Kannada ಉಪಹಾರ

GOJJAVALLAKI ಗೊಜ್ಜವಲಕ್ಕಿ

ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ನಮಗೂ ಸಹ ಪ್ರಿಯವೇ! ಅದರಲ್ಲೂ ಗೊಜ್ಜವಲಕ್ಕಿ ಯಾರಿಗೆ ಇಷ್ಟವಿಲ್ಲ ಹೇಳಿ! ಏಕಾದಶಿ, ಸಂಕಷ್ಟ ಹರ ಗಣಪತಿ ವ್ರತಗಳಲ್ಲಿ ಮಾಡುವ ವಿಧಾನ ಇಲ್ಲಿದೆ:-

ಮಾಡುವ ವಿಧಾನ:-

1 ಪಾವು ಗಟ್ಟಿ ಅವಲಕ್ಕಿ ತೊಳೆದಿಡಿ.

ಹುಣಿಸೆ ರಸ 4 ಚಮಚ ತೆಗೆದಿಡಿ, ಅದಕ್ಕೆ ಚೂರು ಬೆಲ್ಲ ಹಾಕಿ ಕರಗಿಸಿಡಿ.

4 ಚಮಚ ಕಾಯಿ ತುರಿದಿಡಿ.

2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.

   

ತೊಳೆದ ಅವಲಕ್ಕಿಗೆ ಹುಣಿಸೆ ರಸ, ಉಪ್ಪು, 1/2 ಚಮಚ ಖಾರಾ ಪುಡಿ, 1 ಚಮಚ ಸಾರಿನ ಪುಡಿ ಹಾಕಿ ಕಲೆಸಿಡಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ. ಅವಲಕ್ಕಿ ಮುಳುಗುವಷ್ಟು ನೀರಿದ್ದರೆ ಸಾಕು. ಹೆಚ್ಚು ನೀರು ಹಾಕಿದರೆ ಅವಲಕ್ಕಿ ಮೆತ್ತಗೆ ಆಗುತ್ತದೆ. ಅವಲಕ್ಕಿ 1/2 ಗಂಟೆ ನೆನೆಯಲಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಎಣ್ಣೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಇಂಗು, ಅರಿಷಿಣ, ಕರಿಬೇವು ಹಾಕಿ ಸ್ವಲ್ಪ ಹುರಿದು ನಂತರ ಅವಲಕ್ಕಿಯನ್ನು ಕೈಯಿಂದ ಬಿಡಿ ಬಿಡಿಯಾಗಿ ಮಾಡಿ ಒಗ್ಗರಣೆಗೆ ಹಾಕಿ ಅವಲಕ್ಕಿ ಸ್ವಲ್ಪ ಬಿಸಿ ಮಾಡಿ, ಕೊನೆಯಲ್ಲಿ ಕಾಯಿ ತುರಿ, ಕಡಲೇ ಬೀಜ, ಎಳ್ಳು ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಯಾದ ಗೊಜ್ಜವಲಕ್ಕಿ ಸಿದ್ಧ!

ಧನ್ಯವಾದಗಳು.

Leave a Reply

Your email address will not be published.