Showing 41 Result(s)
Kannada ಚಾಟ್ಸ್

PEANUT CHAT ಪೀನಟ್ ಚಾಟ್

ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ, ಪತಿ ಆಫೀಸ್ ನಿಂದ ಬಂದ ಮೇಲೆ ಸ್ವಲ್ಪ ಖಾರಾ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ! ಪೀನಟ್ ಚಾಟ್ ಮಾಡುವ ವಿಧಾನ:- 1/4 ಕೇಜಿ ಕಡಲೇ ಬೀಜ 4 ಗಂಟೆ ನೆನೆಸಿ, ಚಿಟಿಕೆ ಉಪ್ಪು ಸೇರಿಸಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ಕಡಲೇ ಬೀಜ ನೆನೆದಷ್ಟೂ ಚೆನ್ನಾಗಿ ಬೇಯುತ್ತದೆ! ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಕಾದರೂ ಮಾಡಬಹುದು! 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    …

Kannada Tindi Tinisu ಚಾಟ್ಸ್

AVALAKKI BHEL ಅವಲಕ್ಕಿ ಭೇಲ್

ಸಂಜೆ ವೇಳೆಗೆ ಕಾಫಿ ಟೀ ಜೊತೆಗೆಚೆನ್ನಾಗಿರುತ್ತದೆ! ಯಾವಾಗಲೂ ಕಡಲೇ ಪುರಿಯಲ್ಲಿ ಮಾಡುವ ಭೇಲ್ ಅನ್ನು ಬದಲಾವಣೆಗಾಗಿ ಪೇಪರ್ ಅವಲಕ್ಕಿಯಲ್ಲಿ ಮಾಡಿನೋಡಿ! ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 1 ಲೋಟ ಪೇಪರ್ ಅವಲಕ್ಕಿಯನ್ನು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ. ಅಥವಾ Oven ನಲ್ಲಿ ಸ್ವಲ್ಪ ಎಣ್ಣೆ ಸವರಿ 1 ನಿಮಿಷ ಬಿಸಿ ಮಾಡಿ ತೆಗೆದಿಡಿ. ನಾನು Oven ನಲ್ಲಿಯೇ ಮಾಡಿರುವುದು! 2 ಚಮಚ ಪುದೀನಾ, 2 ಚಮಚ ಕೊತ್ತಂಬರಿ ಸೊಪ್ಪು, 1 …

Kannada Tindi Tinisu ಚಾಟ್ಸ್ ಸಾಂಬಾರು ಮತ್ತು ಪಲ್ಯಗಳು

SWEET CORN MASALA ಸ್ವೀಟ್ ಕಾರ್ನ್ ಮಸಾಲ

ಮಕ್ಕಳಿಗೆ ಬಹಳ ಇಷ್ಟವಾಗುವ ಗ್ರೇವಿ! ಮಾಡುವ ವಿಧಾನ:- 100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿಟ್ಟು ಕೊಳ್ಳಿ. 1 ಈರುಳ್ಳಿ, 2 ಟೋಮೋಟೋ, 4 ರಿಂದ 6 ಹಸಿ ಮೆಣಸಿನಕಾಯಿ, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ. ಹಸಿ ಮೆಣಸಿನಕಾಯಿ ಬದಲಾಗಿ ಕೆಂಪು ಮೆಣಸಿನಕಾಯಿ ಬೇಕಾದರೆ ಹಾಕಬಹುದು. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಚಿಟಿಕೆ ಅರಿಷಿಣ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1/2 ಚಮಚ ಧನಿಯ ಪುಡಿ, 1/2 …

Kannada Tindi Tinisu ಚಾಟ್ಸ್

MOLAKE KALUGALA PAV BHAJI ಮೊಳಕೆ ಕಾಳುಗಳ ಪಾವ್ ಭಾಜಿ

ಪಾವ್ ಭಾಜಿ ಎಲ್ಲರ ಪ್ರಿಯವಾದ ತಿಂಡಿ! ಮಕ್ಕಳಿಗಂತೂ ಬಹಳ ಪ್ರಿಯವಾದದ್ದು! ಸಾಧಾರಣವಾಗಿ ಭಾಜಿ ಎಲ್ಲರೂ ತರಕಾರಿಗಳನ್ನು ಹಾಕಿ ಮಾಡುತ್ತಾರೆ. ಮೊಳಕೆ ಕಾಳುಗಳನ್ನು ಹಾಕಿ ಮಾಡಿರುವದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- ಭಾಜಿ ಮಾಡಲು:- 1/2 ಲೋಟ ಕಡಲೇ ಕಾಳು, 1/2 ಲೋಟ ಹೆಸರು ಕಾಳು ನೆನೆಸಿ ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ.    ಮರುದಿನ 1 ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಕತ್ತರಿಸಿ, ಮೊಳಕೆ ಕಾಳುಗಳು, ಒಂದು ಹಿಡಿ ಹಸಿ …

Kannada ಚಾಟ್ಸ್

MASALA POORI (Chat) ಮಸಾಲ ಪೂರಿ (ಚಾಟ್)

  ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ! ಪೂರಿ ಮಾಡುವ ವಿಧಾನ:-      1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, 1 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ. …

