Showing 253 Result(s)
Kannada ಸಾಂಬಾರು ಮತ್ತು ಪಲ್ಯಗಳು

UNDE MAJJIGE HULI ಉಂಡೆ ಮಜ್ಜಿಗೆ ಹುಳಿ

ಆರೋಗ್ಯಕರ, ರುಚಿಕರವಾದ ಮಜ್ಜಿಗೆ ಹುಳಿ, ಹಬ್ಬಗಳಲ್ಲಿ, ವಿಶೇಷ ದಿನಗಳಲ್ಲಿ ತಪ್ಪದೆ ಮಾಡುವ ತಿನಿಸು! ಉಂಡೆ ಮಾಡುವ ವಿಧಾನ:- 1 ಲೋಟ ಕಡಲೇ ಬೇಳೆ, 2 ಚಿಕ್ಕ ಚಮಚ ಅಕ್ಕಿ 2 ಗಂಟೆ ಕಾಲ ನೆನೆಸಿ ಸೋರಿ ಹಾಕಿಡಿ. ಅಕ್ಕಿ ಹಾಕುವುದರಿಂದ ಉಂಡೆಗಳನ್ನು ಮಜ್ಜಿಗೆ ಹುಳಿಯಲ್ಲಿ ಹಾಕಿದರೆ ಒಡೆಯುವುದಿಲ್ಲ!       4 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ ಜೊತೆಗೆ ತರಿ ತರಿಯಾಗಿ ರುಬ್ಬಿಡಿ. ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಚಿಕ್ಕ …

Kannada ಉಪಹಾರ

AVALAKKI ROTTI ಅವಲಕ್ಕಿ ರೊಟ್ಟಿ

ಸಾಮಾನ್ಯವಾಗಿ ಏಕಾದಶಿ, ಸಂಕಷ್ಟ ಹರ ವ್ರತ ಇಂತಹ ಸಮಯದಲ್ಲಿ ಉಪವಾಸ ಇರುವಾಗ ಅವಲಕ್ಕಿ ಒಗ್ಗರಣೆ ಹಾಕಿ ತಿನ್ನುತ್ತಾರೆ! ಎಷ್ಟು ದಿನ ಅದೇ ರೀತಿ ತಿನ್ನುವುದು! ಸ್ವಲ್ಪ ಬದಲಾವಣೆಗಾಗಿ ಅವಲಕ್ಕಿ ರೊಟ್ಟಿ ಮಾಡಿ ನೋಡಿ! ಮಾಡುವ ವಿಧಾನ:- 1 ಲೋಟ ಗಟ್ಟಿ ಅವಲಕ್ಕಿಯನ್ನು ಕಾಟನ್ ಬಟ್ಟೆ ಅಥವಾ Kitchen towel ನಿಂದ ಚೆನ್ನಾಗಿ ಒರೆಸಿ, ನುಣ್ಣಗೆ ಪುಡಿ ಮಾಡಿಡಿ. 4 ಚಮಚ ಕಾಯಿ ತುರಿದಿಡಿ. ಈರುಳ್ಳಿ ಹಾಕುವ ಹಾಗಿದ್ದರೆ ಸಣ್ಣಗೆ ಹೆಚ್ಚಿಡಿ. ಕೊತ್ತಂಬರಿ ಸೊಪ್ಪು, ಮೆಂತ್ಯ, ಸಬ್ಬಾಕ್ಷಿ ಸೊಪ್ಪು …

Kannada ಸಾಂಬಾರು ಮತ್ತು ಪಲ್ಯಗಳು

MALAI DAL ಮಲೈ ದಾಲ್

ಮಲೈ ಅಂದರೆ ಹಾಲಿನ ಕೆನೆ ಎಂದು ಅರ್ಥ! ಹಾಲಿನ ಕೆನೆ ಹಾಕಿ ಮಾಡಿದ ದಾಲ್! ಹೆಚ್ಚು ಖಾರಾ, ಮಸಾಲ ಇಲ್ಲ. ರುಚಿ ಸ್ವಲ್ಪ Mild ಅಂತಾನೆ ಹೇಳಬಹುದು! ಮಾಡುವ ವಿಧಾನ:- 1 ಚಿಕ್ಕ ಲೋಟ ಉದ್ದಿನ ಕಾಳು ರಾತ್ರಿ ನೆನೆಸಿಡಿ. ಕಾಳಿನ ಫೋಟೋ ಹಾಕಿದ್ದೇನೆ ನೋಡಿ. ಸ್ವಲ್ಪ ಹೆಸರು ಕಾಳಿನ ಹಾಗೆ ಇರುತ್ತದೆ. ಬಣ್ಣ ಮಾತ್ರ ಕಪ್ಪು! 1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ …

Kannada Tindi Tinisu ಖಾರ ತಿನಿಸುಗಳು

DIDHEER CHAKKULI ದಿಢೀರ್ ಚಕ್ಕುಲಿ

ಸಾಮಾನ್ಯವಾಗಿ ಚಕ್ಕುಲಿ ಮಾಡಬೇಕಾದರೆ ಅಕ್ಕಿ ತೊಳೆದು, ನೆರಳಲ್ಲಿ ಒಣಗಿಸಿ, ಉದ್ದಿನ ಬೇಳೆ ಹುರಿದು ಹಾಕಿ, Flour mill ಗೆ ಹಾಕಿ ಚಕ್ಕುಲಿ ಮಾಡಬೇಕು! ಆದರೆ ಬೇಕಾದಾಗ ಚಕ್ಕುಲಿ ತಿನ್ನಬೇಕೆನೆಸಿದಾಗ ತಕ್ಷಣ ಮಾಡುವ ದಿಢೀರ್ ಚಕ್ಕುಲಿಯ ರೆಸಿಪಿ ಇಲ್ಲಿದೆ! 1 ಅಳತೆ ಅಕ್ಕಿ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿಡಿ. 1/2 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿಡಿ. 1 ಟೇಬಲ್ ಚಮಚ ಬೆಣ್ಣೆ ಅಥವಾ ಎಣ್ಣೆ ಸ್ವಲ್ಪ ಬಿಸಿ ಮಾಡಿಡಿ. ಅಕ್ಕಿ ಹಿಟ್ಟಿಗೆ ಹುರಿ ಗಡಲೆ ಪುಡಿ, …

Kannada ಸಾಂಬಾರು ಮತ್ತು ಪಲ್ಯಗಳು

BYADAGI MENASINA KAYI PUDI ಬ್ಯಾಡಗಿ ಮೆಣಸಿನಕಾಯಿ ಪುಡಿ

ಬ್ಯಾಡಗಿ ಮೆಣಸಿನಕಾಯಿ ಪುಡಿ ಮಾಡುವ ವಿಧಾನ:- ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಹರಡಿಡಿ. ನಂತರ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ಹುರಿದು ತಣ್ಣಗಾದ ಮೇಲೆ ನುಣ್ಣಗೆ Mixer ಯಲ್ಲಿ ಹಾಕಿ ಪುಡಿ ಮಾಡಿಡಿ. ಸಾರು, ಸಾಂಬಾರ್, ಗ್ರೇವಿ, ಗೊಜ್ಜು ಮಾಡುವಾಗ ಸ್ವಲ್ಪ ಸೇರಿಸಿ. ಬಣ್ಣ, ರುಚಿ ಎರಡೂ ಬರುತ್ತದೆ. ನಾನು ಚಕ್ಕುಲಿಗೆ ದೇ ಪುಡಿ ಹಾಕಿರುವುದು. ಬಣ್ಣ ನೋಡಿ ಹೇಗಿದೆ!? ಆದರೆ ಹೆಚ್ಚಿನ ಖಾರಾ ಇರುವುದಿಲ್ಲ. ಆಗ ನೀವು ಬೇಕಾದರೆ ಅಚ್ಛ ಖಾರಾ ಪುಡಿ …

Kannada Oota

GOBHI RICE ಗೋಭಿ ರೈಸ್

ಮಕ್ಕಳಿಗೆ ತುಂಬಾ ಇಷ್ಟವಾಗುವ ಪಲವ್! ಮಾಡುವುದೂ ಕೂಡ ತುಂಬಾ ಸುಲಭ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು 20 ನಿಮಿಷ ನೆನೆಸಿ ಸೋರಿ ಹಾಕಿಡಿ. 1 ಚಿಕ್ಕ ಗೋಭಿಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ Clean ಮಾಡಿಡಿ. 1 ಲೀಟರ್ ನಷ್ಟು ಬಿಸಿ ನೀರು ಹಾಕಿ 5 ನಿಮಿಷ ನೆನೆಯಲು ಬಿಡಿ. ಕೇವಲ ಗೋಭಿ ತುಂಡುಗಳನ್ನು ಮಾತ್ರ ಕೈಯಿಂದ ತೆಗೆದು ಮತ್ತೊಂದು ಬಾರಿ ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು, ಅರಿಷಿಣ ಹಾಕಿ ಗೋಭಿ ಹಾಕಿ ಮುಚ್ಚಿಡಿ. …

