರಡಿ, 1 ಗಂಟೆ ಒಣಗಿಸಿ. 1/2 ಗಿಟುಕು ಒಣ ಕೊಬ್ಬರಿ ಸಣ್ಣಗೆ, ತೆಳ್ಳಗೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ನಂತರ ಉರಿ ಕಡಿಮೆ ಮಾಡಿ ಸ್ವಲ್ಪ ಸ್ವಲ್ಪವೇ ಹಿದುಕಿದ ಬೇಳೆ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ. 2 …