MILK POWDER BURFI ಮಿಲ್ಕ್ ಪೌಡರ್ ಬರ್ಫಿ
ನಮಸ್ಕಾರ, ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬದ ಶುಭಾಷಯಗಳು. ಹಾಲಿನ ಪುಡಿ ಮನೆಯಲ್ಲಿದ್ದರೆ ಕೇವಲ 10 ನಿಮಿಷದಲ್ಲಿ ಮಾಡಬಹುದಾದ, ಸುಲಭವಾದ, ರುಚಿಯಾದ ಸಿಹಿ ತಿಂಡಿ! ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1/2 ಅಳತೆ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ 2 ಅಳತೆ ಮಿಲ್ಕ್ ಪೌಡರ್, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಉರಿ ಮಧ್ಯಮ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು …



