Kannada Tindi Tinisu ಖಾರ ತಿನಿಸುಗಳು

BREAD CUTLET ಬ್ರೆಡ್ ಕಟ್ಲೆಟ್

ಸಂಜೆ ಕಾಫಿ ಅಥವಾ ಟೀ ಜೊತೆ ಏನಾದರೂ ಸ್ನಾಕ್ಸ್ ತಿನ್ನಲು, ಅಥವಾ ಪುಟ್ಚ ಮಕ್ಕಳು ಶಾಲೆಯಿಂದ ಬಂದ ತಕ್ಷಣ ಫಟಾಫಟ್ 10 ನಿಮಿಷದಲ್ಲಿ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

   

8 ಸಾಲ್ಟ್ ಬ್ರೆಡ್ ಸ್ಲೈಸ್ ಗಳ ಅಂಚು ತೆಗೆದು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಒಂದು ಬಟ್ಟಲಿನಲ್ಲಿ ಹಾಕಿ. 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದು ಬ್ರೆಡ್ ಪುಡಿಗೆ ಸೇರಿಸಿ. ಸಣ್ಣಗೆ ಹೆಚ್ಚಿದ 1 ಈರುಳ್ಳಿ, 2 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1/2 ಚಮಚ ಖಾರಾ ಪುಡಿ, 1 ಚಮಚ ಚಾಟ್ ಮಸಾಲ, ಉಪ್ಪು, 4 ಚಮಚ ಕಾರ್ನ್ ಫ್ಲೋರ್ ಹಾಕಿ ನೀರು ಸೇರಿಸದೆ ಚೆನ್ನಾಗಿ ಕಲೆಸಿ. (ಆಲೂಗೆಡ್ಡೆಯಲ್ಲಿರುವ ನೀರಿನಂಶವೇ ಸಾಕಾಗುತ್ತದೆ)

   

2 ಚಮಚ ಮೈದಾ ಹಿಟ್ಟನ್ನು 4 ಚಮಚ ನೀರಲ್ಲಿ ತೆಳ್ಳಗೆ ಕಲೆಸಿಡಿ.

1 ತಟ್ಟೆಯಲ್ಲಿ 4 ಚಮಚ Bread Crumbs ಹಾಕಿಡಿ. ಅಕಸ್ಮಾತ್ Bread crumbs ಸಿಗದಿದ್ದರೆ ಹಾಗೇ ಹಾಕಬಹುದು.

   

ಬ್ರೆಡ್ ಮಿಶ್ರಣ ಪೂರಿ ಉಂಡೆಗಿಂತ ಸ್ವಲ್ಪ ದೊಡ್ಡದು ತೆಗೆದು ಕೊಂಡು ಗುಂಡಗೆ ವಡೆಗಿಂತ ಸ್ವಲ್ಪ ದಪ್ಪ ಮಾಡಿ ಮೈದಾ ಪೇಸ್ಟ್ ನಲ್ಲಿ ಅದ್ದಿ Bread crumbs ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ ಟೊಮೇಟೋ ಸಾಸ್ ಜೊತೆ ಸವಿಯಿರಿ.

ನೀವು ಬೇಕಾದರೆ ಇದನ್ನು Shallow fry ಕೂಡ ಮಾಡಬಹುದು. ನಾನು Deep fry ಮಾಡಿದ್ದೇನೆ.

ಧನ್ಯವಾದಗಳು.

Leave a Reply

Your email address will not be published.