ಪಲಾವ್ ಎಲ್ಲರ ಅಚ್ಚು ಮೆಚ್ಚಿನ ಆಹಾರ! ಅದೆಷ್ಟು ಬಗೆಯಲ್ಲೀ ಮಾಡಬಹುದು. ಹೇಗೆ ಮಾಡಿದರೂ ಚೆಂದ ಈ ಪಲಾವ್! ಸುಲಭವಾಗಿ, ಬೇಗನೆ , ರುಚಿಯಾಗಿ ಪಲಾವ್ ಮಾಡುವ ರೆಸಿಪಿ ಇಲ್ಲಿದೆ.ಮಾಡುವ ವಿಧಾನ:-
1 ಲೋಟ ಬಾಸುಮತಿ/ ಜೀರಾ ಅಕ್ಕಿ ತೊಳೆದು ನೀರು ಸೋರಿ ಹಾಕಿ.
ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.
ಸ್ವಲ್ಪ ಪುದೀನಾ ಸೊಪ್ಪು ತೊಳೆದು ಹೆಚ್ಚಿಡಿ.

ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಹಾಕಿ 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1 ಪಲಾವ್ ಎಲೆ ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ತರಕಾರಿಗಳು, 1 ಚಮಚ Ginger garlic paste,1 ಚಮಚ ಖಾರಾ ಪುಡಿ, ಉಪ್ಪು ಹಾಕಿ ಬಾಡಿಸಿ, ಅಕ್ಕಿ ಹಾಕಿ ಹುರಿದು ಬಾಸುಮತಿ ಅಕ್ಕಿ ಆದರೆ 1 3/4 ಲೋಟ ಅಥವಾ 2 ಲೋಟ ನೀರು, ಜೀರಾ ಅಕ್ಕಿ ಆದರೆ 1 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ ಕುಕ್ಕರ್ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಡಿ.

ನಂತರ ಮೃದುವಾಗಿ ಕಲೆಸಿ ಮೊಸರು ಬಜ್ಜಿಯೊಂದಿಗೆ ಬಡಿಸಿ.
ರುಬ್ಬುವ ಕೆಲಸವಿಲ್ಲ! ಹೆಚ್ಚು ಮಸಾಲೆ ಇಲ್ಲ!
ಧನ್ಯವಾದಗಳು.
