ಸಿಹಿ ತಿನಿಸುಗಳು

APPLE HALVA ಆಪಲ್ ಹಲ್ವಾ

APPLE HALVA ಆಪಲ್ ಹಲ್ವಾ

ಸೇಬು ಹಣ್ಣು ತನ್ನಲ್ಲಿ ರುಚಿ, ಆರೋಗ್ಯಕರ ಅಂಶವನ್ನು ತುಂಬಿಕೊಂಡಿದೆ. ಬೆಳೆಯುತ್ತಿರುವ ಮಕ್ಕಳ ಆರೋಗ್ಯಕ್ಕೆ ಪೂರಕ ಈ ಹಣ್ಣು. ಸಾಮಾನ್ಯವಾಗಿ ಮಕ್ಕಳು ಹಣ್ಣು ತಿನ್ನಲು ಇಷ್ಟ ಪಡುವುದಿಲ್ಲ. ಹೀಗೆ ಮಾಡಿದರೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಇದನ್ನು ಚಪಾತಿ, ಪೂರಿ, ದೋಸೆ ಜೊತೆಗೆ Side dish ಆಗಿ ಸಹ ತಿನ್ನಬಹುದು.

ಮಾಡುವ ವಿಧಾನ:-

ಸೇಬಿನ ಸಿಪ್ಪೆ ಮತ್ತು ಬೀಜ ತೆಗೆದು ಎರಡು ಕಪ್ ಸೇಬು ತುರಿದಿಡಿ.

ಸ್ವಲ್ಪ ಗೋಡಂಬಿ ಬಾದಾಮಿ ಸಣ್ಣಗೆ ಹೆಚ್ಚಿಡಿ.

ಅರ್ಧ ಕಪ್ ಬೆಲ್ಲ ತುರಿದಿಡಿ. ನಾನು Organic ಬೆಲ್ಲ ಬಳಸಿದ್ದೇನೆ. ನೀವು ಬೇಕಾದರೆ ಸಕ್ಕರೆ ಹಾಕಿಕೊಳ್ಳಬಹುದು. ಸೇಬಿನಲ್ಲಿ ಸಾಕಷ್ಟು ಸಕ್ಕರೆ ಅಂಶ ಇರುವುದರಿಂದ ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು.

ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಸೇಬಿನ ತುರಿ ಹಾಕಿ ಅದರಲ್ಲಿರುವ ಹೋಗುವವರೆಗೆ ಎರಡು ಅಥವಾ ಮೂರು ನಿಮಿಷ ಹುರಿದು, ನಂತರ ಬೆಲ್ಲದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ. ಬೆಲ್ಲ ಹಾಕಿದ ಕೂಡಲೆ ಈ ಮಿಶ್ರಣ ಮತ್ತಷ್ಟು ನೀರಾಗುತ್ತದೆ. ಹೆಚ್ಚಿದ ಬಾದಾಮಿ ಗೋಡಂಬಿ ಹಾಕಿ, ನೀರಿನಂಶ ಪೂರ್ತಿ ಹೋಗಿ ಮಿಶ್ರಣ ಗಟ್ಟಿ ಆದ ಮೇಲೆ ಒಲೆಯಿಂದ ಇಳಿಸಿ ಸವಿಯಿರಿ.

ಧನ್ಯವಾದಗಳು 🙏🙏🙏

Leave a Reply

Your email address will not be published.