ನಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ತಪ್ಪದೆ ಮಾಡುವ ವಿಧಾನ ಇಲ್ಲಿದೆ!
ಮಾಡುವ ವಿಧಾನ:-
1 ಚಿಕ್ಕ ತೋತಾಪುರಿ ಮಾವಿನ ಕಾಯಿ ತುರಿದಿಡಿ.
1/2 ಹೋಳು ತೆಂಗಿನ ಕಾಯಿ ತುರಿದಿಡಿ.
10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.

ಮೇಲೆ ಹೇಳಿರುವ ಮೂರನ್ನು ಸ್ವಲ್ಪ ಉಪ್ಪು ಹಾಕಿ, ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ.
ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು ನಂತರ ಚೂರು ಬೆಲ್ಲದ ಪುಡಿ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ, ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿದರೆ ಮಾವಿನ ಕಾಯಿ ಗೊಜ್ಜು ಸಿದ್ಧ!

ನಿಮಗೆ ಬೇಕಾಗುವಷ್ಟು ಗೊಜ್ಜು ಮತ್ತು ಅನ್ನ ಹಾಕಿ ಕಲೆಸಿ, ಕರಿದ ಕಡಲೇ ಬೀಜ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಚಿತ್ರಾನ್ನ ರೆಡಿ!
ಬ್ಯಾಡಗಿ ಮೆಣಸಿನಕಾಯಿ ಬದಲು ಹಸಿ ಮೆಣಸಿನಕಾಯಿ ಹಾಕಿ ಮಾಡಬಹುದು!
ಈ ಗೊಜ್ಜು Fridge ನಲ್ಲಿಟ್ಟರೆ ಎರಡು ಮೂರು ದಿನ ಚೆನ್ನಾಗಿರುತ್ತದೆ.
ಧನ್ಯವಾದಗಳು ![]()
![]()
![]()