Starters ಚಾಟ್ಸ್

BABY CORN PEPPER DRY ಬೇಬಿ ಕಾರ್ನ್ ಪೆಪ್ಪರ್ ಡ್ರೈ

BABY CORN PEPPER DRY ಬೇಬಿ ಕಾರ್ನ್ ಪೆಪ್ಪರ್ ಡ್ರೈ

ಮಕ್ಕಳ ಅಚ್ಚು ಮೆಚ್ಚಿನ ತರಕಾರಿ ಬೇಬಿ ಕಾರ್ನ್. ಬಹಳ ಇಷ್ಟ ಪಟ್ಟು ತಿನ್ನುತ್ತಾರೆ.

ಮಾಡುವ ವಿಧಾನ:-

ಬೇಬಿ ಕಾರ್ನ್ ತೊಳೆದು ಸಣ್ಣಗೆ, ತೆಳ್ಳಗೆ ಹೆಚ್ಚಿಡಿ.

ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟು, ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ. ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆದಿಡಿ.

2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

4 ಹಸಿ ಮೆಣಸಿನ ಕಾಯಿ ಉದ್ದಕ್ಕೆ ಹೆಚ್ಚಿಡಿ.

ಸ್ವಲ್ಪ ಕರಿಬೇವು ತೊಳೆದಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ ಹುರಿದು, ಕರಿದಿಟ್ಟ ಬೇಬಿ ಕಾರ್ನ್ , ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ಹುರಿದರೆ ಬೇಬಿ ಕಾರ್ನ್ ಪೆಪ್ಪರ್ ಡ್ರೈ ಸಿದ್ಧ!

ಮಾಡುವುದು ಸುಲಭ! ರುಚಿಕರ!

ಇದೇ ರೀತಿ ಗೋಭಿಯಲ್ಲಿ ಬೇಕಾದರೂ ಮಾಡಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.