Oota ಉಪಹಾರ

GHEE RICE ಘೀ ರೈಸ್ ( ಮದುವೆ ಮನೆ ಶೈಲಿ )

ಮದುವೆ ಮನೆಯಲ್ಲಿ ಮಾಡುವ ಘಮ ಘಮಿಸುವ ಘೀ ರೈಸ್ ವಿಧಾನ ಇಲ್ಲಿದೆ!

1 ಲೋಟ ಬಾಸುಮತಿ ಅಕ್ಕಿ ತೊಳೆದು ಒಂದು ಗಂಟೆ ಕಾಲ ನೆನೆಸಿಡಿ.

2 ಲೋಟ ಕಾಯಿ ಹಾಲು ತೆಗೆದಿಡಿ.

 

1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ, 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 2 ಹಿಡಿ ಹಸಿ ಬಟಾಣಿ ಬಿಡಿಸಿಡಿ.

2 ಕಡ್ಡಿ ಕೊತ್ತಂಬರಿ, 2 ಕಡ್ಡಿ ಪುದೀನಾ, 4 ಬೆಳ್ಳುಳ್ಳಿ ಎಸಳು, 1 ಇಂಚು ಶುಂಠಿ, 4 ಲವಂಗ, 1 ಏಲಕ್ಕಿ, 1 ಇಂಚು ಚಕ್ಕೆ, 1 ಟೀ ಚಮಚ ಸೋಂಪು ಇಷ್ಟನ್ನು ಸ್ವಲ್ಪ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿಡಿ.

ಕುಕ್ಕರಿನಲ್ಲಿ ನಾಲ್ಕು ಚಮಚ ತುಪ್ಪ ಹಾಕಿ ಪಲಾವ್ ಎಲೆ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ, ಹಸಿ ಬಟಾಣಿ, ಗೋಡಂಬಿ, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಬಾಸುಮತಿ ಅಕ್ಕಿ ಹಾಕಿ ಎಚ್ಚರಿಕೆಯಿಂದ ಕಲೆಸಿ ಕಾಯಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು, 1/2 ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿದರೆ ರುಚಿಯಾದ, ಘಮ ಘಮಿಸುವ, ಬಾಯಲ್ಲಿ ನೀರೂರಿಸುವ ಘೀ ರೈಸ್ ಸವಿಯಲು ಸಿದ್ಧ!

ಕೊತ್ತಂಬರಿ, ಪುದೀನಾ ಬೇಕಾದರೆ ಎರಡು ಕಡ್ಡಿ ಹಾಕಿ. ಹೆಚ್ಚು ಬೇಡ.

ನಿಂಬೆ ರಸ ಹಾಕುವುದರಿಂದ ಅಕ್ಕಿ ಒಂದಕ್ಕೊಂದು ಅಂಟುವುದಿಲ್ಲ.

ಈ ರೆಸಿಪಿ ಹೇಳಕೊಟ್ಟ ಗೆಳತಿ ಶೋಭಾ ಅವರಿಗೆ ಧನ್ಯವಾದಗಳು

Leave a Reply

Your email address will not be published.