Showing 27 Result(s)
Kannada Oota ಸಾಂಬಾರು ಮತ್ತು ಪಲ್ಯಗಳು

HIDUKIDA BELE CURRY ಹಿದುಕಿದ ಬೇಳೆ ಕರ್ರಿ

ಹಿದುಕಿದ ಬೇಳೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ! ಅದರಿಂದ ಎಷ್ಟೋ ರುಚಿಯಾದ ಆಹಾರಗಳನ್ನು ಮಾಡಬಹುದು! ಎಂದಾದರೂ ಹಿದುಕಿದ ಬೇಳೆಯ ಗ್ರೇವಿ ಮಾಡಿದ್ದೀರಾ!? ಇಲ್ಲವಾದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ, 8 ಗೋಡಂಬಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದು ರುಬ್ಬಿಡಿ. 1 ಪಾವು ( 1/4 ಕೇಜಿ ) ಹಿದುಕಿದ ಬೇಳೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ, …

Kannada Tindi Tinisu ಖಾರ ತಿನಿಸುಗಳು

PAPPAD CONE ಪಾಪ್ಪಡ್ ಕೋನ್

ಎಲ್ಲರಿಗೂ ಇಷ್ಟವಾಗುವ ತಿಂಡಿ ಹಪ್ಪಳ! ಗರಿ ಗರಿಯಾಗಿ, ರುಚಿ ರುಚಿಯಾಗಿರುವ ಯಾರಿಗೆ ಇಷ್ಟವಿಲ್ಲ ಹೇಳಿ! ಹಪ್ಪಳದ ಕೋನ್ ಮಾಡಿ ಕೊಡಿ ನಿಮ್ಮ ಮಕ್ಕಳು ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- ಮೆಣಸು ಹಾಕಿರುವ ಯಾವುದಾದರೂ ಹಪ್ಪಳ ಮಧ್ಯದಲ್ಲಿ ಕತ್ತರಿಸಿ ಎರಡು ಭಾಗ ಮಾಡಿ.    ಕಾವಲಿ ಬಿಸಿಯಾಗಲು ಇಡಿ. ಕಾದ ಕಾವಲಿಯ ಮೇಲೆ ಹಪ್ಪಳ ಹಾಕಿ ಪೇಪರ್ ನಿಂದ ಒತ್ತಡ ಕೊಟ್ಟು ಹಪ್ಪಳ ಎಲ್ಲಾ ಕಡೆಯೂ ಬೇಯಿಸಿ ಒಂದು Tissue Paper ಮೇಲೆ ಹಾಕಿ ಕೋನ್ …

Kannada Tindi Tinisu ಚಾಟ್ಸ್

AVALAKKI BHEL ಅವಲಕ್ಕಿ ಭೇಲ್

ಸಂಜೆ ವೇಳೆಗೆ ಕಾಫಿ ಟೀ ಜೊತೆಗೆಚೆನ್ನಾಗಿರುತ್ತದೆ! ಯಾವಾಗಲೂ ಕಡಲೇ ಪುರಿಯಲ್ಲಿ ಮಾಡುವ ಭೇಲ್ ಅನ್ನು ಬದಲಾವಣೆಗಾಗಿ ಪೇಪರ್ ಅವಲಕ್ಕಿಯಲ್ಲಿ ಮಾಡಿನೋಡಿ! ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 1 ಲೋಟ ಪೇಪರ್ ಅವಲಕ್ಕಿಯನ್ನು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ. ಅಥವಾ Oven ನಲ್ಲಿ ಸ್ವಲ್ಪ ಎಣ್ಣೆ ಸವರಿ 1 ನಿಮಿಷ ಬಿಸಿ ಮಾಡಿ ತೆಗೆದಿಡಿ. ನಾನು Oven ನಲ್ಲಿಯೇ ಮಾಡಿರುವುದು! 2 ಚಮಚ ಪುದೀನಾ, 2 ಚಮಚ ಕೊತ್ತಂಬರಿ ಸೊಪ್ಪು, 1 …

