HESARU UDDINA VADE ಹೆಸರು ಉದ್ದಿನ ವಡೆ
ಉದ್ದಿನ ವಡೆ ಎಲ್ಲರ ಮೆಚ್ಚಿನ ತಿಂಡಿ! ರುಚಿಕರ ಕೂಡ! ಈ ರುಚಿಯಾದ ಉದ್ದಿನ ವಡೆಯನ್ನು ಇನ್ನಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ನನ್ನ ಚಿಕ್ಕ ಅತ್ತೆಯಿಂದ ಕಲಿತದ್ದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ, 1/2 ಲೋಟ ಹೆಸರು ಬೇಳೆ ಬೇರೆ ಬೇರೆಯಾಗಿ ತೊಳೆದು 2 ಗಂಟೆ ನೆನೆಸಿಡಿ. ಹೆಸರು ಬೇಳೆಯನ್ನು ನೀರು ಸೋರಿ ಹಾಕಿ ರುಬ್ಬದೆ ಹಾಗೇ ಇಡಿ. ಉದ್ದಿನ ಬೇಳೆಯನ್ನು ನೀರಿನಿಂದ ತೆಗೆದು ಆದಷ್ಟೂ ನುಣ್ಣಗೆ ರುಬ್ಬಿಡಿ. 1 ಚಮಚ …