Showing 560 Result(s)
Kannada ಉಪಹಾರ

OTAPPA (BANALE ROTTI) ಓಟಪ್ಪ ( ಬಾಣಲೆ ರೊಟ್ಟಿ)

ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎಲ್ಲೆಡೆ ಅವರೆ ಕಾಯಿಯ ಸೊಗಡು! ರುಚಿಯಾದ ಅವರೆ ಕಾಳಿನ ಒಂದು ಅತ್ಯಂತ ಹಳೆಯ ಕಾಲದ ಅಜ್ಜಿಯ ಕೈ ರುಚಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಎಳೆಯದಾದ ಅವರೆ ಕಾಳು 1 ಲೋಟ ಬೇಯಿಸಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. ( ಕಾಯಿ ತುರಿ ಸ್ವಲ್ಪ ಹೆಚ್ಚೇ ಬೇಕು) ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹಸಿ ಮೆಣಸಿನಕಾಯಿ ಬೇಕಾದರೆ 2 ಸಣ್ಣಗೆ ಹೆಚ್ಚಿಡಿ.     ಬೆಂದ ಅವರೆ ಕಾಳಿಗೆ ಬಿಸಿಯಿದ್ದಾಗಲೇ …

Kannada ಉಪಹಾರ

AKKI UPPITTU ಅಕ್ಕಿ ಉಪ್ಪಿಟ್ಟು

ಹೆಸರು ಕೇಳಿ ಆಶ್ಚರ್ಯ ಆಯ್ತಾ?! ಸಾಮಾನ್ಯವಾಗಿ ಉಪ್ಪಿಟ್ಟು ರವೆಯನ್ನು ಹಾಕಿ ಮಾಡುತ್ತಾರೆ. ಅಕ್ಕಿ ಹಾಕಿ ಉಪ್ಪಿಟ್ಟಾ ಅಂತ ಯೋಚನೆ ಮಾಡ ಬೇಡಿ. ಸುಲಭವಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ ನೋಡೋಣ! ಮಾಡುವ ವಿಧಾನ:- 1 ಲೋಟ ಅಕ್ಕಿಯನ್ನು ಎಣ್ಣೆ ಹಾಕದೆ ಕೆಂಪಾಗಿ ಹುರಿದಿಡಿ. ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಬಟಾಣಿ, ಈರುಳ್ಳಿ, ಆಲೂಗೆಡ್ಡೆ, ಟೋಮೇಟೋ ಎಲ್ಲಾ ಹಾಕಬಹುದು.    4 ಚಮಚ ಕಾಯಿ ತುರಿದಿಡಿ. 5 ಹಸಿ ಮೆಣಸಿನಕಾಯಿ …

Kannada ಸಾಂಬಾರು ಮತ್ತು ಪಲ್ಯಗಳು

ALASANDE CURRY ಅಲಸಂದೆ ಕರ್ರಿ

ಚಪಾತಿ, ಅನ್ನ, ರೊಟ್ಟಿ ಜೊತೆಗೆ ಒಳ್ಳೆಯ Combination! ನಾನು ಹಸಿ ಅಲಸಂದೆ ಕಾಳು ಹಾಕಿ ಮಾಡಿದ್ದೇನೆ. ನೆನೆಸಿದ ಕಡಲೇ ಕಾಳು, ಹೆಸರು ಕಾಳು, ಅಲಸಂದೆ ಕಾಳಿನಲ್ಲಿ ಬೇಕಾದರೂ ಮಾಡಬಹುದು. ಕಾಳನ್ನು ಬೇಯಿಸಿಡಿ. 1 ಈರುಳ್ಳಿ, 2 ಟೊಮೆಟೊ ಸಣ್ಣಗೆ ಹೆಚ್ಚಿಡಿ.     ಕಾಯಿ ತುರಿ 6 ಚಮಚ ತುರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿ ಸ್ವಲ್ಪ ಹುರಿದಿಡಿ. ಬ್ಯಾಡಗಿ ಮೆಣಸಿನಕಾಯಿ ನಿಮಗೆ ಖಾರಾ ಬೇಕಾದಷ್ಟು …

