Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BOURNVITA BURFI ಬೋರ್ನ್ ವಿಟಾ ಬರ್ಫಿ

ಮನೆಯಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಬೋರ್ನ್ ವಿಟಾ ಬರ್ಫಿ ಮಾಡುವ ವಿಧಾನ ಇಲ್ಲಿದೆ!

ಬೇಕಾಗುವ ಸಾಮಗ್ರಿಗಳು:-

ಬೋರ್ನ್ ವಿಟಾ – 1 ಕಪ್
ಹಾಲಿನ ಪುಡಿ – 1 ಕಪ್
ಸಕ್ಕರೆ – 1 ಕಪ್
ತುಪ್ಪ – 4 ಚಮಚ

ಮಾಡುವ ವಿಧಾನ:-

ಹಾಲಿನ ಪುಡಿ ಮತ್ತು ಬೋರ್ನ್ ವಿಟಾವನ್ನು ಚೆನ್ನಾಗಿ ಕಲೆಸಿಡಿ.

ಬಾಣಲೆಯಲ್ಲಿ ಸಕ್ಕರೆಗೆ 1/4 ಕಪ್ ನೀರು ಹಾಕಿ ಕುದಿಯಲು ಇಡಿ.

ಒಂದೆಳೆ ಪಾಕ ಬಂದೊಡನೆ ಹಾಲಿನ ಪುಡಿ, ಬೋರ್ನ್ ವಿಟಾ ಪುಡಿಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಕಲೆಸಿ. ಜೊತೆಗೆ 2 ಚಮಚ ತುಪ್ಪ ಸಹ ಸೇರಿಸಿ. ಬೋರ್ನ್ ವಿಟಾದಲ್ವಿರುವ ಸಕ್ಕರೆಯ ಅಂಶ ಕರಗಿ ಮಿಶ್ರಣ ಸ್ವಲ್ಪ ತೆಳ್ಳಗೆ ಆಗುತ್ತದೆ.

ಕೈ ಬಿಡದೆ ಕಡಿಮೆ ಉರಿಯಲ್ಲಿ ಕಲೆಸುತ್ತಾ ಉಳಿದ ತುಪ್ಪ ಸೇರಿಸಿ.

ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ ಬಂದಾಗ ಒಲೆಯಿಂದ ತೆಗೆದು ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ಬೆಚ್ಚಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ನೀವು ಇದನ್ನು ಬರ್ಫಿ ಅಂತ ಬೇಕಾದರೂ ಕರೆಯಬಹುದು. ಅಥವಾ ಚಾಕೊಲೇಟ್ ಅಂತ ಬೇಕಾದರೂ ಕರೆಯಬಹುದು!

Leave a Reply

Your email address will not be published.