Showing 22 Result(s)
Kannada Oota ಉಪಹಾರ

MAVINA CHITRANNA ಮಾವಿನ ಚಿತ್ರಾನ್ನ

ನಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ತಪ್ಪದೆ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. 10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.    ಮೇಲೆ ಹೇಳಿರುವ ಮೂರನ್ನು ಸ್ವಲ್ಪ ಉಪ್ಪು ಹಾಕಿ, ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, …

Kannada ತಂಪು ಪಾನೀಯಗಳು

WATERMELON SMOOTHIE ವಾಟರ್ ಮೆಲನ್ ಸ್ಮೂದಿ

ಬೇಸಿಗೆಗೆ ಒಂದು ತಂಪಾದ ಪಾನೀಯ! ವಾಟರ್ ಮೆಲನ್ ಸ್ಮೂದಿ! ಬೇಸಿಗೆಗೆ ತಂಪು ಮಾಡುವ ಕಲ್ಲಂಗಡಿ ಹಣ್ಣಿನ ರುಚಿಯಾದ ಸ್ಮೂದಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕಲ್ಲಂಗಡಿ ಹಣ್ಣು ಸಿಪ್ಪೆ, ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.    4 ಪುದೀನಾ ಎಲೆ ತೊಳೆದಿಡಿ ( ಬೇಕಾದರೆ ) ಮಿಕ್ಸರ್ ಜಾರಿಗೆ ಹಣ್ಣಿನ ತುಂಡುಗಳು, ಶುಂಠಿ ತುರಿ, ಪುದೀನಾ ಎಲೆ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿ, ಕೊನೆಯಲ್ಲಿ ಐಸ್ ಕ್ಯೂಬ್ …

Kannada ಉಪಹಾರ

HESARUBELE UPPITTU ಹೆಸರು ಬೇಳೆ ಉಪ್ಪಿಟ್ಟು

ಬೇಸಿಗೆಗೆ ಒಂದು ತಂಪಾದ ಉಪ್ಪಿಟ್ಟು! ಹೆಸರು ಬೇಳೆಯನ್ನು ಈ ಬೇಸಿಗೆಯಲ್ಲಿ ಎಷ್ಟು ತಿಂದರೂ ಒಳ್ಳೆಯದು! ಹೆಸರು ಬೇಳೆಯ ರುಚಿಯಾದ ಉಪ್ಪಿಟ್ಟು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹೆಸರು ಬೇಳೆ ತೊಳೆದು 1 ಗಂಟೆ ನೆನೆಸಿ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ.     ಇದಕ್ಕೆ 1/2 ಲೋಟ ಅಕ್ಕಿ ತರಿ ಹಾಕಿ ಚೆನ್ನಾಗಿ ಕಲೆಸಿ 1/2 ಗಂಟೆ ನೆನೆಸಿಡಿ. ಈ ಮಿಶ್ರಣವನ್ನು ಕುಕ್ಕರಿನಲ್ಲಿ ಇಡ್ಲಿಯ ಹಾಗೆ ಎಣ್ಣೆ ಸವರಿದ ಬಟ್ಟಲಿನಲ್ಲಿ …

Kannada ಹಬ್ಬದ ಅಡುಗೆಗಳು

KOSAMBARI ಕೋಸಂಬರಿ

ಕೋಸಂಬರಿ ನಾವೂ ಮಾಡ್ತೀವಿ ಯಾವಾಗಲೂ ಅದರ ರೆಸಿಪಿ ಯಾಕೆ ಅಂದುಕೊಂಡಿರಾ!!! ಇದು ಸ್ವಲ್ಪ ವಿಶೇಷವಾದ ರೆಸಿಪಿ! ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು! ಮಾಡುವ ವಿಧಾನ:- 1 ಚಿಕ್ಕ ಲೋಟ ಹೆಸರು ಬೇಳೆ ತೊಳೆದು 2 ಗಂಟೆ ನೆನೆಸಿ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ನೀರು ಸೋರಿ ಹಾಕಿಡಿ. ಹೆಸರು ಬೇಳೆ ಬೇಯಿಸಿದ ನೀರನ್ನು ಚೆಲ್ಲದೆ ರಸಂ, ಸಾಂಬಾರು ಮಾಡುವಾಗ ಉಪಯೋಗಿಸಿ. 1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ …

Kannada ಹಬ್ಬದ ಅಡುಗೆಗಳು

MOSARAVALAKKI ಮೊಸರವಲಕ್ಕಿ

ಸಾಧಾರಣವಾಗಿ ಮೊಸರನ್ನ ಎಲ್ಲರೂ ಅನ್ನದಿಂದ ಮಾಡುವುದು. ಗಟ್ಟಿ ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಲೋಟ ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿ ನೀರು ಸೋರಿ ಹಾಕಿಡಿ. 4 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. 4 ಚಮಚ ದಾಳಿಂಬೆ ಬೀಜ ಬಿಡಿಸಿಡಿ. ಚಿಕ್ಕ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, …

