NUCHHINUNDE ನುಚ್ಚಿನುಂಡೆ
ಬಹಳ ಹಳೆಯ, ಆರೋಗ್ಯಕರ ರೆಸಿಪಿ. ಮಾಡುವ ವಿಧಾನ:- 1 ಲೋಟ (ಪಾವು) ಕಡಲೇ ಬೇಳೆ 2 ಗಂಟೆ ನೆನೆಸಿಡಿ. ಬೇಕಾದರೆ 1/2 ಭಾಗ ಕಡಲೇ ಬೇಳೆ 1/2 ಭಾಗ ತೊಗರಿ ಬೇಳೆ ಹಾಕಿಕೊಳ್ಳಬಹುದು. ನೆಂದ ಬೇಳೆಯನ್ನು ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. 4 ಹಸಿ ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿಡಿ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.(ಬೇಕಾದರೆ) 4 ಚಮಚ ಕಾಯಿ …









