ಸಾಂಬಾರು ಮತ್ತು ಪಲ್ಯಗಳು

PANCHA RANGI DAL ಪಂಚ ರಂಗಿ ದಾಲ್

ದಾಲ್ ಉತ್ತರ ಭಾರತದ ಜನಪ್ರಿಯ ಆಹಾರ! ಅವರ ಊಟದಲ್ಲಿ ಪ್ರತಿದಿನ ದಾಲ್ ಇರಲೇಬೇಕು. ಅದರ ರುಚಿಯಾದ, ವಿಭಿನ್ನವಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1/2 ಲೋಟ ಅಲಸಂದೆ ಕಾಳನ್ನು 4 ಗಂಟೆ ನೆನೆಸಿಡಿ.

ತೊಗರಿ ಬೇಳೆ, ಕಡಲೇ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ನೆಂದ ಅಲಸಂದೆ ಕಾಳು ತಲಾ ಅರ್ಧ ಲೋಟದಂತೆ ಒಟ್ಟಿಗೆ ಹಾಕಿ ಸಾಕಷ್ಟು ನೀರಿನೊಡನೆ ಮೂರ್ನಾಲ್ಕು ವಿಷಲ್ ಕೂಗಿಸಿಡಿ.

1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, ಚಿಟಿಕೆ ಅರಿಶಿಣ, ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ ಹೆಚ್ಚಿದ ಟೋಮೇಟೋ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ.

ನಂತರ 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಗರಂ ಮಸಾಲ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ.

ಬೇಯಿಸಿದ ಬೇಳೆ, ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ಹಣ್ಣಿನ ರಸ, 4 ಚಮಚ ಫ್ರೆಶ್ ಕ್ರೀಮ್ ಹಾಕಿದರೆ ರುಚಿಯಾದ, ಆರೋಗ್ಯಕರವಾದ ಪಂಚರಂಗಿ ದಾಲ್ ಸವಿಯಲು ಸಿದ್ಧ!

ಅಲಸಂದೆ ಬದಲಿಗೆ ನಿಮಗೆ ಇಷ್ಟವಾದ ಯಾವುದಾದರೂ ಬೇರೆ ಕಾಳು ಅಥವಾ ಕೆಂಪು ಬಣ್ಣದ ತೊಗರಿ ಬೇಳೆ ಬೇಕಾದರೂ ಹಾಕಬಹುದು!

ಈ ದಾಲ್, ರೋಟಿ, ಕುಲ್ಚಾ, ಅನ್ನದೊಡನೆ ತುಂಬಾ ಚೆನ್ನಾಗಿರುತ್ತದೆ!

ಬೇಳೆ ಮತ್ತು ಕಾಳುಗಳು ಬೆಂದ ಮೇಲೆ ಒದಗುವುದರಿಂದ ಅಂದರೆ Volume ಜಾಸ್ತಿ ಆಗುವುದರಿಂದ, ಎಲ್ಲಾ ವಿಧವಾದ ಬೇಳೆ ಸ್ವಲ್ಪ ಸ್ವಲ್ಪ ಹಾಕಿ ಮಾಡಿ.

ಧನ್ಯವಾದಗಳು

Leave a Reply

Your email address will not be published.