Kannada ಸಾಂಬಾರು ಮತ್ತು ಪಲ್ಯಗಳು

ANDHRA PAPPU ಆಂಧ್ರ ಪಪ್ಪು

ಆಂಧ್ರ ಪ್ರದೇಶದ ಸುಪ್ರಸಿದ್ಧ Side dish! ಬಿಸಿ ಬಿಸಿ ಅನ್ನದ ಜೊತೆಗೆ ಒಂದು ಚಮಚ ತುಪ್ಪ ಹಾಕಿ ತಿಂದರೆ ಆಹಾ! ಜೊತೆಗೆ ಕರಿದ ಉದ್ದಿನ ಹಪ್ಪಳ ಇದ್ದರೇ!!!??? ಮಾಡುವ ವಿಧಾನ:- ನಿಮಗೆ ಬೇಕಾದ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಚಕ್ಕೋತನೆ ಸೊಪ್ಪು, ಪಾಲಾಕ್ ಸೊಪ್ಪು ತುಂಬಾ ಚೆನ್ನಾಗಿರುತ್ತದೆ. ಸ್ವಲ್ಪ ಸೊಪ್ಪು ಹೆಚ್ಚು ಬೇಕಾಗುತ್ತದೆ. ನಾಲ್ಕೈದು ಕಟ್ಟು ಹಾಕಿದರೂ ಚೆನ್ನಾಗಿರುತ್ತದೆ. (ಚಕ್ಕೋತನೆ ಸೊಪ್ಪಿನ ಫೋಟೋ ಹಾಕಿದ್ದೇನೆ ನೋಡಿ) 1 ಈರುಳ್ಳಿ, 2 ಟೋಮೋಟೋ, 2 ಬೆಳ್ಳುಳ್ಳಿ, 6 ಹಸಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

RAVA BURFI ರವಾ ಬರ್ಫಿ

ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. 1/2 ಅಳತೆ ಒಣ ಕೊಬ್ಬರಿ/ ಕಾಯಿ ತುರಿದಿಡಿ. 1 ಅಳತೆ ಸಕ್ಕರೆಗೆ 1 /2 ಅಳತೆ ನೀರು, ಸ್ವಲ್ಪ ಕೇಸರಿ ದಳ ಹಾಕಿ ಕುದಿಯಲು ಇಡಿ.     ಇನ್ನೊಂದು ಕಡೆ 4 ಚಮಚ ತುಪ್ಪ ಹಾಕಿ 1 ಅಳತೆ ಚಿರೋಟಿ ರವೆ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಸಕ್ಕರೆ ಪಾಕ ಕುದಿದು 1/2 ಎಳೆ ಪಾಕ ಬಂದಾಗ, ಹುರಿದ ರವೆಗೆ ಹಾಕಿ, ಕೊಬ್ಬರಿ ತುರಿ, ಏಲಕ್ಕಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BELLADA KOBBARI MITAYI ಬೆಲ್ಲದ ಕೊಬ್ಬರಿ ಮಿಠಾಯಿ

ಸಾಮಾನ್ಯವಾಗಿ ಕೊಬ್ಬರಿ ಮಿಠಾಯಿ ಸಕ್ಕರೆ ಹಾಕಿ ಮಾಡೋದು ಜಾಸ್ತಿ! ಬದಲಾವಣೆಗಾಗಿ ಬೆಲ್ಲ ಹಾಕಿ ಮಾಡಿ . ಖಂಡಿತಾ ಇಷ್ಟ ಆಗುತ್ತೆ! ಮಾಡುವ ವಿಧಾನ:- 3/4 ಲೋಟ ಬೆಲ್ಲ ಪುಡಿ ಮಾಡಿಡಿ. 1 ಲೋಟ ಕಾಯಿ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ.     ದಪ್ಪ ತಳದ ಬಾಣಲೆಯಲ್ಲಿ ಎರಡನ್ನೂ ಸೇರಿಸಿ ಚೆನ್ನಾಗಿ ಕಲೆಸಿ ಒಲೆಯ ಮೇಲಿಡಿ. ಬೆಲ್ಲ ಕರಗಿ ಕಾಯಿ ತುರಿಯೊಂದಿಗೆ ಬೆರೆತು ಚೆನ್ನಾಗಿ ಬೆಂದ ಮೇಲೆ ಒಂದೇ ಮುದ್ದೆಯಂತೆ ಆದಾಗ ಚಿಟಿಕೆ ಏಲಕ್ಕಿ …