Kannada Oota ಸಾಂಬಾರು ಮತ್ತು ಪಲ್ಯಗಳು

PEAS PANEER BALLS CURRY ಪೀಸ್ ಪನ್ನೀರ್ ಬಾಲ್ಸ್ ಕರ್ರಿ

ಬಟಾಣಿ ಮತ್ತು ಪನ್ನೀರ್ ಬಳಸಿ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ! 1/4 ಕೇಜಿ ಬಟಾಣಿ ಬಿಡಿಸಿ ಬೇಯಿಸಿಡಿ. 1 ಟೇಬಲ್ ಚಮಚ ಗಸಗಸೆ 8 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿಡಿ.    3 ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಗಸಗಸೆ ಜೊತೆಗೆ ರುಬ್ಬಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 100 ಗ್ರಾಂ ಪನ್ನೀರ್ ತುರಿದು, 1 ಚಮಚ ಕಾರ್ನ್ ಫ್ಲೋರ್, ಚಿಟಿಕೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HURIGADALE UNDE ಹುರಿಗಡಲೆ ಉಂಡೆ

ಬೆಲ್ಲದಿಂದ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಲೋಟ ಬೆಲ್ಲ ಸಣ್ಣಗೆ ಹೆಚ್ಚಿಡಿ. 2 ಲೋಟ ಹುರಿಗಡಲೆ ( ಪುಟಾಣಿ ) ನುಣ್ಣಗೆ ಪುಡಿ ಮಾಡಿಡಿ.      1 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1/2 ಲೋಟ ಒಣ ಕೊಬ್ಬರಿ ತುರಿದಿಡಿ. 1/2 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ 1/2 ಲೋಟ ನೀರು ಹಾಕಿ …

Kannada ತಂಪು ಪಾನೀಯಗಳು

BELLA & DRY FRUITS LASSI ಬೆಲ್ಲ & ಡ್ರೈ ಫ್ರೂಟ್ಸ್ ಲಸ್ಸಿ

ಬೇಸಿಗೆ ಕಾಲದಲ್ಲಿ ಕುಡಿಯಲು ಬಯಸುವ ಪಾನೀಯಗಳಲ್ಲಿ ಲಸ್ಸಿ ಕೂಡ ಒಂದು! ದೇಹವನ್ನು ತಂಪಾಗಿಡುವುದರಲ್ಲಿ ಈ ಪಾನೀಯ ಸಹಕರಿಸುತ್ತದೆ! ಲಸ್ಸಿಯನ್ನು ಸಾಧಾರಣವಾಗಿ ಸಕ್ಕರೆ ಹಾಕಿ ಮಾಡುವುದು! ಆದರೆ ಆರೋಗ್ಯಕರವಾದ ಬೆಲ್ಲ ಹಾಕಿ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- ನಿಮಗೆ ಇಷ್ಟವಾದ ಡ್ರೈ ಫ್ರೂಟ್ಸ್ ಗಳನ್ನು ಏಲಕ್ಕಿಯೊಂದಿಗೆ ನುಣ್ಣಗೆ ಪುಡಿ ಮಾಡಿಡಿ.     2 ಚಮಚ ಬೆಲ್ಲ ಪುಡಿ ಮಾಡಿಡಿ. 1 ಲೋಟ ಗಟ್ಟಿಯಾದ ಸಿಹಿ ಮೊಸರು, ಡ್ರೈ ಫ್ರೂಟ್ಸ್ ಪುಡಿ, ಬೆಲ್ಲದ ಪುಡಿ, ಚಿಟಿಕೆ ಉಪ್ಪು …

Kannada ಉಪಹಾರ

VEGETABLES RAVE IDLI ವೆಜಿಟೇಬಲ್ಸ್ ರವಾ ಇಡ್ಲಿ

ರವಾ ಇಡ್ಲಿ ಎಲ್ಲರೂ ಇಷ್ಟಪಡುವ ತಿಂಡಿ! ರುಚಿಯಾದ ರವಾ ಇಡ್ಲಿಯನ್ನು ಮತ್ತಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಬೆಯಲ್ಲಿ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು.     ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು, 1 ಲೋಟ ಮೀಡಿಯಂ ರವೆ ( ಉಪ್ಪಿಟ್ಟು ರವೆ ) ಹಾಕಿ ಘಮ್ ಎಂದು ವಾಸನೆ …

Kannada Oota

METHI PEAS RICE ಮೇಥಿ ಪೀಸ್ ರೈಸ್

ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಈ ಸೊಪ್ಪಿನಿಂದ ಮಾಡುವ ರುಚಿಯಾದ, ಆರೋಗ್ಯಕರವಾದ ರೈಸ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.      1 ಲೋಟ ಜೀರಾ ಅಕ್ಕಿ ತೊಳೆದು 30 ನಿಮಿಷ ನೆನೆಸಿ ಸೋರಿ ಹಾಕಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಟೀ ಚಮಚ ಸೋಂಪು, 4 ಹಸಿ ಮೆಣಸಿನಕಾಯಿ, 1 …