Kannada Tindi Tinisu ಚಾಟ್ಸ್

PAANI POORI ಪಾನಿ ಪೂರಿ

ಪಾನಿ ಪೂರಿ ಮತ್ತೊಂದು ಜನಪ್ರಿಯ ಚಾಟ್!!! ಮಕ್ಕಳಂತೂ ಊಟ ಬಿಟ್ಟು ಇದ್ದಾರು! ಆದರೆ ಪಾನಿ ಪೂರಿ ಬಿಟ್ಟು ಇರಲಾರರು! ಹಾಗಾದರೆ ಅವರ ಇಷ್ಟವಾದ ಚಾಟ್ ಅನ್ನು ನೀವು ಮನೆಯಲ್ಲಿ ಏಕೆ ಮಾಡಿ ಕೊಡಬಾರದು? ಮಾಡೋದು ತುಂಬಾ ಸುಲಭ! ಪಾನಿ ಪೂರಿ ಮಾಡುವ ವಿಧಾನ:- ಮೊದಲು ಪೂರಿ ಮಾಡೋಣ. 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, 2 ಚಮಚ ಉದ್ದಿನ ಬೇಳೆ ಸ್ವಲ್ಪ ಹುರಿದು ಪುಡಿ ಮಾಡಿದ್ದು, 1 ಚಮಚ ಬೆಣ್ಣೆ, ಉಪ್ಪು ಹಾಕಿ ಕಲೆಸಿ, ಸ್ವಲ್ಪ …

Kannada ಚಾಟ್ಸ್

KATORI CHAT ಕಟೋರಿ ಚಾಟ್

ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು (BOWL) ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್! ಸಾಧಾರಣವಾಗಿ ಕಟೋರಿಗಳನ್ನು ಹೋಟೆಲ್ ಗಳಲ್ಲಿ ಬೇಕ್ ಮಾಡುತ್ತಾರೆ, ನಾನು ಎಣ್ಣೆಯಲ್ಲಿ ಕರಿದು ಮಾಡಿದ್ದೇನೆ. ಮಾಡುವ ವಿಧಾನ:-         ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ನಾನು ಹೆಸರು ಕಾಳು, ಕಾಬೂಲ್ ಕಡಲೆ ಹಾಕಿದ್ದೇನೆ. ನೀವು ಬೇರೆ ಬೇರೆ ಕಾಳು ಮಿಶ್ರಣ ಮಾಡಿ ಅಥವಾ ಯಾವುದೇ ಒಂದು …

Kannada ಚಾಟ್ಸ್

MOSARU BELE ಮೊಸರು ಬೇಳೆ

ಸಾಮಾನ್ಯವಾಗಿ ಹುರಿಗಾಳು ಅಂಗಡಿಗಳಲ್ಲಿ ಹೆಚ್ಚು ಮಾರಾಟವಾಗುವ ಕರಿದ ತಿಂಡಿ! ಮೊಸರಲ್ಲಿ ನೆನೆಸಿ ಮಾಡುವ ಬೇಳೆ! ಅದರ ರೆಸೆಪಿ ನೋಡೋಣವೇ? ಮಾಡುವ ವಿಧಾನ:-      ತೊಗರಿ ಬೇಳೆಯನ್ನು ಹುಳಿ ಮಜ್ಜಿಗೆಯಲ್ಲಿ 4 ಗಂಟೆ ನೆನೆಸಿಡಿ. ನಂತರ ಮಜ್ಜಿಗೆಯಿಂದ ತೆಗೆದು ಸೋರಿಹಾಕಿ. ಮಜ್ಜಿಗೆ ಪೂರ್ತಿ ಹೋದ ಮೇಲೆ, ಒಗೆದ ಒಣಬಟ್ಟೆ ಮೇಲೆ ಹರಡಿ ನೆರಳಲ್ಲಿ 1 ಗಂಟೆ ಒಣಗಿಸಿ.      ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಒಂದು ಜಾಲರ ಬಾಣಲೆಯಲ್ಲಿ ಇಡುವ ಹಾಗೆ ನೋಡಿ ಕೊಂಡು(ಚಿತ್ರ ನೋಡಿ), ಜಾಲರ …

Kannada ಚಾಟ್ಸ್

ALU SEV ಆಲೂ ಸೇವ್

ಸಾಧಾರಣ ಖಾರಾ ಸೇವ್ ಗಿಂತ ಸ್ವಲ್ಪ ರುಚಿ ಭಿನ್ನ! ಮಾಡುವ ವಿಧಾನ:- ಆಲೊಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿಯಿರುವಾಗಲೇ ನುಣ್ಣಗೆ ಪುಡಿ ಮಾಡಿಡಿ.     ಬಟ್ಟಲಿನಲ್ಲಿ ಆಲೂ ಮಿಶ್ರಣಕ್ಕೆ ಹಿಡಿಸುವಷ್ಟು ಕಡಲೆ ಹಿಟ್ಟು, 1 ಚಮಚ ಖಾರಾ ಪುಡಿ, 1 ಚಮಚ ಆಮ್ ಚೂರ್ ಪುಡಿ, 2 ಚಮಚ ಅಕ್ಕಿ ಹಿಟ್ಟು, ಉಪ್ಪು, 1 ಚಮಚ ಬೆಣ್ಣೆ , 1/2 ಚಮಚ ಓಂ ಕಾಳು ಹಾಕಿ ಚೆನ್ನಾಗಿ ಕಲೆಸಿ.     ಚಕ್ಕುಲಿ ಒರಳಿಗೆ ಸ್ವಲ್ಪ …