UPPU SAARU ಉಪ್ಪು ಸಾರು
ನಮ್ಮ ಬಸ್ಸಾರಿನ ತಮ್ಮ ಅಂತ ಹೇಳಬಹುದು. ರುಚಿಯಾಗಿ, ಸುಲಭವಾಗಿ ಮಾಡಬಹುದಾದ ಸಾರು! ಮಾಡುವ ವಿಧಾನ:- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ, ಕಾಳು, ಸೊಪ್ಪು ಬೇಳೆ ಜೊತೆಗೆ ಬೇಯಿಸಿ ನೀರು ಸೋರಿ ಹಾಕಿ, ಕಟ್ಟು ತೆಗೆದಿಡಿ. ಕಟ್ಟನ್ನು ಸಾರು ಭಾಡಲು ಉಪಯೋಗಿಸಿ. ಬೇಯಿಸಿದ್ದನ್ನು ಒಗ್ಗರಣೆ ಹಾಕಿ ಪಲ್ಯ ಮಾಡಿ. ಖಾರಾ ಮಸಾಲೆ ರುಬ್ಬಲು:- 6 ರಿಂದ 8 ಒಣ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. ಹುರಿದ ಮೆಣಸಿನಕಾಯಿ, 1 ಚಿಕ್ಕ …