Kannada ಉಪಹಾರ

MOSARU AKKI THARI UPPITTU ಮೊಸರು ಅಕ್ಕಿ ತರಿ ಉಪ್ಪಿಟ್ಟು

ಉಪ್ಪಿಟ್ಟು ಎಲ್ಲರ ಮನೆಯಲ್ಲಿ ಮಾಡುತ್ತಾರೆ. ಮೊಸರು ಹಾಕಿ ಎಂದಾದರೂ ಉಪ್ಪಿಟ್ಟು ಮಾಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಮಾಡಿ ನೋಡಿ! ಮೊಸರು ಅಕ್ಕಿ ತರಿ ಉಪ್ಪಿಟ್ಟು ಮಾಡುವ ವಿಧಾನ:-      1 ಲೋಟ ಅಕ್ಕಿ ತರಿಗೆ ಸ್ವಲ್ಪ ಉಪ್ಪು, ಹುಳಿ ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ರವೆ ಹುರಿಯುವ ಅಗತ್ಯವಿಲ್ಲ. ರಾತ್ರಿ ಕಲೆಸಿ, ಬೆಳಗ್ಗೆ ಇಡ್ಲಿಯಂತೆ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ. ಸ್ವಲ್ಪ ತಣ್ಣಗಾದ ಮೇಲೆ, ಪುಡಿ ಮಾಡಿ ಇಡಿ.     ಬಾಣಲೆಯಲ್ಲಿ ಒಗ್ಗರಣೆಗೆ, …

Kannada ಸಾಂಬಾರು ಮತ್ತು ಪಲ್ಯಗಳು

KALLANGADI SIPPE PALYA ಕಲ್ಲಂಗಡಿ ಸಿಪ್ಪೆ ಪಲ್ಯ

ಬೇಸಿಗೆ ಬಂತೆಂದರೆ ಎಲ್ಲೆಡೆ ಕಲ್ಲಂಗಡಿ ಹಣ್ಣಿನ ರಾಶಿ ರಾಶಿ, ದೇಹವನ್ನು ತಂಪಾಗಿಡುವ ಈ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣನ್ನು ತಿಂದ ಮೇಲೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಸ್ವಲ್ಪ ಆ ಸಿಪ್ಪೆಯ ಮಹತ್ವದ ಬಗ್ಗೆ ತಿಳಿಯೋಣವೇ? ಕೆಂಪಾದ ಹಣ್ಣಿಗಿಂತ ಬಿಳಿ ಭಾಗವೇ ಹೆಚ್ಚು ಆರೋಗ್ಯಕಾರಿ, ಈ ಸಿಪ್ಪೆಯನ್ನು ವಿದೇಶಗಲ್ಲಿ ಜ್ಯೂಸ್, ಜಾಮ್ ಬಳಕೆಯಲ್ಲಿ ಹೇರಳವಾಗಿ ಬಳಸುತ್ತಾರೆ, ಹಾಗಾದರೆ ನಾವು ಸಹ ಈ ಸಿಪ್ಪೆಯಿಂದ ಒಂದು ರುಚಿಯಾದ, ಆರೋಗ್ಯಕರವಾದ ಪಲ್ಯವನ್ನು ಮಾಡೋಣವೇ? ಕಲ್ಲಂಗಡಿ ಸಿಪ್ಪೆಯ ಪಲ್ಯ …

Kannada ಉಪಹಾರ

TOMATO POORI ಟೊಮೇಟೋ ಪೂರಿ

ಬೆಳಗ್ಗಿನ ತಿಂಡಿಗೆ ತುಂಬಾ ಮನೆಗಳಲ್ಲಿ ಪೂರಿ ಮಾಡುತ್ತಾರೆ. ಪೂರಿ ಜನಪ್ರಿಯ ತಿನಿಸು ಕೂಡ ಹೌದು!!! ಇದೇ ಪೂರಿಯ ಇನ್ನೊಂದು ರೂಪ ಟೊಮೇಟೋ ಪೂರಿ. ಸಾಧಾರಣ ಪೂರಿಗಿಂತ ಸ್ವಲ್ಪ ರುಚಿ, ಬಣ್ಣ ಬೇರೆ!!! ಆಹಾರದಲ್ಲಿ ವೈವಿಧ್ಯತೆ ಬಯಸುವವರಿಗೆ ಈ ರೆಸಿಪಿ ಖಂಡಿತಾ ಇಷ್ಟ ಆಗುತ್ತೆ!!! ಮಾಡುವ ವಿಧಾನ:-    4 ಟೊಮೇಟೋ ತೊಳೆದು ದೊಡ್ಡದಾಗಿ ಹೆಚ್ಚಿ ನೀರು ಹಾಕದೆ ರುಬ್ಬಿ ರಸ ಶೋಧಿಸಿ ಇಡಿ. 1 ಅಳತೆ ಗೋಧಿ ಹಿಟ್ಟು, 1 ಅಳತೆ ಚಿರೋಟಿ ರವೆ, 1 ಸಣ್ಣಗೆ …