Kannada Tindi Tinisu ಖಾರ ತಿನಿಸುಗಳು

KHARA HALUBAYI ಖಾರಾ ಹಾಲು ಬಾಯಿ

ಹಾಲು ಬಾಯಿ ಎಲ್ಲರೂ ಬೆಲ್ಲ ಹಾಕಿ ಮಾಡುತ್ತಾರೆ! ಎಂದಾದರೂ ಖಾರಾ ಹಾಲು ಬಾಯಿ ಮಾಡಿದ್ದೀರಾ!? ಇಲ್ಲವಾದರೆ ಒಮ್ಮೆ ಮಾಡಿ ನೋಡಿ! ನಿಮಗೆಲ್ಲಾ ಖಂಡಿತಾ ಇಷ್ಟ ಆಗುತ್ತೆ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! 1 ಅಳತೆ ಅಕ್ಕಿ ತೊಳೆದು 2 ಗಂಟೆ ನೆನೆಸಿಡಿ. ಜೊತೆಗೆ 4 ಬ್ಯಾಡಗಿ ಮೆಣಸಿನಕಾಯಿ ನೆನೆಸಿಡಿ. 1 ಅಳತೆ ಕಾಯಿ ತುರಿದಿಡಿ. 2 ಚಮಚ ಹುಣಿಸೆ ರಸ ತೆಗೆದಿಡಿ.      ನೆಂದ ಅಕ್ಕಿ, ಮೆಣಸಿನಕಾಯಿ, ಕಾಯಿ ತುರಿ, ಹುಣಿಸೆ ರಸ ಹಾಕಿ ನುಣ್ಣಗೆ ರುಬ್ಬಿಡಿ. …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BOURNVITA BURFI ಬೋರ್ನ್ ವಿಟಾ ಬರ್ಫಿ

ಮನೆಯಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಬೋರ್ನ್ ವಿಟಾ ಬರ್ಫಿ ಮಾಡುವ ವಿಧಾನ ಇಲ್ಲಿದೆ! ಬೇಕಾಗುವ ಸಾಮಗ್ರಿಗಳು:- ಬೋರ್ನ್ ವಿಟಾ – 1 ಕಪ್ ಹಾಲಿನ ಪುಡಿ – 1 ಕಪ್ ಸಕ್ಕರೆ – 1 ಕಪ್ ತುಪ್ಪ – 4 ಚಮಚ ಮಾಡುವ ವಿಧಾನ:- ಹಾಲಿನ ಪುಡಿ ಮತ್ತು ಬೋರ್ನ್ ವಿಟಾವನ್ನು ಚೆನ್ನಾಗಿ ಕಲೆಸಿಡಿ. ಬಾಣಲೆಯಲ್ಲಿ ಸಕ್ಕರೆಗೆ 1/4 ಕಪ್ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ ಹಾಲಿನ ಪುಡಿ, ಬೋರ್ನ್ ವಿಟಾ ಪುಡಿಯನ್ನು …

Kannada Tindi Tinisu ಚಾಟ್ಸ್ ಸಾಂಬಾರು ಮತ್ತು ಪಲ್ಯಗಳು

SWEET CORN MASALA ಸ್ವೀಟ್ ಕಾರ್ನ್ ಮಸಾಲ

ಮಕ್ಕಳಿಗೆ ಬಹಳ ಇಷ್ಟವಾಗುವ ಗ್ರೇವಿ! ಮಾಡುವ ವಿಧಾನ:- 100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿಟ್ಟು ಕೊಳ್ಳಿ. 1 ಈರುಳ್ಳಿ, 2 ಟೋಮೋಟೋ, 4 ರಿಂದ 6 ಹಸಿ ಮೆಣಸಿನಕಾಯಿ, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ. ಹಸಿ ಮೆಣಸಿನಕಾಯಿ ಬದಲಾಗಿ ಕೆಂಪು ಮೆಣಸಿನಕಾಯಿ ಬೇಕಾದರೆ ಹಾಕಬಹುದು. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಚಿಟಿಕೆ ಅರಿಷಿಣ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1/2 ಚಮಚ ಧನಿಯ ಪುಡಿ, 1/2 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MILK POWDER JAMOON ಮಿಲ್ಕ್ ಪೌಡರ್ ಜಾಮೂನ್

ರುಚಿಯಾದ ಹಾಲಿನ ಪುಡಿ ಜಾಮೂನ್ ಮನೆಯಲ್ಲಿ ಮಾಡುವ ಇಲ್ಲಿದೆ! ಮಾಡುವ ವಿಧಾನ:-    2 ಅಳತೆ ಸಕ್ಕರೆಯನ್ನು 2 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಪೂರ್ತಿಯಾಗಿ ಕರಗಿದ ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ ಒಲೆಯಿಂದ ಇಳಿಸಿ ಚಿಟಿಕೆ ಏಲಕ್ಕಿ ಪುಡಿ ಹಾಕಿಡಿ.    1 ಅಳತೆ ಹಾಲಿನ ಪುಡಿ, 1 ಚಮಚ ಮೈದಾ , 1 ಚಮಚ ತುಪ್ಪ, 1/4 ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ …