Kannada Oota ಉಪಹಾರ

PUDINA PALAV ಪುದೀನಾ ಪಲಾವ್

ಸಿಂಪಲ್ ಅಂಡ್ ಟೇಸ್ಟಿ ಪಲಾವ್! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಲ್ಲವೇ?

ಮಾಡುವ ವಿಧಾನ:-

1 ಲೋಟ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹೆಚ್ಚು ನೀರು ಹಾಕಿ ಅನ್ನ ಮಾಡಿ ನೀರು ಸೋರಿ ಹಾಕಿಡಿ.

1 ಈರುಳ್ಳಿ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ.

1 ಕಟ್ಟು ಪುದೀನಾ, 4 ಕಡ್ಡಿ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಪಲಾವ್ ಎಲೆ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹುರಿದು, ನಂತರ ಕ್ಯಾಪ್ಸಿಕಮ್ ಹಾಕಿ ಸ್ವಲ್ಪ ಬಾಡಿಸಿ, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಉಪ್ಪು, ಬೇಯಿಸಿದ ಅನ್ನ ಹಾಕಿ ಮೃದುವಾಗಿ ಕಲೆಸಿ ಕಡಿಮೆ ಉರಿಯಲ್ಲಿ ಬೇಯಿಸಿ.

   

ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ಬೇಕಾದರೆ ಹಾಕಿ, ಮೊಸರು ಬಜ್ಜಿಯೊಂದಿಗೆ ಬಡಿಸಿ.

ಧನ್ಯವಾದಗಳು.

Leave a Reply

Your email address will not be published.