Showing 12 Result(s)
Oota ಸಾಂಬಾರು ಮತ್ತು ಪಲ್ಯಗಳು

PEPPER RASAM ಪೆಪ್ಪರ್ ರಸಂ ( ಮದುವೆ ಮನೆ ಶೈಲಿ )

ಕರಿ ಮೆಣಸು ಮಳೆಗಾಲಕ್ಕೆ, ಛಳಿಗೆ ಒಳ್ಳೆಯದು. ಗಂಟಲಿಗೆ ಹಿತವಾಗಿರುತ್ತದೆ. ಸಾಧಾರಣವಾಗಿ ಮದುವೆ ಮನೆಯಲ್ಲಿ ಈ ತರಹ ರಸಂ ಮಾಡುತ್ತಾರೆ! ಒಂದು ಚಿಕ್ಕ ಲೋಟ ಬೇಳೆಯನ್ನು ತೊಳೆದು ಚಿಟಿಕೆ ಅರಿಷಿಣ, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ ಕಟ್ಟು ಸೋರಿ ಹಾಕಿಡಿ. ಈ ರೆಸಿಪಿಯಲ್ಲಿ ನಮಗೆ ಕಟ್ಟು ಮಾತ್ರ ಬೇಕು. ಬೆಂದ ಬೇಳೆಯನ್ನು ಪಲ್ಯ, ಸಾಂಬಾರ್, ದಾಲ್ ಮಾಡಲು ಬಳಸಬಹುದು. 4 ಚಮಚ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ, ಸ್ವಲ್ಪ ಕೊತ್ತಂಬರಿ …

ಉಪಹಾರ ತಂಪು ಪಾನೀಯಗಳು

RAGI AMBALI ರಾಗಿ ಅಂಬಲಿ

“ರಾಗಿ ತಿಂದವ ನಿರೋಗಿ” ಅನ್ನುವ ಮಾತಿನಂತೆ ರಾಗಿ ಆರೋಗ್ಯಕರವಾದ ಧಾನ್ಯ! ಪುಟ್ಟ ಕಾಳಿನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಈ ಅಂಬಲಿ ಮಾಡುವುದು ಸುಲಭ! ಆರೋಗ್ಯಕರ!! ದೇಹಕ್ಕೆ ತಂಪು!!! ಬೇಕಾಗುವ ಸಾಮಗ್ರಿಗಳು :- ರಾಗಿ ಹಿಟ್ಟು – 1/4 ಲೋಟಕ್ಕಿಂತ ಸ್ವಲ್ಪ ಕಡಿಮೆ ನೀರು – 1 ಲೋಟ ಮಜ್ಜಿಗೆ – 1/2 ಲೋಟ ಉಪ್ಪು – ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು – ಸ್ವಲ್ಪ ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಚಮಚ ( ಬೇಕಾದರೆ …