Kannada ಉಪಹಾರ ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAKHANA KHEER & TEMPLE CHITRANNA ಮಖಾನಾ ಖೀರ್ ಮತ್ತು ಟೆಂಪಲ್ ಚಿತ್ರಾನ್

ಮಖಾನಾ ಖೀರ್ ಮಾಡುವ ವಿಧಾನ:-ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮಖಾನಾ ಹಾಕಿ ನಾಲ್ಕೈದು ನಿಮಿಷ ಮಧ್ಯಮ ಉರಿಯಲ್ಲಿ ಹುರಿದಿಡಿ. ತಣ್ಣಗಾದ ಮೇಲೆ ಕೈಯಿಂದ ಸ್ವಲ್ಪ ಮಖಾನಾ ಪುಡಿ ಮಾಡಿ ಮಿಕ್ಕದ್ದೆಲ್ಲ ಹಾಗೇ ಇಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ.    ಹಾಲು ಅರ್ಧದಷ್ಟು ಆದಾಗ 3 ಅಥವಾ 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ಹುರಿದ ಮಖಾನಾ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

CHIROTI RAVE ROTTI & TOMATO KAYI CHUTNEY ಚಿರೋಟಿ ರವೆ ರೊಟ್ಟಿ ಮತ್ತು ಟೋಮೇಟೋ ಕಾಯಿ ಚಟ್ನಿ

ಪ್ರತಿ ದಿನ ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂಬುದು ಎಲ್ಲಾ ಗೃಹಿಣಿಯರನ್ನು ಕಾಡುವ ಪ್ರಶ್ನೆ!!! ಈ ರೊಟ್ಟಿ ಮಾಡಿ ನೋಡಿ! ಮೃದುವಾಗಿ, ರುಚಿಯಾಗಿ ಇರುತ್ತದೆ. ಮಾಡುವ ವಿಧಾನ:- 1 1/2 ಲೋಟ ನೀರಿಗೆ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ ಹಾಕಿ ಕುದಿಯಲು ಇಡಿ. ನೀರು ಕುಡಿಯಲು ಆರಂಭವಾದಾಗ 1 ಲೋಟ ಚಿರೋಟಿ ರವೆ, 2 ಚಮಚ ಅಕ್ಕಿ ಹಿಟ್ಟು ಹಾಕಿ, ಬೇಗ ಬೇಗ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ, ಉರಿ ಪೂರ್ತಿಯಾಗಿ ಕಡಿಮೆ ಮಾಡಿ, ತಟ್ಟೆ …

Kannada ಸಾಂಬಾರು ಮತ್ತು ಪಲ್ಯಗಳು

GROUND NUT CURRY ಗ್ರೌಂಡ್ ನಟ್ ಕರ್ರಿ

ರುಚಿಯಾದ, ಸುಲಭವಾಗಿ ಮಾಡಬಹುದಾದ, ಚಪಾತಿ, ಅನ್ನ, ರೊಟ್ಟಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುವ ಕರ್ರಿ! ಮಾಡುವ ವಿಧಾನ:- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1 ಚಮಚ ಧನಿಯ, 2 ಚಮಚ ಗಸಗಸೆ, 1/2 ಇಂಚು ಚಕ್ಕೆ, 2 ಲವಂಗ, 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದಿಡಿ.      ಹುರಿದ ಸಾಮಗ್ರಿಗಳನ್ನು ಪುಡಿ ಮಾಡಿ 2 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಡಿ. ಕಡಲೇ ಬೀಜ ತರಿ ತರಿಯಾಗಿ …

Kannada Oota ಉಪಹಾರ

AMLA RICE ಆಮ್ಲ ರೈಸ್ (ಬೆಟ್ಟದ ನೆಲ್ಲಿ ಕಾಯಿ ಅನ್ನ)

ಬೆಟ್ಟದ ನೆಲ್ಲಿ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ! ಅದರ ರುಚಿಯಾದ ಚಿತ್ರಾನ್ನ ಮಾಡುವ ವಿಧಾನ ಇಲ್ಲಿದೆ ನೋಡಿ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 6 ರಿಂದ 8 ಬೆಟ್ಟದ ನೆಲ್ಲಿ ಕಾಯಿ ತೊಳೆದು, ತುರಿದಿಡಿ. 2 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಮೆಂತ್ಯ ಎಣ್ಣೆ ಹಾಕದೆ ಹುರಿದಿಡಿ.      6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ …