Kannada Tindi Tinisu ಖಾರ ತಿನಿಸುಗಳು

OM PUDI (KHARA SEV) ಓಂ ಪುಡಿ (ಖಾರಾ ಸೇವ್)

ಮಳೆಗಾಲಕ್ಕೆ ಮತ್ತೊಂದು ಕುರುಕಲು ತಿಂಡಿ! ಖಾರಾ, ಖಾರಾ, ಗರಿ ಗರಿಯಾಗಿ ತಿನ್ನೋಕೆ ತುಂಬಾ ಚೆನ್ನಾಗಿರುತ್ತೆ!

ಮಾಡುವ ವಿಧಾನ:-

ಕಡಲೇ ಬೇಳೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ flour mill ನಲ್ಲಿ ಹಿಟ್ಟು ಮಾಡಿಸಿ ಜರಡಿ ಹಿಡಿದಿಡಿ.

ಓಂ ಪುಡಿ ಮಾಡಲು:-

   

1 ಚಮಚ ಓಂ ಕಾಳು/ಅಜವಾನವನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ, ಜರಡಿ ಹಿಡಿಯಿರಿ, 4 ಚಮಚ ಖಾರಾ ಪುಡಿ, ಉಪ್ಪು, 4 ಚಮಚ ಅಕ್ಕಿ ಹಿಟ್ಟು, 1 ಪಾವು ಕಡಲೇ ಹಿಟ್ಟು ಇಷ್ಟನ್ನು ಚೆನ್ನಾಗಿ ಕಲೆಸಿ, 4 ಚಮಚ ಕಾದ ಎಣ್ಣೆ ಹಾಕಿ, ಕಲೆಸಿ, ಸ್ವಲ್ಪ ಸ್ವಲ್ಪ ನೀರು ಸೇರಿಸಿ, ಅಕ್ಕಿ ರೊಟ್ಟಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಬೇಕು.

   

ಚಕ್ಕುಲಿ ಒರಳಿನಲ್ಲಿ ಓಂ ಪುಡಿ ಬಿಲ್ಲೆ ಹಾಕಿ ಕಾದ ಎಣ್ಣೆಗೆ ಎಚ್ಚರಿಕೆಯಿಂದ ನೇರವಾಗಿ ಗುಂಡಗೆ ಒತ್ತಬೇಕು. ತೆಳ್ಳಗೆ ಇರುವುದರಿಂದ ಬೇಗ ಬೇಯುತ್ತೆ. ನಂತರ ನಿಧಾನವಾಗಿ ತಿರುವಿ ಹಾಕಿ ಕೆಂಪಗೆ ಬೇಯಿಸಿ ತೆಗೆದು, ಹೆಚ್ಚಿನ ಎಣ್ಣೆ ತೆಗೆದು, ತಣ್ಣಗಾದ ಮೇಲೆ, ಚಿಕ್ಕ ಚಿಕ್ಕಗಾಗಿ ಮುರಿದು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

   

ಹಿಟ್ಟು ಕಲೆಸಿದ ನಂತರ ನೇರವಾಗಿ ಎಣ್ಣೆಗೆ ಹಿಂಡುವ ಮೊದಲು ಹಿಟ್ಟಿನ ಹದ ಸರಿಯಾಗಿದೆಯೇ ಎಂದು ನೋಡಲು, ಹಿಟ್ಟು ತುಂಬಿದ ಮೇಲೆ ಮೊದಲು ತಟ್ಟೆ ಮೇಲೆ ಹಿಂಡಿ ನೋಡಿ, ಅಡೆತಡೆ ಇಲ್ಲದೆ ಚೆನ್ನಾಗಿ ಬಂದರೆ ಹದ ಸರಿಯೆಂದು ಅರ್ಥ! ಗಂಟು ಗಂಟಾಗಿ ಬಂದರೆ ಹಿಟ್ಟಿಗೆ ಸ್ವಲ್ಪ ಕಡಲೆ ಹಿಟ್ಟು ಸೇರಿಸಿ ಗಟ್ಟಿಯಾಗಿ ಕಲೆಸಿ. ಹಿಂಡಲು ತುಂಬಾ ಕಷ್ಚವಾದರೆ ಸ್ವಲ್ಪ ನೀರು ಚಿಮುಕಿಸಿ ಮೆತ್ತಗೆ ಮಾಡಿ ಹಿಂಡಿ. ಬಿಲ್ಲೆ ಹಾಕಿದ ನಂತರ ಸರಿಯಾಗಿ, ಗಟ್ಟಿಯಾಗಿ ಹಾಕಿ. ದಯವಿಟ್ಟು ಎಚ್ಚರಿಕೆಯಿಂದ ಮಾಡಿ.

ಮರೆತ ವಿಷಯ, ಕಡಲೇ ಹಿಟ್ಟಿನಿಂದ ಮಾಡಿದ ಈ ಓಂ ಪುಡಿ ಹೆಚ್ಚು ಒದಗುವುದಿಲ್ಲ! ಅಂದರೆ quantity ಹೆಚ್ಚೇನು ಆಗೋಲ್ಲ! 1 ಪಾವು ಹಾಕಿ ಮಾಡಿದರೆ, 4 ಜನ ಒಂದು ಸಲ ತಿಂದರೆ ಖಾಲಿ ಆಗುತ್ತೆ! ನೀವು ಬೇಕಾದರೆ ಗಟ್ಟಿ ಅವಲಕ್ಕಿ, ಕಡಲೇ ಬೀಜ, ಹುರಿಗಡಲೆ, ಕೊಬ್ಬರಿ ಚೂರು, Dry fruits ಅನ್ನು ಎಣ್ಣೆಯಲ್ಲಿ ಕರಿದು, ಉಪ್ಪು, ಖಾರಾ, ಇಂಗಿನ ಪುಡಿ ಹಾಕಿ ಕಲೆಸಿ ಇದಕ್ಕೆ ಸೇರಿಸಿ Mixture ಮಾಡಬಹುದು!

ಧನ್ಯವಾದಗಳು.

Leave a Reply

Your email address will not be published.