Kannada ಉಪಹಾರ

NEERU DOSE ನೀರು ದೋಸೆ

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಂತ ಹಾಕಿದ್ದೇನೆ! ಮಾಡುವ ವಿಧಾನ:- 2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1/2 ಅಥವಾ 3/4 ಲೋಟ ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೆ ಆಯಿತು. ನುಣ್ಣಗೆ ರುಬ್ಬಿದ ನಂತರ ಉಪ್ಪು …

Kannada ಉಪಹಾರ

OPEN BUTTER MASALA DOSE ಓಪನ್ ಬಟರ್ ಮಸಾಲ ದೋಸೆ

ದೋಸೆ ಪ್ರಿಯರಿಗಾಗಿ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಓಪನ್ ಬಟರ್ ಮಸಾಲ ದೋಸೆ! ಮಾಡುವ ವಿಧಾನ :- ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1 ಲೋಟ ತೊಗರಿ ಬೇಳೆ- 1 ಚಮಚ ಮೆಂತ್ಯ – 1 ಚಮಚ ಗಟ್ಟಿ ಅವಲಕ್ಕಿ / ಅನ್ನ – 4 ಚಮಚ ( ನಾವು ಅನ್ನ ರುಬ್ಬುವುದಿಲ್ಲ, ಹಾಗಾಗಿ ಅವಲಕ್ಕಿ ಹಾಕಿದ್ದೇನೆ) ಎಲ್ಲ ಪದಾರ್ಥಗಳನ್ನು ತೊಳೆದು ಬೇರೆ ಬೇರೆಯಾಗಿ 3 ಗಂಟೆ ಕಾಲ ನೆನೆಸಿಡಿ. ನಂತರ …

Kannada ಚಾಟ್ಸ್

BANGARPATE PANI PURI ಬಂಗಾರ ಪೇಟೆ ಪಾನಿ ಪೂರಿ

ಪಾನಿ ಪೂರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಪೂರಿ ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, ಕಾದ ಎಣ್ಣೆ 1 ಚಮಚ, 2 ಚಮಚ ಉದ್ದಿನ ಬೇಳೆ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿ ಹಾಕಿ( ಉದ್ದಿನ ಬೇಳೆ Optional) ಚೆನ್ನಾಗಿ ಕಲೆಸಿ. ನಂತರ ತಣ್ಣನೆ ನೀರು ಹಾಕಿ ಸ್ವಲ್ಪ ಸ್ವಲ್ಪವೇ ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ. …

Kannada ಸಾಂಬಾರು ಮತ್ತು ಪಲ್ಯಗಳು

BENDI CURRY ಬೆಂಡಿ ಕರ್ರಿ

ಬೆಂಡೆ ಕಾಯಿ ಬಹಳ ಜನ ತುಂಬಾ ಇಷ್ಟ ಪಟ್ಟು, ಕೆಲವರು ಕಷ್ಟ ಪಟ್ಟು ತಿನ್ನುವ ತರಕಾರಿ! ಆದರೆ ಅದರಲ್ಲಿರುವ ಒಳ್ಳೆಯ ಗುಣಗಳನ್ನು ತಿಳಿದುಕೊಂಡರೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಙಾಪಕ ಶಕ್ತಿಗೆ ತುಂಬಾ ಸಹಾಯ ಮಾಡುತ್ತದೆ!ಮಕ್ಕಳಿಗೆ ಬಹಳ ಒಳ್ಳೆಯದು! ಇದರ ಒಂದು ರುಚಿಯಾದ ಗ್ರೇವಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಆದಷ್ಟೂ ಎಳೆಯದಾದ 1/4 ಕೇಜಿ ಬೆಂಡೆ ಕಾಯಿಗಳನ್ನು ಆಯ್ದು ಕೊಂಡು ತೊಳೆದು ಚೆನ್ನಾಗಿ ಒರೆಸಿ, 1 ಇಂಚು ಅಳತೆಯ ತುಂಡುಗಳನ್ನಾಗಿ ಹೆಚ್ಚಿ. ನಂತರ ಕಾದ ಎಣ್ಣೆಯಲ್ಲಿ …