ಮಾಡುವ ವಿಧಾನ:-
1 ಲೀಟರ್ ಕಡಲೇ ಪುರಿ ( ಮಂಡಕ್ಕಿ ) ಯನ್ನು ಸ್ವಲ್ಪ ಆರಿಸಿಡಿ.
1 ಈರುಳ್ಳಿ, 2 ಟೋಮೋಟೋ, 1/2 ಸೌತೇ ಕಾಯಿ ಸಣ್ಣಗೆ ಹೆಚ್ಚಿಡಿ.
1 ಕ್ಯಾರೆಟ್, 1/2 ತೋತಾಪುರಿ ಮಾವಿನ ಕಾಯಿ ತುರಿದಿಡಿ. ಮಾವಿನ ಕಾಯಿ ಸಿಗದಿದ್ದರೆ ನಿಂಬೆ ರಸ ಹಾಕಿಕೊಳ್ಳಬಹುದು.
1 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿಸೊಪ್ಪು, 1 ಹಸಿ ಮೆಣಸಿನಕಾಯಿ, ಸ್ವಲ್ಪ ನಿಂಬೆ ರಸ, ಉಪ್ಪು ಹಾಕಿ ಹಸಿರು ಚಟ್ನಿ ಮಾಡಿಡಿ.
2 ಚಮಚ ಹುಣಿಸೆ ರಸ, ಚೂರು ಬೆಲ್ಲ ಕುದಿಸಿ ಸಿಹಿ ಚಟ್ನಿ ಮಾಡಿಡಿ.
ದೊಡ್ಡ ಪಾತ್ರೆಯಲ್ಲಿ ಹೆಚ್ಚಿದ ತರಕಾರಿಗಳು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಮುರಿದ ಪಾನಿ ಪೂರಿ 8 ರಿಂದ 10, ಸ್ವಲ್ಪ ಮುರಿದ ಆಲೂ ಚಿಪ್ಸ್, ಸಿಹಿ ಚಟ್ನಿ, ಹಸಿರು ಚಟ್ನಿ, ಸ್ವಲ್ಪ ಉಪ್ಪು, 1/2 ಚಮಚ ಖಾರದ ಪುಡಿ, ಕಡಲೇ ಪೂರಿ, ಸ್ವಲ್ಪ ಕಾಂಗ್ರೆಸ್ ಕಡಲೇ ಬೀಜ ಹಾಕಿ ಬೇಗ ಬೇಗ ಕಲೆಸಿ ಮೇಲೆ ಸ್ವಲ್ಪ ಸೇವ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ತಕ್ಷಣ ಸವಿಯಿರಿ!
ಧನ್ಯವಾದಗಳು



