ಹಬ್ಬಗಳಲ್ಲಿ ಮಾಡುವ ಸಿಹಿ ತಿಂಡಿ. ಮಾಡುವುದು ಸುಲಭ! ಮಾಡಿಟ್ಟರೆ 1 ವಾರವಾರವರೂ ಚೆನ್ನಾಗಿರುತ್ತದೆ.
ಮಾಡುವ ವಿಧಾನ:-
1 ಪಾವು ಸಕ್ಕರೆಯಲ್ಲಿ 4 ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ.
1 ಗಿಟುಕು ಕೊಬ್ಬರಿ ತುರಿದಿಡಿ.

1 ಪಾವು ಚಿರೋಟಿ ರವೆ 4 ಚಮಚ ತುಪ್ಪ ಹಾಕಿ ಘಮ್ಮೆಂದು ವಾಸನೆ ಬರುವವರೆಗೆ ಹುರಿದಿಡಿ.
ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ರವೆಗೆ ಹಾಕಿ ಚೆನ್ನಾಗಿ ಕಲೆಸೆ ರವೆ ಸ್ವಲ್ಪ ಬಿಸಿಯಿದ್ದಾಗಲೇ ಸ್ವಲ್ಪ ನೀರು/ಹಾಲು ಚಿಮುಕಿಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಸವಿಯಿರಿ.
ಧನ್ಯವಾದಗಳು.
