ಸಿಹಿ ತಿನಿಸುಗಳು

MAAVINA SAJJIGE ಮಾವಿನ ಸಜ್ಜಿಗೆ

ಸತ್ಯ ನಾರಾಯಣನ ಪೂಜೆಗೆ ಇರಲೇ ಬೇಕಾದ ಪ್ರಸಾದ ಸಜ್ಜಿಗೆ! ರುಚಿಯಾದ ಸಜ್ಜಿಗೆಯನ್ನು ಮತ್ತಷ್ಟು ರುಚಿಕರ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಲೋಟ ಚಿರೋಟಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

2 ಮಾವಿನ ಹಣ್ಣಿನ ರಸ ತೆಗೆದಿಡಿ.

ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.

ಬಾಣಲೆಯಲ್ಲಿ 2 ಲೋಟ ಹಾಲು ಹಾಕಿ ಬಿಸಿಯಾಗಲು ಇಡಿ. ಸ್ವಲ್ಪ ಕೇಸರಿ ದಳಗಳನ್ನು ಹಾಕಿ, 1 ಅಥವಾ 3/4 ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಮಾವಿನ ಹಣ್ಣು ಹಾಕುವುದರಿಂದ ಸಕ್ಕರೆ ನೋಡಿ ಕೊಂಡು ಹಾಕಿ.

ನಂತರ ಹುರಿದ ರವೆ ಹಾಕಿ ಗಂಟಿಲ್ಲದ ಹಾಗೆ ಕಲೆಸಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.

ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದ ಡ್ರೈ ಫ್ರೂಟ್ಸ್, 2 ದೊಡ್ಡ ಚಮಚ ತುಪ್ಪ, ಮಾವಿನ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಮೂರ್ನಾಲ್ಕು ನಿಮಿಷ ಬಿಸಿ ಮಾಡಿದರೆ, ಬಾಯಲ್ಲಿ ನೀರೂರಿಸುವ ಮಾವಿನ ಸಜ್ಜಿಗೆ ಸಿದ್ಧ!

ಮಾವಿನ ಹಣ್ಣು ಹಾಕದಿದ್ದರೆ ಇದೇ ಅಳತೆಯಲ್ಲಿ ಸಾಧಾರಣ ಸಜ್ಜಿಗೆ ಮಾಡಬಹುದು.

ಧನ್ಯವಾದಗಳು

Leave a Reply

Your email address will not be published.