Kannada Oota Tindi Tinisu ಖಾರ ತಿನಿಸುಗಳು

STUFFED ONION RINGS & KADALE BELE CHITHRANNA ಸ್ಟಫ್ಡ್ ಆನಿಯನ್ ರಿಂಗ್ಸ್ ಮತ್ತು ಕಡಲೇ ಬೇಳೆ ಚಿತ್ರಾನ್ನ

ಸ್ಟಫ್ಡ್ ಆನಿಯನ್ ರಿಂಗ್ಸ್ ಮಾಡುವ ವಿಧಾನ:-     4 ಆಲೂ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, ಹಸಿ ಮೆಣಸಿನ ಕಾಯಿ ಪೇಸ್ಟ್,1/2 ಚಮಚ ಜೀರಿಗೆ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಬಜ್ಜಿ ಹಿಟ್ಟು ಕಲೆಸಿಡಿ. ಈರುಳ್ಳಿ ಸಿಪ್ಪೆ ತೆಗೆದು 1/2 ಇಂಚು ಅಳತೆಗೆ ರಿಂಗ್ಸ್ ತರಹ ಕತ್ತರಿಸಿ ರಿಂಗ್ಸ್ ಅನ್ನು ಬೇರೆ ಬೇರೆ ಮಾಡಿ, ಒಂದು ದೊಡ್ಡ ರಿಂಗ್ ಒಳಗೆ ಒಂದು ಚಿಕ್ಕ ರಿಂಗ್ …

Kannada Tindi Tinisu ಖಾರ ತಿನಿಸುಗಳು

MATODI KADUBU ಮಾಟೋಡಿ ಕಡುಬು

ಗಣಪತಿಗೆ ಅತ್ಯಂತ ಪ್ರಿಯವಾದದ್ದು ಕಡುಬು! ಅವನ ಭಕ್ತರಾದ ನಮಗೂ ಸಹ!!! ಅದರಲ್ಲೂ ಕರಿಗಡುಬು ಯಾರಿಗೆ ಇಷ್ಟ ಇಲ್ಲ ಹೇಳಿ? ಖಾರಾ ಕರಿಗಡುಬು ಯಾವಾಗಲಾದರೂ ತಿಂದಿದ್ದೀರಾ? ಇಲ್ಲದಿದ್ದರೆ ಈಗ ಮಾಡಿ ನೋಡಿ. ಒಂದು ಪುಸ್ತಕದಲ್ಲಿ ಈ ರೆಸಿಪಿ ನೋಡಿದೆ. ತುಂಬಾ ಚೆನ್ನಾಗಿತ್ತು, ನಿಮ್ಮ ಜೊತೆ ಹಂಚಿ ಕೊಳ್ಳೋಣ ಅಂತ ಈ ರೆಸಿಪಿ ಹಾಕಿದ್ದೇನೆ. ಮಾಡುವ ವಿಧಾನ:-      1 ಲೋಟ ಕಡಲೇ ಬೇಳೆಯನ್ನು ತೊಳೆದು 2 ಘಂಟೆ ನೆನೆಸಿ, ಸೋಸಿ ಕೊಂಡು, 1/2 ಲೋಟ ಕಾಯಿ ತುರಿ, 6 …

Kannada ಚಾಟ್ಸ್

MOSARU BELE ಮೊಸರು ಬೇಳೆ

ಸಾಮಾನ್ಯವಾಗಿ ಹುರಿಗಾಳು ಅಂಗಡಿಗಳಲ್ಲಿ ಹೆಚ್ಚು ಮಾರಾಟವಾಗುವ ಕರಿದ ತಿಂಡಿ! ಮೊಸರಲ್ಲಿ ನೆನೆಸಿ ಮಾಡುವ ಬೇಳೆ! ಅದರ ರೆಸೆಪಿ ನೋಡೋಣವೇ? ಮಾಡುವ ವಿಧಾನ:-      ತೊಗರಿ ಬೇಳೆಯನ್ನು ಹುಳಿ ಮಜ್ಜಿಗೆಯಲ್ಲಿ 4 ಗಂಟೆ ನೆನೆಸಿಡಿ. ನಂತರ ಮಜ್ಜಿಗೆಯಿಂದ ತೆಗೆದು ಸೋರಿಹಾಕಿ. ಮಜ್ಜಿಗೆ ಪೂರ್ತಿ ಹೋದ ಮೇಲೆ, ಒಗೆದ ಒಣಬಟ್ಟೆ ಮೇಲೆ ಹರಡಿ ನೆರಳಲ್ಲಿ 1 ಗಂಟೆ ಒಣಗಿಸಿ.      ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಒಂದು ಜಾಲರ ಬಾಣಲೆಯಲ್ಲಿ ಇಡುವ ಹಾಗೆ ನೋಡಿ ಕೊಂಡು(ಚಿತ್ರ ನೋಡಿ), ಜಾಲರ …

