Kannada ಚಾಟ್ಸ್

GIRMIT ಗಿರ್ಮಿಟ್

ಉತ್ತರ ಕರ್ನಾಟಕದ ಜನಪ್ರಿಯ ತಿಂಡಿ!

ಮಾಡುವ ವಿಧಾನ:-

1 ಲೀಟರ್ ಕಡಲೇ ಪುರಿ ಕ್ಲೀನ್ ಮಾಡಿಡಿ.

2 ಈರುಳ್ಳಿ, 2 ಟೊಮೇಟೋ, 2 ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಈರುಳ್ಳಿ, ಟೊಮೇಟೋ 2 ಚಮಚದಷ್ಟು ಕೊನೆಯಲ್ಲಿ ಹಾಕಲು ತೆಗೆದಿಡಿ.

2 ಚಮಚ ಹುಣಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ.

2 ಚಮಚ ಕಡಲೇ ಹಿಟ್ಟು ಸ್ವಲ್ಪ ನೀರು ಹಾಕಿ ಕಲೆಸಿಡಿ.

4 ಚಮಚ ಹುರಿಗಡಲೆ ಪುಡಿ ಮಾಡಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ ಸಾಸಿವೆ, ಜೀರಿಗೆ, ಅರಿಶಿನಣ, ಕರಿಬೇವು, ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೇಟೋ, 1/2 ಚಮಚ ಖಾರಾ ಪುಡಿ, ಉಪ್ಪು ಹಾಕಿ ಸ್ವಲ್ಪ ಹುರಿದು ನಂತರ ಹುಣಸೆ ರಸ, ಸ್ವಲ್ಪ ನೀರಲ್ಲಿ ಕಲೆಸಿದ ಕಡಲೇ ಹಿಟ್ಟು ಹಾಕಿ ಕುದಿಸಿದರೆ ಗೊಜ್ಜು ತಯಾರಾಗುತ್ತದೆ.

  

ಒಂದು ಪಾತ್ರೆಯಲ್ಲಿ ಕಡಲೇ ಪುರಿ ಹಾಕಿ ತಯಾರಿಸಿದ ಗೊಜ್ಜು, ಹುರಿಗಡಲೆ ಪುಡಿ, ಈರುಳ್ಳಿ, ಟೊಮೇಟೋ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಮೇಲೆ ಬೇಕಾದರೆ ಖಾರಾ ಸೇವ್ ಹಾಕಿ ಸವಿಯಿರಿ.

ಗಿರ್ಮಿಟ್ ಜೊತೆ ಬಿಸಿ ಬಿಸಿ ಮೆಣಸಿನ ಕಾಯಿ ಬಜ್ಜಿ ಇದ್ದರೆ ತುಂಬಾ ಒಳ್ಳೆಯ Combination!

ಧನ್ಯವಾದಗಳು.

Leave a Reply

Your email address will not be published.