GULGULE ಗುಲ್ ಗುಲೆ
ಉತ್ತರ ಭಾರತದ ಒಂದು ಸುಲಭವಾಗಿ ಮಾಡಬಹುದಾದ ರುಚಿಯಾದ ಸಿಹಿ ತಿಂಡಿ.
ಮಾಡುವ ವಿಧಾನ :-
ಒಂದು ಅಳತೆ ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರಿನಲ್ಲಿ ನೆನೆಸಿ ಸೋಸಿಡಿ.

ನಾಲ್ಕು ಚಮಚ ಕಾಯಿ/ ಒಣ ಕೊಬ್ಬರಿ ತುರಿದಿಡಿ.
ಎರಡು ಏಲಕ್ಕಿ ಪುಡಿ ಮಾಡಿಡಿ.
ಸ್ವಲ್ಪ ಬಾದಾಮಿ ಗೋಡಂಬಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಡಿ.
ಒಂದು ದೊಡ್ಡ ಬಟ್ಟಲಿನಲ್ಲಿ ಒಂದೂವರೆ ಅಳತೆ ಗೋಧಿ ಹಿಟ್ಟು, ಕರಗಿಸಿದ ಬೆಲ್ಲ, ಕಾಯಿ ತುರಿ, ಏಲಕ್ಕಿ ಪುಡಿ, ಗೋಡಂಬಿ ಬಾದಾಮಿ, ಒಂದು ಚಮಚ ಗಸಗಸೆ ( ಬೇಕಾದರೆ ), ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ.



ಬೇಕಾದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿ, ಹತ್ತು ನಿಮಿಷದ ನಂತರ, ಕಾದ ಎಣ್ಣೆಯಲ್ಲಿ, ಒದ್ದೆ ಕೈ ಮಾಡಿಕೊಂಡು ಪುಟ್ಟ ಪುಟ್ಟ ಉಂಡೆ ಹಾಕಿ, ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಪೇಪರ್ ಮೇಲೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.

ಧನ್ಯವಾದಗಳು 🙏🙏🙏
