Kannada Tindi Tinisu ಖಾರ ತಿನಿಸುಗಳು

THENGOLALU ತೇಂಗೊಳಲು

  ತೇಂಗೊಳಲು ಇನ್ನೊಂದು ಸಾಂಪ್ರಾದಾಯಿಕ ತಿನಿಸು. ಮಾಡೋದು ವಿಧಾನ ಸ್ವಲ್ಪ ಚಕ್ಕುಲಿ ಹಾಗೇನೆ!

ಮಾಡುವ ವಿಧಾನ:-
ದೋಸೆ/ತಿಂಡಿ ಅಕ್ಕಿ – 4 ಪಾವು
ಉದ್ದಿನ ಬೇಳೆ – 2 ಪಾವು

ತೇಂಗೊಳಲು ಮಾಡಲು:-
ಬೆಣ್ಣೆ – 2 ಚಮಚ
ಬಿಳಿ ಎಳ್ಳು – 3 ಚಮಚ
ಜೀರಿಗೆ – 2 ಚಮಚ
ಇಂಗು – 1 ಚಮಚ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು

    

ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ.

ಉದ್ದಿನ ಬೇಳೆಯನ್ನು ಒಣ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅಥವಾ ಅದನ್ನೂ ಕೂಡ ತೊಳೆದು ಬಟ್ಟೆಯ ಮೇಲೆ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ. ನಂತರ ಬಾಣಲೆಯಲ್ಲಿ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಉಗುರು ಬೆಚ್ಚಗೆ ಹುರಿಯಬೇಕು, ಉದ್ದಿನ ಬೇಳೆಯನ್ನೂ ಸಹ ಸಂಪಿಗೆ ಬಣ್ಣಕ್ಕೆ ಸ್ವಲ್ಪ ಹುರಿಯಬೇಕು. ನಂತರ ಎರಡೂ ಸೇರಿಸಿ flour mill ನಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಡಿ.

    

ತೇಂಗೊಳಲು ಮಾಡಲು, 2 ಚಮಚ ತಣ್ಣನೆ ಬೆಣ್ಣೆಯನ್ನು ಚೆನ್ನಾಗಿ ಕೌಯಿಂದ ಕಿವುಚಿ, 1 ಪಾವು ಹಿಟ್ಟಿಗೆ ಸೇರಿಸಿ, ಎಳ್ಳು, ಜೀರಿಗೆ, ಉಪ್ಪು, ಇಂಗು ಸೇರಿಸಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ಚಕ್ಕುಲಿ ಒರಳಿನಲ್ಲಿ ತೇಂಗೊಳಲು ಬಿಲ್ಲೆ ಹಾಕಿ, (ಬಿಲ್ಲೆ ಫೋಟೋ ಹಾಕಿದ್ದೇನೆ, ಮೂರು ರಂಧ್ರಗಳಿರುತ್ತೆ) ತೇಂಗೊಳಲು ಗುಂಡಗೆ ಒತ್ತಿ, ತುದಿಗಳನ್ನು ಸೇರಿಸಿ, ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿಯಿರಿ.

ಇದು ಕೂಡ ನಾವು ಗೋಕುಲಾಷ್ಟಮಿಯಲ್ಲಿ ಶ್ರೀ ಕೃಷ್ಣನ ನೈವೇದ್ಯಕ್ಕೆ ಮಾಡುವ ತಿಂಡಿ. ಖಾರಾ ಹಾಕೋಲ್ಲ.

ಧನ್ಯವಾದಗಳು.

Leave a Reply

Your email address will not be published.