Kannada Tindi Tinisu ಖಾರ ತಿನಿಸುಗಳು

NIPATTU ನಿಪ್ಪಟ್ಟು

ಮಾಡುವ ವಿಧಾನ:-

2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

1/4 ಗಿಟುಕು ಕೊಬ್ಬರಿ ತುರಿದಿಡಿ.

2 ಹಿಡಿ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. ( Optional)

2 ಚಮಚ ಹುರಿಗಡಲೆ, ಕಡಲೇ ಬೀಜ Mixie ಯಲ್ಲಿ ಹಾಕಿ ಎರಡು ಸುತ್ತು ಸುತ್ತಿಸಿ ತರಿ ತರಿಯಾಗಿ ಪುಡಿ ಮಾಡಿಡಿ.

ದೊಡ್ಡ ಪಾತ್ರೆಯಲ್ಲಿ 1 ಪಾವು ಅಕ್ಕಿ ಹಿಟ್ಟು, 2 ಚಮಚ ಮೈದಾ, 2 ಚಮಚ ಚಿರೋಟಿ ರವೆ, 1 ಚಮಚ ಖಾರಾಪುಡಿ, ಸ್ವಲ್ಪ ಇಂಗು, ಪುಡಿ ಮಾಡಿದ ಕಡಲೇ ಬೀಜ, ಹುರಿಗಡಲೆ, ಸ್ವಲ್ಪ ಜೀರಿಗೆ, ಬಿಳಿ ಎಳ್ಳು, ಕೊಬ್ಬರಿ ತುರಿ, ಹಿದುಕಿದ ಬೇಳೆ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ, 2 ಚಮಚ ಕಾದ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪ ನೀರು ಚಿಮುಕಿಸುತ್ತಾ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ಕಲೆಸಿಡಿ.

   

ಬಾಣಲೆಯಲ್ಲಿ ಎಣ್ಣೆ ಕಾಯಲು ಹಾಕಿ, ಬಟರ್ ಪೇಪರ್ ಅಥವಾ ಯಾವುದಾದರೂ ದಪ್ಪ ಇರುವ ಪ್ಲಾಸ್ಟಿಕ್ ಷೀಟ್ ಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ ಚಪಾತಿ ಉಂಡೆಗಿಂತ ಸ್ವಲ್ಪ ದಪ್ಪನೆಯ ಉಂಡೆ ತೆಗೆದುಕೊಂಡು, ಲಟ್ಟಣಿಗೆಗೂ ಸ್ವಲ್ಪ ಎಣ್ಣೆ ಸವರಿ, ಹೆಚ್ಚು ಒತ್ತಡ ಹಾಕದೆ ಆದಷ್ಟೂ ತೆಳ್ಳಗೆ ನಿಪ್ಪಟ್ಟು ಲಟ್ಟಿಸಿ, ಹಿದುಕಿದ ಬೇಳೆ, ಕಡಲೇ ಬೀಜ ಹೊರಗೆ ಬಂದರೆ ಮೆತ್ತಗೆ ಒಳಗೆ ಮತ್ತೆ ಒತ್ತಿ,ಯಾವುದಾದರೂ ಡಬ್ಬ ಅಥವಾ ಬಾಟಲಿನ ಸಹಾಯದಿಂದ ಗುಂಡಗೆ ಕಟ್ ಮಾಡಿ.

   

ಎಣ್ಣೆ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಗರಿ ಗರಿಯಾಗಿ ಕರಿದು, ಹೆಚ್ಚಿನ ಎಣ್ಣೆ ತೆಗೆಯಲು Tissue Paper ಮೇಲೆ ಹಾಕಿ, ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

ಧನ್ಯವಾದಗಳು.

 

Leave a Reply

Your email address will not be published.