Kannada ಉಪಹಾರ

PESARATTU ಪೆಸರಟ್ಟು

ಆಂಧ್ರ ಪ್ರದೇಶದ ಜನಪ್ರಿಯ ತಿಂಡಿ! ಆರೋಗ್ಯಕರವಾದ, ರುಚಿಯಾದ, ದೇಹಕ್ಕೆ ತಂಪಾದ ದೋಸೆ!

ಮಾಡುವ ವಿಧಾನ:-

1 ಲೋಟ ಹೆಸರು ಕಾಳು, 2 ಚಮಚ ಅಕ್ಕಿ ರಾತ್ರಿ ಪೂರ ನೆನೆಸಿಡಿ. ಸಾಧಾರಣವಾಗಿ ಹೆಸರು ಕಾಳು ಹಾಕಿ ಮಾಡುವುದು. ನಾನು ಮೊಳಕೆ ಹೆಸರು ಕಾಳು ಹಾಕಿದ್ದೇನೆ. ಆರೋಗ್ಯಕರವಾದ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ಪ್ರಯತ್ನ!

ಬೆಳಗ್ಗೆ ನೆಂದ ಕಾಳು, 1 ಅಥವಾ 2 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ.

   

2 ಈರುಳ್ಳಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಕಾವಲಿ ಕಾಯಲು ಇಟ್ಟು ತೆಳ್ಳಗೆ ದೋಸೆ ಹಿಟ್ಟು ಹರಡಿ ಸ್ವಲ್ಪ ಹೆಚ್ಚಿದ ಈರುಳ್ಳಿ ಹರಡಿ ಮೆತ್ತಗೆ ಒತ್ತಿ, ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿಡಿ.

   

ನಂತರ ದೋಸೆ ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ, ರುಚಿಯಾದ, ಆರೋಗ್ಯಕರವಾದ ಪೆಸರಟ್ಟು ಸಿದ್ಧ! ಚಟ್ನಿಯೊಂದಿಗೆ ತುಂಬಾ ಚೆನ್ನಾಗಿರುತ್ತದೆ.

   

ಮಧ್ಯದಲ್ಲಿ ಬೇಕಾದರೆ ಸ್ವಲ್ಪ ಉಪ್ಪಿಟ್ಟು ಇಟ್ಟು ಮಡಚಿ ಬೇಯಿಸಿದರೆ, ಪೆಸರಟ್ಟು ಉಪ್ಮಾ ಸಿದ್ಧ!

ಧನ್ಯವಾದಗಳು.

Leave a Reply

Your email address will not be published.