Kannada ಸೂಪ್ ಇತ್ಯಾದಿ

PALAK SOUP ಪಾಲಾಕ್ ಸೂಪ್

ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:-     2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ)     2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.   …

Kannada Oota

MUGHLAI BIRIYANI (Veg) ಮುಘಲಾಯ್ ಬಿರಿಯಾನಿ (ವೆಜ್)

ಬಿರಿಯಾನಿಗಳ ರಾಜ ಎಂದೇ ಹೇಳಬಹುದು! ರುಚಿ ಅದ್ಭುತ! ಮಾಡುವ ವಿಧಾನ ನೋಡೋಣವೇ? 1/4 ಕೇಜಿ (1 ಲೋಟ) ಬಾಸುಮತಿ ಅಕ್ಕಿಯನ್ನು ತೊಳೆದಿಡಿ. ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಕುದಿಯಲು ಇಡಿ. 1 ಪಲಾವ್ ಎಲೆ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ, ಬಾಸುಮತಿ ಅಕ್ಕಿ ಹಾಕಿ ಬೇಯಲು ಬಿಡಿ. ಅಕ್ಕಿ 90% ಬೆಂದ ಮೇಲೆ ನೀರು ಸೋರಿ ಹಾಕಿಡಿ. 1/2 ಚಮಚ ತುಪ್ಪ, ಚಿಟಿಕೆ ಉಪ್ಪು ಹಾಕಿ ಕಲೆಸಿಡಿ.     …

Kannada ಉಪಹಾರ

GODHI ADAI & CARROT CHUTNEY ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ

 GODHI ADAI & CARROT CHUTNEY (Healthy n Tasty) ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ (ಆರೋಗ್ಯಕರ ಮತ್ತು ರುಚಿಕರ) ಅಡೈ ಎಂದರೆ ತಮಿಳಿನಲ್ಲಿ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಆರೋಗ್ಯಕರ ದೋಸೆ! ಅಕ್ಕಿಯಷ್ಟೇ ಪ್ರಮಾಣದ ಮಿಶ್ರ ಬೇಳೆಗಳನ್ನು ಸೇರಿಸಿ ಮಾಡುವ ದೋಸೆ! ಅದೇ ಆರೋಗ್ಯಕರ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ರೆಸಿಪಿ ನಿಮಗಾಗಿ! ಗೋಧಿ ಅಡೈ ಮಾಡುವ ವಿಧಾನ:-    1 ಲೋಟ ಗೋಧಿ ನುಚ್ಚು ತೊಳೆದು 2 ಗಂಟೆ ನೆನೆಸಿಡಿ. 1 …

Kannada ಉಪಹಾರ

AVALAKKI KESARI BATH & AVARE KALU UPPITTU ಅವಲಕ್ಕಿ ಕೇಸರಿ ಬಾತ್ ಮತ್ತು ಅವರೇ ಕಾಳು ಉಪ್ಪಿಟ್ಟು

 ಕೇಸರಿ ಬಾತ್ ಸಾಮಾನ್ಯವಾಗಿ ಎಲ್ಲರೂ ರವೆಯಿಂದ ಮಾಡುತ್ತಾರೆ. ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಅಳತೆ ಗಟ್ಟಿ ಅವಲಕ್ಕಿಯನ್ನು 1 ಚಮಚ ತುಪ್ಪ ಹಾಕಿ ಸ್ವಲ್ಪ ಕೆಂಪಗೆ ಹುರಿದು, ತರಿ ತರಿಯಾಗಿ ಪುಡಿ ಮಾಡಿ.     ಬಾಣಲೆಯಲ್ಲಿ 1 1/2 ಲೋಟ ನೀರು ಹಾಕಿ ಪುಡಿ ಮಾಡಿದ ಅವಲಕ್ಕಿ ಹಾಕಿ ಸ್ವಲ್ಪ ಬೆಂದ ಮೇಲೆ, 1/2 ಅಥವಾ 3/4 ಲೋಟ ಸಕ್ಕರೆ ಹಾಕಿ, 1/4 ಲೋಟ ತುಪ್ಪ, ಚಿಟಿಕೆ ಕೇಸರಿ ಬಣ್ಣ …